fbpx
ಕನ್ನಡ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ಈ ಕ್ಯಾಬ್’ನಲ್ಲಿ ಪ್ರಯಾಣಿಸಿದರೆ 50% ಡಿಸ್ಕೌಂಟ್ ಸಿಗುತ್ತೆ?

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ಈ ಕ್ಯಾಬ್’ನಲ್ಲಿ ಪ್ರಯಾಣಿಸಿದರೆ 50% ಡಿಸ್ಕೌಂಟ್ ಸಿಗುತ್ತೆ?

 

 

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ತನ್ನ ಟ್ಯಾಕ್ಸಿಯಲ್ಲಿ ಕನ್ನಡ ಮಾತನಾಡಿದರೆ 50% ಡಿಸ್ಕೌಂಟ್ ಕೊಡಲು ಕನ್ನಡಪ್ರೇಮಿ ಕ್ಯಾಬ್ ಡ್ರೈವರ್ ನಿರ್ಧರಿಸಿದ್ದಾನೆ…ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡ ಕನ್ನಡ ಮಾತನಾಡುವ ಜನರು ತುಂಬಾ ಕಡಿಮೆಯಾಗುತ್ತಿದ್ದಾರೆ. ಮುಂದೆ ಕನ್ನಡ ಮಾತನಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸಬೇಕು ಎಂದು ಇಲ್ಲೊಬ್ಬ ಕ್ಯಾಬ್ ಡ್ರೈವರ್ ತನ್ನ ಟ್ಯಾಕ್ಸಿಯಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ಕನ್ನಡದಲ್ಲಿ ಮಾತನಾಡಿದರೆ 50% ಡಿಸ್ಕೌಂಟ್ ನೀಡಲು ಮುಂದಾಗಿ ತನ್ನ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಿದ್ದಾನೆ..

 

 

ಕನ್ನಡವನ್ನು ಕನ್ನಡೇತರ ಜನರು ಕಲಿತುಕೊಳ್ಳಲಿ ಎಂದು ಈ ಪ್ಲಾನ್ ಮಾಡಿದ್ದು ಇವರ ಟ್ಯಾಕ್ಸಿಯಲ್ಲಿ ಕನ್ನಡೇತರ ಜನರು ಕನ್ನಡ ಮಾತನಾಡಲು ಪ್ರಯತ್ನಪಟ್ಟರೆ ಅವರ ಟ್ರಿಪ್ ನಲ್ಲಾಗಿರುವ ಬಿಲ್ ನಲ್ಲಿ 5% ಡಿಸ್ಕೌಂಟ್ ಮತ್ತು ಕ್ಯಾಬ್ ನಲ್ಲಿ ಹಾಕುವ ಕನ್ನಡ ಹಾಡುಗಳನ್ನು ಬದಲಾವಣೆ ಮಾಡಿ ಎಂದು ಕೇಳದೆ ಕನ್ನಡ ಹಾಡುಗಳನ್ನೇ ಕೇಳಿದರೆ ಅದಕ್ಕೂ 5% ಡಿಸ್ಕೌಂಟ್ ಕೊಡಲಿದ್ದಾರೆ.ಒಟ್ಟು 10% ಡಿಸ್ಕೌಂಟ್ ಅನ್ನು ಕಳೆದ ಕೆಲವು ತಿಂಗಳುಗಳಿಂದ ಕೊಡುತ್ತಾ ಬಂದಿದ್ದರು…

 

 

ಈಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ತನ್ನ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಕನ್ನಡೇತರ ಜನರು ಕನ್ನಡವನ್ನು ಬಳಸಿದರೆ,, ಕನ್ನಡದಲ್ಲಿ ಮಾತನಾಡೋಕೆ ಪ್ರಯತ್ನ ಪಟ್ಟರೆ ಅನಂತವರಿಗೆ ಬರೋಬ್ಬರಿ 50%ಡಿಸ್ಕೌಂಟ್ ಕೊಡಲು ನಿರ್ಧರಿಸಿದ್ದಾರೆ. ಡಿಸ್ಕೌಂಟ್ ಕೊಡುವುದಲ್ಲದೆ ಅಂತಹವರಿಗೆ ಕನ್ನಡ ಕಲಿತುಕೊಳ್ಳಲು ಒಂದು ಕೈಪಿಡಿಯನ್ನ ಕೂಡ ನೀಡುತ್ತಾರೆ. ಇದು ಕನ್ನಡ ಬಾರದವರಿಗೆ ತಿಳಿಯಲಿ ಎಂದು ಇಂಗ್ಲಿಷ್ನಲ್ಲಿ ಈ ವಿಚಾರವನ್ನು ಬರೆದ ಎರಡು ಕರಪತ್ರಗಳನ್ನು ಮಾಡಿಸಿ ಹಿಂಬದಿಯ ಸೀಟ್ ಗೆ ತೂಗುಹಾಕಿದ್ದಾರೆ..

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top