fbpx
ದೇವರು

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಈ ದೇವಸ್ಥಾನವನ್ನು ಕಟ್ಟಲು ನೂರಾ ಇಪ್ಪತ್ತು ವರ್ಷಗಳು ಬೇಕಾಯಿತoತೆ.

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಈ ದೇವಸ್ಥಾನವನ್ನು ಕಟ್ಟಲು ನೂರಾ

ಇಪ್ಪತ್ತು ವರ್ಷಗಳು ಬೇಕಾಯಿತoತೆ.

ವಿಭಿನ್ನತೆಯಲ್ಲಿ ಏಕತೆಯಲ್ಲಿರುವುದು ಭಾರತದಲ್ಲಿನ ವೈಶಿಷ್ಟ್ಯ. ಅದೆಷ್ಟೋ  ಮತಗಳು ಅದೆಷ್ಟೋ ಜಾತಿಗಳು  ಸಾವಿರಾರು ಭಾಷೆಗಳು ಇದ್ದರೂ ಸಹ ಒಬ್ಬರು ಮತ್ತೊಬ್ಬರ ಆಚಾರ ವಿಚಾರ ಗೌರವ ಸಂಪ್ರದಾಯಗಳನ್ನು  ಅಭಿಮಾನದಿಂದ ಗೌರವದಿಂದ ಕಾಣುವ ಸಂಪ್ರದಾಯ ನಮ್ಮ ಭಾರತ ದೇಶದ್ದು .

ಒಬ್ಬ ಮತಸ್ಥರು, ಮತಬಾಂಧವರು ಅವರ ಹಬ್ಬ ಹರಿದಿನಗಳಲ್ಲಿ ಇನ್ನೊಬ್ಬ ಮತಸ್ಥರನ್ನು ಹಬ್ಬಕ್ಕೆ ಆಹ್ವಾನಿಸುವುದು ನಮ್ಮ ದೇಶದ ವಿಶೇಷ.  ಇಂತಹ ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ ಅತ್ಯದ್ಭುತವಾದ ಶಿಲ್ಪಕಲೆಗೆ, ವೈಜ್ಞಾನಿಕತೆಗೆ, ಪ್ರತಿಭೆಗೆ ,ಆಧ್ಯಾತ್ಮಿಕತೆಗೆ, ಧಾರ್ಮಿಕ ರಹಸ್ಯಗಳಿಗೆ , ನಿದರ್ಶನ ನಮ್ಮ ಐತಿಹಾಸಿಕ ಪುರಾತನ ದೇಗುಲಗಳು.

ಅಂತಹ ದೇವಾಲಯಗಳು ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ನೆಲೆಸಿವೆ. ಅದರಲ್ಲಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುವುದಕ್ಕೆ ಸುಮಾರು ನೂರಾ ಇಪ್ಪತ್ತು ವರ್ಷಗಳ ಕಾಲ ಸಮಯವನ್ನು ತೆಗೆದುಕೊಂಡು ನಿರ್ಮಿಸಿದ್ದಾರೆ. ಆ ದೇಗುಲದಲ್ಲಿರುವ ಒಂದು ಕಂಬವು ದೇವಾಲಯದ ಮಧ್ಯದಲ್ಲಿ ತಾನೇ ತಾನಾಗಿ ಗಾಳಿಯಲ್ಲಿ ತಿರುಗುತ್ತಿತ್ತoತೆ. ಆ ದೇವಾಲಯ ಯಾವುದು ?  ಅದು ಎಲ್ಲಿದೆ  ? ಅದರ ಚರಿತ್ರೆಗಳೇನು ? ವಿಶೇಷತೆಗಳೇನು ? ಎಂಬುದನ್ನು ಈಗ ತಿಳಿಯೋಣ ಬನ್ನಿ ….

 

 

ನಮ್ಮ ಕರ್ನಾಟಕದ ರಾಜ್ಯದಲ್ಲೇ ಇರುವ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಹಳೇಬೀಡು ಶಿಲ್ಪಕಲೆಗಳ ತವರೂರಾಗಿದೆ. ಇದು ಮೈಸೂರಿನಿಂದ ಸುಮಾರು ನೂರಾ ನಲವತ್ತೊoಬತ್ತು ಕಿಲೋಮೀಟರ್ ದೂರದಲ್ಲಿ ಮತ್ತು ಹಾಸನ ಜಿಲ್ಲೆಯಿಂದ ಮೂವತ್ತೊoದು ಕಿಲೋಮೀಟರ್ ದೂರದಲ್ಲಿದೆ.

ಈ ದೇವಾಲಯವೇ  ಹೊಯ್ಸಳೇಶ್ವರ ದೇವಾಲಯ. ಇಲ್ಲಿ ಹರಿಹರ ಇಬ್ಬರೂ ಪ್ರಧಾನವಾಗಿ ಭಕ್ತಕೋಟಿಯಿಂದ ಪೂಜಿಸಲ್ಪಡುವ ದೇವರುಗಳು. ಹಳೇಬೀಡು ಹತ್ತರಿಂದ ಹದಿಮೂರನೇ ಶತಮಾನಗಳಲ್ಲಿ ಹೊಯ್ಸಳ ರಾಜ್ಯಕ್ಕೆ ರಾಜಧಾನಿಯಾಗಿ ದ್ವಾರಸಮುದ್ರ ಎಂಬ ಹೆಸರಿನಿಂದ ಖ್ಯಾತಿ  ಪಡೆದ ಪ್ರಾಂತ್ಯವಾಗಿತ್ತು. ಅದೇ ಸಮಯದಲ್ಲಿ ಆ ದೇಗುಲದ ನಿರ್ಮಾಣವಾಯಿತೆಂದು ಹೇಳಲಾಗುತ್ತದೆ.

 

 

ಈ ದೇವಾಲಯವನ್ನು ವಿಷ್ಣುವರ್ಧನ ಎಂಬ ರಾಜನು  ನಿರ್ಮಿಸಿದ್ದನು ಎಂದು ಸ್ಥಳ ಪುರಾಣಗಳು ಹೇಳುತ್ತವೆ. ಹಳೇಬೀಡು ಶಿಲ್ಪಕಲೆಯ ನೆಲೆಬೀಡು. ಆದರೆ ದೆಹಲಿಯ ಸುಲ್ತಾನರ ಅನೇಕ ಘೋರ ದಾಳಿಗಳಿಂದ ಹಳೇಬೀಡು ಛಿದ್ರಛಿದ್ರವಾಗಿ ಶಿಥಿಲವಾಗಿ ಉಳಿದುಬಿಟ್ಟಿತ್ತು. ಅದಕ್ಕೇ ಅದನ್ನು ಹಳೇಬೀಡು ಎಂಬ ಹೆಸರಿನಿಂದ ಅಂದರೆ ಇದರ ಅರ್ಥ ಶಿಥಿಲವಾಗಿರುವ ನಗರ ಎಂದು ಹಳೇಬೀಡು  ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು ನೂರಾ ಇಪ್ಪತ್ತು ವರ್ಷಗಳ ಕಾಲ ನಿರ್ಮಾಣ ಮಾಡಿದ್ದಾರೆಂದು ಹೇಳಲಾಗುತ್ತದೆ.

ಈ ದೇವಾಲಯದಲ್ಲಿ ಎರಡು ಶಿವಲಿಂಗವನ್ನು  ಪ್ರತಿಷ್ಠಾಪಿಸಲಾಗಿದೆ. ಒಂದು ಶಿವಲಿಂಗವನ್ನು ರಾಜನಾದ ಹೊಯ್ಸಳೇಶ್ವರನ ಹೆಸರಿನಲ್ಲಿ ಖ್ಯಾತಿಯನ್ನು ಪಡೆದಿದೆ.  ಇನ್ನೊಂದು ಶಿವಲಿಂಗವು ರಾಜನ ಪಟ್ಟದ ಅರಸಿ ಅಂದರೆ ರಾಣಿ ಶಾಂತಲೆಯ ಹೆಸರಿನಲ್ಲಿ ಶಾಂತಳೇಶ್ವರನಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈಶ್ವರನ ಶಿವಲಿಂಗಗಳ ಮುಂದೆ ಎರಡು ಮಹಾ ನಂದಿಯನ್ನು ಸಹ ಸ್ಥಾಪಿಸಲಾಗಿದೆ. ಅದು ಸಂಪೂರ್ಣ ಭಾರತ ದೇಶದಲ್ಲಿಯೇ ಅತಿ ದೊಡ್ಡ ನoದಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಹೊಯ್ಸಳೇಶ್ವರ ದೇವಾಲಯ ಎಂದರೆ ಸಾಕು ಕಣ್ಮನ ಸೆಳೆಯುತ್ತದೆ. ಇಲ್ಲಿನ ದೇಗುಲದಲ್ಲಿ ಪುರಾಣವನ್ನು ತಿಳಿಸಿಕೊಡುವ ಶಿಲ್ಪಕಲಾಕೃತಿಗಳು ಹೊಯ್ಸಳ ಶಿಲ್ಪಕಲೆಗೆ ಪ್ರತ್ಯಕ್ಷ ನಿದರ್ಶನ ಎಂದೂ ಸಹ ಹೇಳುತ್ತಾರೆ .

 

 

ಈ ದೇಗುಲದ ಗೋಡೆ ಗೋಡೆಗಳ ಮೇಲೆಯೂ ಸುತ್ತಲೂ ಸಹ ಶಿಲ್ಪಕಲೆಯ ಕೆತ್ತನೆಗಳು ಶಿಲ್ಪಗಳು ಎಂಥವರನ್ನಾದರೂ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಇಲ್ಲಿ ಕೆತ್ತಿರುವ ಶಿಲ್ಪಗಳ ಮೇಲಿನ ನಾಟ್ಯ ಭಂಗಿಗಳನ್ನು ವಿಷ್ಣುವರ್ಧನನ ಪಟ್ಟದ ರಾಣಿಯಾಗಿ ಇದ್ದ ಶಾಂತಲೆಯ ಅಭಿರುಚಿಯ ಮೇರೆಗೆ ನಿರ್ಮಿಸಿದಂತೆ ಕಂಡು ಬರುತ್ತದೆ. ಯಾಕೆಂದರೆ ಶಾಂತಲೆಯ ಪ್ರಸಿದ್ಧ ಭರತನಾಟ್ಯ ಕಲಾವಿದೆ.ಅಷ್ಟೇ ಅಲ್ಲದೆ ಆಕೆ ಸಕಲ ಕಲಾವಲ್ಲಭೆ ಯಾಗಿದ್ದಾಳಂತೆ. ಶಾಂತಲೆ ಅತ್ಯುತ್ತಮ ರಾಣಿ ಎಂದು ಸಹ ಹೆಸರು ಪಡೆದಿರುವುದರ ಜೊತೆಗೆ ಸಂಗೀತ, ಸಾಹಿತ್ಯ, ನೃತ್ಯಗಳಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದಳು. ಇಂಥ ಅಮೋಘ ಅಭಿರುಚಿಯಿಂದ ಕೂಡಿರುವ ಸುಂದರ ಕಲಾ ಶಿಲ್ಪಗಳ ಸುಂದರವಾದ ಶಿಲ್ಪ ಕಲೆಯ ನೆಲೆಯಾಗಿದೆ ಈ ಹಳೇಬೀಡು .

 

 

ಬೇಲೂರು ಮೊದಲು ಹೊಯ್ಸಳರ ರಾಜಧಾನಿಯಾಗಿದ್ದು  ನಂತರ ಅದನ್ನು ಹಳೇಬೀಡಿಗೆ ಅಂದರೆ ದ್ವಾರ ಸಮುದ್ರ, ದೂರ ಸಮುದ್ರ ಎಂದು ಕರೆಸಿಕೊಳ್ಳುವ ಅಲ್ಲಿನ ಆ ನಗರಕ್ಕೆ ಬದಲಾಯಿತಂತೆ. ಬೇಲೂರಿನಲ್ಲಿ ವೈಷ್ಣವ ದೇವಾಲಯ ನಿರ್ಮಾಣವಾಗಿದ್ದರೆ, ಹಳೇಬೀಡಿನಲ್ಲಿ ಶಿವಾಲಯವನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬರುತ್ತದೆ.

ಬೇಲೂರಿನ ಚನ್ನಕೇಶವ ಸ್ವಾಮಿಯ ದೇವಾಲಯದ ಮಧ್ಯದಲ್ಲಿ ನರಸಿಂಹಸ್ವಾಮಿಯ ಕಂಬ ಇರುವುದೆಂದು ತಿಳಿದು ಬರುತ್ತದೆ. ಇದರ ಮೇಲೆ ರಾಮಾಯಣ, ಮಹಾಭಾರತ, ಭಾಗವತ ಪುರಾಣ, ಹೀಗೆ ಅನೇಕ ಪುಣ್ಯ ಕಥೆಗಳ ಕೆತ್ತನೆಗಳನ್ನು ಇಲ್ಲಿ ಕೆತ್ತಲಾಗಿದೆ. ಆ ಕಂಬವೂ ಅಂದಿನ ಕಾಲದಲ್ಲಿಯೇ ತಂತಾನೇ ಗಾಳಿಗೆ ತಿರುಗುತ್ತಿತ್ತು. ಅದನ್ನು ಮುಂಚೆ ಅಂದರೆ ಇತ್ತೀಚಿನ ಕಾಲದಲ್ಲಿ ನಿಲ್ಲಿಸಲಾಗಿದೆ. ಅದನ್ನು ಪುರಾತತ್ವ ಶಾಸ್ತ್ರದ   ಸಂಸ್ಥೆಯವರು ನಿಲ್ಲಿಸಿದ್ದಾರೆಂದು ಚಾರಿತ್ರಿಕ ಕತೆಗಳಲ್ಲಿ ತಿಳಿದು ಬರುತ್ತದೆ.

ಈ ತಂತ್ರಜ್ಞಾನವನ್ನು ಸುಮಾರು ಹನ್ನೊಂದು ಮತ್ತು ಹದಿಮೂರನೇ ಶತಮಾನದಲ್ಲಿಯೇ ಉಪಯೋಗಿಸಿದ್ದು. ನಮ್ಮ ಪೂರ್ವಿಕರ ಅಮೋಘ ಸಾಧನೆಗೆ ಒಂದು ಕೃತಜ್ಞತೆ ಸಲ್ಲಿಸಬೇಕು . ಇಲ್ಲಿನ ಶಿಲ್ಪಕಲೆಗಳು ನಿತ್ಯನವೀನ ಸದಾಕಾಲ ನಿತ್ಯ ವಿನೂತನವಾಗಿಯೇ ಉಳಿಯುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top