fbpx
ದೇವರು

ಕೃಷ್ಣನ ಮೈಬಣ್ಣ ನೀಲಿ ಬಣ್ಣದಲ್ಲಿಯೇ ಯಾಕೆ ಅಂತಾ ಹೇಳೋ ಆಶ್ಚರ್ಯ ಹುಟ್ಟಿಸುವಂತಹ ಕಾರಣಗಳು ತಿಳ್ಕೊಳ್ಳಿ

ಕೃಷ್ಣನ ಮೈಬಣ್ಣ ನೀಲಿ ಬಣ್ಣದಲ್ಲಿಯೇ ಯಾಕಿದೆ ?  ಎನ್ನುವುದಕ್ಕೆ ಆಶ್ಚರ್ಯ ಹುಟ್ಟಿಸುವಂತಹ ಹತ್ತು ಕಾರಣಗಳು.

ಕೃಷ್ಣನು ಸರ್ವಶ್ರೇಷ್ಠ ಮತ್ತು ಸರ್ವೋಚ್ಚ ವ್ಯಕ್ತಿ. ಅವನ ಹೆಸರು ಕೃಷ್ಣ ಅಂದರೆ ಅತ್ಯಂತ ಆಕರ್ಷಿತವಾಗಿ ಕಾಣುವ ವ್ಯಕ್ತಿ. ನಮಗೆಲ್ಲ ಗೊತ್ತಿರುವ ಹಾಗೆ ಮೃದುತ್ವವಾದ ಸ್ವಭಾವವನ್ನು ಹೊಂದಿರುವ ದೇವರು.

 

 

ಆದರೆ ನಿಮಗೆ ಗೊತ್ತಾ ?  ಯಾಕೆ ಕೃಷ್ಣ ದೇವನು ನೀಲಿ ಬಣ್ಣದಲ್ಲಿಯೇ ಅವತರಿಸಿದ್ದಾನೆಂದು. ಬನ್ನಿ ಕೃಷ್ಣನು ಯಾಕೆ ನೀಲಿ ಬಣ್ಣದಲ್ಲಿಯೇ ಇದ್ದಾನೆಂದು ತಿಳಿಯೋಣ…

1.ಒಂದು ಸಿದ್ಧಾಂತದ ಪ್ರಕಾರ ವಿಷ್ಣು ಸದಾಕಾಲ ನೀರಿನಲ್ಲಿಯೇ ಇರುವ ಕಾರಣ ಅವನು ನೀಲಿ ಬಣ್ಣದಲ್ಲಿದ್ದಾನೆ ಆದ್ದರಿಂದ ಅವನ ಎಲ್ಲಾ ಅವತಾರಗಳು ಸಹ ನೀಲಿ ಬಣ್ಣದಲ್ಲಿಯೇ ಇವೆ.

 

 

ಹಿಂದೂ ಧರ್ಮದಲ್ಲಿ ಯಾವ ಯಾವ ವ್ಯಕ್ತಿಯೂ ಸಂಪೂರ್ಣವಾಗಿ  ಗಾಢವಾಗಿ ಅವನ ಪಾತ್ರದೊಳಗೆ ಮುಳುಗಿರುತ್ತಾರೊ ಅಂಥವರಿಗೆ ಕೆಟ್ಟ ಮತ್ತು ನಕಾರಾತ್ಮಕ ದುಷ್ಟಶಕ್ತಿಗಳನ್ನು ಎದುರಿಸುವ  ಶಕ್ತಿ ಇರುವುದೆಂದು ಚಿತ್ರಿಸಲಾಗಿದೆ. ನೀಲಿ ಬಣ್ಣದ ಚರ್ಮವನ್ನು  ಹೊಂದಿರುವಂತಹ ವ್ಯಕ್ತಿಗಳಿಗೆ ಇದು ಸಾಧ್ಯ ಎಂದು ಹೇಳಲಾಗಿದೆ.

2.ಇನ್ನೊಂದು ಸಿದ್ಧಾಂತದ ಪ್ರಕಾರ ವಿಷ್ಣು ಅಳವಡಿಸಿಕೊಂಡಿರುವುದು ಎರಡು ಕೂದಲುಗಳು. ಒಂದು ಕಪ್ಪು ಇನ್ನೊಂದು ಬಿಳಿ.

 

ತಾಯಿ ದೇವಕಿಯ ಗರ್ಭದಲ್ಲಿ ಇದ್ದ ಕಪ್ಪು ಕುದಲು ಮಾಯಾ ಜಾಲವಾಗಿ ರೋಹಿಣಿಯ ಗರ್ಭದೊಳಗೆ  ಬಂದು ಸೇರಿತ್ತು ಆದ್ದರಿoದ ಕಪ್ಪು ಕೂದಲಿನ  ಕಾರಣ  ಕೃಷ್ಣ  ನೀಲಿ ಬಣ್ಣದಲ್ಲಿ   ಹುಟ್ಟಿದ್ದನು  ಮತ್ತು  ಬಿಳಿ ಕೂದಲಿನಿಂದ ಬಲರಾಮ ಹುಟ್ಟಿದನು.

3. ಬೇರೆ ಸಿದ್ಧಾಂತದ ಪ್ರಕಾರ ಎಷ್ಟು ಸಾಧ್ಯವೋ ಅಷ್ಟು ನೀಲಿ ಬಣ್ಣವನ್ನು ಸೃಷ್ಟಿಕರ್ತನು ಪ್ರಕೃತಿಗೆ ಕೊಟ್ಟಿದ್ದಾನೆ. ಅದೇ ಆಕಾಶ ,ಸಾಗರಗಳು, ನದಿ, ಸಮುದ್ರಗಳು.

 

 

ಯಾವ ದೇವರಿಗೆ ಶಕ್ತಿ ಇರುವ ಗುಣಗಳು ಇವೆ , ದೃಢವಾದ ಸಂಕಲ್ಪ, ಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ, ಸಾಮರ್ಥ್ಯ, ಅಚಲವಾದ ಮನಸ್ಸು ಮತ್ತು  ತಮ್ಮ ಪಾತ್ರದಲ್ಲಿ ಗಾಢವಾಗಿ ಮುಳುಗುವುದು ಅಂತವರನ್ನು  ನೀಲಿ ಬಣ್ಣವೆೇ ಪ್ರತಿನಿಧಿಸುತ್ತದೆ.

4.ಭಗವಂತನಾದ ಶ್ರೀಕೃಷ್ಣನು ತನ್ನ ಜೀವನವನ್ನು ಮನುಷ್ಯತ್ವವನ್ನು ಮತ್ತು ಮನುಷ್ಯರನ್ನು ರಕ್ಷಿಸಲು ಮತ್ತು ದುಷ್ಟತೆಯನ್ನು  ನಾಶ ಮಾಡಲು ಈ ಭೂಮಿಯ ಮೇಲೆ ಅವತರಿಸಿದ್ದನು ಆದ್ದರಿಂದ ಅವನ ಬಣ್ಣ ನೀಲಿ ಎಂದು ಬಿಂಬಿತವಾಗಿದೆ.

 

5.ಸಂಸ್ಕೃತ ಪದ ಕೃಷ್ಣ ಎಂದರೆ ಕಪ್ಪು ,ಕತ್ತಲೆ ಅಥವಾ ಗಾಢವಾದ ನೀಲಿ  ಎಂದರ್ಥ ಆದ್ದರಿಂದ ಕೃಷ್ಣನಿಗೆ ಕೃಷ್ಣ ಎನ್ನುವ ಹೆಸರು ಬಂತು. ಇನ್ನು ಮೂರ್ತಿಗಳಲ್ಲಿ ಮತ್ತು  ಚಿತ್ರಗಳಲ್ಲಿ  ಕೃಷ್ಣನ ಮೈಬಣ್ಣವನ್ನು ನೀಲಿ ಬಣ್ಣದಲ್ಲಿಯೇ ಚಿತ್ರಿಸಲಾಗಿದೆ.

 

 

6.ಕೃಷ್ಣನನ್ನು ಸುಲಭವಾಗಿ ಗುರುತಿಸಬಹುದು. ಅವನು  ಇರುವ ಬಣ್ಣದ ಕಾರಣ. ಆದರೂ ಕೃಷ್ಣನ ಚರ್ಮದ ಮೈಬಣ್ಣ  ನೀಲಿಯಾಗಿದ್ದರೂ ಸಹ ಕೆಲವು ಕಪ್ಪು ಮತ್ತು ಗಾಢ ಬಣ್ಣದಲ್ಲಿ ಪ್ರತಿನಿಧಿಸುವ ನಿರ್ದಿಷ್ಟವಾದ ಮೂರ್ತಿಗಳು ಸಹ ಇವೆ.

( ಅವುಗಳಾದ  ದ್ವಾರಕಾಧೀಶ ಮೂರ್ತಿ, ಶ್ಯಾಮಲಾ ಮೂರ್ತಿ, ಶ್ರೀನಾಥನ ಮೂರ್ತಿ, ರಾಣಾ ಚೋಡರವರ ಮೂರ್ತಿ ). ಬೇರೆ  ಆಧುನಿಕ ಚಿತ್ರಗಳಲ್ಲಿ ಕೃಷ್ಣನನ್ನು ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿಯೇ ಚಿತ್ರಿಸಲಾಗಿದೆ.

 

 

7. ಬ್ರಹ್ಮ ಸಂಹಿತ ಪ್ರಕಾರ ಈ ರೀತಿಯಾಗಿ ವಿವರಿಸಲಾಗಿದೆ. ಕೃಷ್ಣನ ಮೈಬಣ್ಣ ನೀಲಿ ಮೋಡಗಳ ಜೊತೆಗೆ ಹೊಂದಾಣಿಕೆಯಾಗಿದೆ. ಆದ್ದರಿಂದ ನೀಲಿ ಬಣ್ಣವು ಸಹ ಕೃಷ್ಣನನ್ನೇ ಪ್ರತಿನಿಧಿಸುತ್ತದೆ. ಕೃಷ್ಣನನ್ನು  ನೀಲ ಮೇಘ ಶಾಮ ಎಂದು ಕರೆಯುವುದು ಸಹ ಅದಕ್ಕಾಗಿಯೇ.

 

 

8.ಹಿಂದೂ ಧರ್ಮದಲ್ಲಿ ಯಾರೂ ತಮ್ಮ ಸ್ವಭಾವದೊಳಗೆ ಸಂಪೂರ್ಣವಾಗಿ ಆಳವಾಗಿ ಮುಳುಗಿರುತ್ತಾರೆ ಮತ್ತು ದುಷ್ಟ ಶಕ್ತಿಗಳ ಜೊತೆಗೆ ಯುದ್ಧ ಮಾಡಿ ಗೆಲ್ಲುವ ಸಾಮರ್ಥ್ಯವನ್ನು  ಮತ್ತು ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುವವರನ್ನು  ಅಂಥವರನ್ನು ನೀಲಿ ಬಣ್ಣದಲ್ಲಿ ಚಿತ್ರಿಸಲಾಗಿದೆ.

 

 

9.ಶಿವ ದೇವನನ್ನು ಕೂಡ ತೆಳು  ನೀಲಿ ಬಣ್ಣದಲ್ಲಿಯೇ ಚಿತ್ರಿಸಲಾಗಿದೆ.ಶಿವನನ್ನು ನೀಲಕಂಠ ಎಂದು ಸಹ ಕರೆಯಲಾಗುತ್ತದೆ. ಶಿವನಿಗೆ ನೀಲಿ ಬಣ್ಣದ ಕಂಠವಿರುವ ಕಾರಣ ನೀಲಕಂಠ ಎಂದು ಕರೆಯಲಾಗುತ್ತದೆ.

 

 

ಶಿವನಿಗೆ ನೀಲಕಂಠ ಎನ್ನುವ ಹೆಸರು   ಹೇಗೆ ಬಂತೆಂದರೆ ಅವನು ದೇವತೆ ಮತ್ತು ಅಸುರರ ನಡುವೆ ಯುದ್ಧ ನಡೆಯುವಾಗ ದೇವತೆಗಳ ಪರವಾಗಿ  ಈಶ್ವರನು ವಿಷವನ್ನು ಕುಡಿದ ಕಾರಣ ಆ ವಿಷವೂ ಶಿವನ ಕಂಠದಲ್ಲಿಯೇ ಶೇಖರಣೆಯಾಗಿ ಅವನ ಕಂಠ ನೀಲಿ ಬಣ್ಣಕ್ಕೆ ತಿರುಗಿತು.

10. ಕೃಷ್ಣನ ಮೈಬಣ್ಣ ನೀಲಿ ಬಣ್ಣಕ್ಕೆ ತಿರುಗುವುದಕ್ಕೆ ಇನ್ನೊಂದು ಕಾರಣವನ್ನು ಕೃಷ್ಣನ ಪರಮ ಭಕ್ತರಾಗಿದ್ದ ರತ್ನ ಪ್ರಕಾಶ ರಾಘವ ಗೋಸ್ವಾಮಿಯವರು ತುಂಬಾ ಸುಂದರವಾಗಿ ಹೀಗೆ ವರ್ಣಿಸಿದ್ದಾರೆ. ರ್ವವರ್ಣ ಎಂದರೆ ಶ್ಯಾಮ ಬಣ್ಣ .

 

 

ಶ್ಯಾಮ ಬಣ್ಣವೂ  ತುಂಬಾ ವಿಶೇಷವಾದ ಬಣ್ಣವಾಗಿದ್ದು. ಅದು  ಸಂಯುಕ್ತವಾದದ್ದು.ನಾವು ನೋಡಿರಬಹುದು ನಾವು ಎಲ್ಲ ಬಣ್ಣಗಳನ್ನು ಮಿಶ್ರಣ ಮಾಡಿದರೆ ಅದು ಕಪ್ಪು ರೀತಿಯ ಬಣ್ಣಕ್ಕೆ ತಿರುಗುತ್ತದೆ. ಆದರೆ ಅದು ಕಪ್ಪು ಬಣ್ಣ ಆಗಿರುವುದಿಲ್ಲ.  ಅದಕ್ಕೆ ಶ್ಯಾಮ ಬಣ್ಣ ಎಂದು ಹೆಸರು. ಅದೇ ಶ್ಯಾಮ ವರ್ಣದ ಬಣ್ಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top