fbpx
ಆರೋಗ್ಯ

ಎಲ್ಲ ಮರೆತೋಗಿದೆ ಏನು ನೆನಪಿಲ್ಲ ಅಂತಾ ದಿನ ಗೋಳಾಡೋರು ಈ 5 ಮದ್ದು ಬಳ್ಸ್ಕೊಂಡು ಸರಿ ಮಾಡ್ಕೊಳ್ಳಿ

ಎಲ್ಲ ಮರೆತೋಗಿದೆ ಏನು ನೆನಪಿಲ್ಲ ಅಂತಾ ದಿನ ಗೋಳಾಡೋರು ಈ 5 ಮದ್ದು ಬಳ್ಸ್ಕೊಂಡು ಸರಿ ಮಾಡ್ಕೊಳ್ಳಿ

 

 

ಮರೆವಿನ ಕಾಯಿಲೆ ನಾವು ಈಗ ಕೇಳುವಂತ ಸಾಮಾನ್ಯ ಸಮಸ್ಯೆ ಇದಕ್ಕೆ ಮುಖ್ಯ ಕಾರಣ ಸ್ಟ್ರೆಸ್,ಡಿಪ್ರೆಶನ್ ,ನ್ಯೂಟ್ರಿಷನ್ ಕೊರತೆ,ಥೈರಾಯಿಡ್ ಸಮಸ್ಯೆ,ಮಧ್ಯಪಾನ ಸೇವನೆ ಮುಂತಾದವು ನೀವು ಮರೆವಿನ ರೋಗದಿಂದ ಬಳಲುತ್ತಿದ್ದೀರಾ? ,ಬೇಜಾರ್ ಮಾಡ್ಕೋಬೇಡಿ ಇಲ್ಲಿ ನಿಮಗೆ ನಾವು ಪರಿಹಾರ ಕೊಡ್ತೀವಿ ಅದಕ್ಕೆ ಮನೆ ಮದ್ದನ್ನು ಹೇಳ್ತಿವಿ.

ಪರಿಹಾರ ಕ್ರಮ :

೧.ಆರೋಗ್ಯಕರ ಆಹಾರವನ್ನು ತಿನ್ನಿ:

 

ಆರೋಗ್ಯಕರ ಆಹಾರ ಅಂದ್ರೆ ಹಣ್ಣು,ತರಕಾರಿ,ದವಸ ಧಾನ್ಯ,ಮೀನು ,ಮೊಟ್ಟೆ ಮುಂತಾದವು.
ಆದಷ್ಟು ಎಣ್ಣಿ ಯಿಂದ ಮಾಡಿದ ಆಹಾರ ,ಮಧ್ಯ ಸೇವನೆ ಮತ್ತು ಹೆಚ್ಚು ಕೊಬ್ಬಿನ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ.
ಈ ಆರೋಗ್ಯಕರ ಆಹಾರಗಳು ನಿಮ್ಮ ಮರೆವನ್ನು ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.

೨.ಯೋಗ ಮತ್ತು ವ್ಯಾಯಾಮ ಮಾಡಿ:

 

 

ದಿನವೂ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ರಕ್ತಸಂಚಾರ ಸುಲಭವಾಗುವುದಲ್ಲದೆ,ನಿಮ್ಮ ಮನಸು ಮತ್ತು ಆರೋಗ್ಯ ಸುಧಾರಿಸುವುದರ ಜೊತೆ ,ನಿಮ್ಮ ಮೆದುಳು ಶಾಂತವಾಗಿ ಸಂತೋಷದಿಂದ ಇರುವಂತೆ ಮಾಡುತ್ತದೆ.

೩.ಚೆನ್ನಾಗಿ ನಿದ್ದೆಮಾಡಿ:

 

 

ನಮ್ಮ ದೇಹದಂತೆ ನಿಮ್ಮ ಮೆದುಳಿಗೂ ವಿಶ್ರಾಂತಿ ಬಹಳ ಅಗತ್ಯ.ಮೆದುಳು ಇಡೀ ದಿನ ಕೆಲಸ ಮಾಡುತ್ತಾ ಇರುತ್ತದೆ, ಹೆಚ್ಚಿನ ಜನರ ಮರೆವಿನ ರೋಗಕ್ಕೆ ಮೂಲ ಕಾರಣ ಇದು ಆದಷ್ಟು ಚೆನ್ನಾಗಿ ಮಲಗಲು ಪ್ರಯತ್ನ ಮಾಡಿ ,ನಿಮ್ಮ ದೇಹ ಮತ್ತು ಮೆದುಳಿನ ಅರೋಗ್ಯ ನಿಮ್ಮ ನಿದ್ಧೆ ಯಲ್ಲಿದೆ.

೪.ಆದಷ್ಟು ಸಮಯವನ್ನು ನಿಮ್ಮ ಫ್ರೆಂಡ್ಸ್ ಅಥವಾ ನಿಮ್ಮ ಮನೆಯವರ ಜೊತೆ ಕಳೆಯಿರಿ:

 

 

ಕೆಲವರು ಅವರ ಒಂಟಿತನದಿಂದ ಡಿಪ್ರೆಶನ್ ಗೆ ಹೋಗಿ ,ಎಲ್ಲವನ್ನು ಮರೆಯಲು ಪ್ರಾರಂಭಿಸುತ್ತಾರೆ ಅದರಿಂದ ಆದಷ್ಟು ನಿಮ್ಮ ಸಮಯವನ್ನು ನಿಮ್ಮ ಪರಿವಾರದೊಂದಿಗೆ ಕಳೆಯುವುದರಿಂದ ನಿಮ್ಮ ಒಂಟಿತನ ,ಮರೆವಿನ ಕಾಯಿಲೆ ಎಲ್ಲ ಹೋಗಿ ನೀವು ಅರೋಗ್ಯಕರ ಜೀವನವನ್ನು ನಡೆಸಬಹುದು.

೫.ಒಮೇಗಾ ಇರುವಂತ ಆಹಾರ ಸೇವಿಸಿ:

ಒಮೇಗಾ ಆಹಾರ ನಿಮ್ಮ ಬುದ್ದಿ ಶಕ್ತಿ ಹೆಚ್ಚಿಸುವುದಲ್ಲದೆ,ಇಂತಹ ಮರೆವಿನ ಕಾಯಿಲೆಗೆ ರಾಮಬಾಣ

ನಿಮ್ಮ ಮರೆವಿನ ಕಾಯಿಲೆಗೆ ಮನೆಮದ್ದು:

1. ಬಾದಾಮಿ

ಬಾದಾಮಿಗಳು ಬುದ್ದಿ ಶಕ್ತಿ ಮತ್ತು ಮೆದುಳಿನ ಸಾಮರ್ಥ್ಯವನ್ನು ಸುಧಾರಿಸಲು ಅತ್ಯುತ್ತಮ ಆಯುರ್ವೇದದ ಪರಿಹಾರವಾಗಿದೆ, ಬಾದಾಮಿ ಒಮೆಗಾ -3 ಸಮೃದ್ಧವಾಗಿವೆ ಮತ್ತು ನಿಮ್ಮ ಕಣ್ಣುಗಳಿಗೆ ಕೂಡ ಒಳ್ಳೆಯದು.

 

 

1.ರಾತ್ರಿ ನೀರಿನಲ್ಲಿ 5 ರಿಂದ 10 ಬಾದಾಮಿಗಳನ್ನು ನೆನೆಸಿ.
2.ಮರುದಿನ ಬೆಳಿಗ್ಗೆ ಬಾದಾಮಿ ಸಿಪ್ಪೆಯನ್ನು ತೆಗೆದು ರುಬ್ಬಿಕೊಳ್ಳಿ .
3. ರುಬ್ಬಿದ ಬಾದಾಮಿ ಪೇಸ್ಟ್ಅನ್ನು ಹಾಲಿನೊಂದಿಗೆ ಸೇರಿಸಿ ಕುಡಿಯಿರಿ
4.ರುಚಿಗೆ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸಬಹುದು.
ದಿನವೂ ಇದನ್ನು ಕುಡಿಯುದರಿಂದ ನಿಮ್ಮ ಮರೆವಿನ ಕಾಯಿಲೆ ಕ್ರಮೇಣ ಹೋಗುತ್ತದೆ

2. ಮೀನಿನ ಎಣ್ಣೆ:

 

 

ಮೀನಿನ ಎಣ್ಣೆಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಿನ ಮಟ್ಟದಲ್ಲಿರುವುದರಿಂದ, ಮೀನು ಮತ್ತು ಮೀನಿನ ಎಣ್ಣೆ ಮೆಮೊರಿ ಸುಧಾರಣೆ ಮತ್ತು ಅರಿವಿನ ಕ್ಷೀಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ನಿಮ್ಮ ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಿ.

3. ತೆಂಗಿನ ಎಣ್ಣೆ:

 

 

ತೆಂಗಿನ ಎಣ್ಣೆ ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಆಲ್ಝೈಮರ್ನ ಕಾಯಿಲೆ,ಬುದ್ಧಿಮಾಂದ್ಯತೆ ತಡೆಯಲು ಸಹಾಯ ಮಾಡುತ್ತದೆ ,ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಒಂದು ಚಮಚ ಸಾವಯವ ,ಕಚ್ಚಾ ತೆಂಗಿನ ಎಣ್ಣೆ ಸೇವಿಸಿ.

4. ದಾಲ್ಚಿನ್ನಿ ಮತ್ತು ಜೇನುತುಪ್ಪ:

ನರಗಳ ಒತ್ತಡ ಮತ್ತು ಮೆಮೊರಿ ಸುಧಾರಣೆಗೆ ದಾಲ್ಚಿನ್ನಿ ಮತ್ತು ಜೇನುತುಪ್ಪವು ಒಳ್ಳೆಯದು. ಒಂದು ಸಂಶೋಧನೆಯ ಪ್ರಕಾರ ದಾಲ್ಚಿನ್ನಿ ವಾಸನೆ ಮೆಮೊರಿ ಮತ್ತು ನೆನೆಪಿನ ಶಕ್ತಿ ಸಮಸ್ಯೆ ಯನ್ನು ತಡೆಗಟ್ಟುತ್ತದೆ ಎಂದು ತಿಳಿದು ಬಂದಿದೆ ಜೊತೆಗೆ ನಿದ್ರೆಗೆ ಹೋಗುವ ಮೊದಲು ರಾತ್ರಿ ಹೊತ್ತು ಜೇನುತುಪ್ಪವನ್ನು ತಿನ್ನುವುದು ಒತ್ತಡ ಕಡಿಮೆ ಮಾಡುತ್ತದೆ, ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ದಾಲ್ಚಿನ್ನಿ ಪುಡಿ ಸೇರಿಸಿ ದಿನ ರಾತ್ರಿ ತಿನ್ನುವುದರಿಂದ ನಿಮ್ಮ ಮರೆವಿನ ಕಾಯಿಲೆ ದೂರ ವಾಗುತ್ತದೆ

5. ಒಂದೆಲಗದ ಎಲೆ:

 

 

ಇದನ್ನು ಬ್ರಾಹ್ಮಿ ಅಥವಾ ಸರಸ್ವತಿ ಎಲೆ ಎಂದೂ ಕರೆಯುವುದುಂಟು. ಮೆದುಳಿನ ಆರೋಗ್ಯ ವರ್ಧನೆಗೆ ಬಹಳ ಸಹಕಾರಿಯಾದ ಇದನ್ನು ಚಿಕ್ಕ ಮಕ್ಕಳಿಂದಲೂ ಸೇವನೆಗೆ ಕೊಡುವುದು ಒಳ್ಳೆಯದು. ಸೆಂಟ್ರಲ್ ನರ್ವಸ್ ಸಿಸ್ಟಮ್ (CNS)ನ ಬೆಳವಣಿಗೆಗೆ ಇದು ಬಹಳ ಸಹಕಾರಿ.
ಒಂದೆಲಗದ ಎಲೆಯನ್ನು ಆಯುರ್ವೇದ ಮೆಡಿಸಿನ್ ಆಗಿ ಬಳಸಲಾಗುತಿತ್ತು , ದಿನವೂ ಒಂದೆರಡು ಎಲೆಯನ್ನು ತಿನ್ನುವುದರಿಂದ ನಿಮ್ಮ ಅರೋಗ್ಯ ಚೇತರಿಕೆ ಆಗುವುದರ ಜೊತೆ ನಿಮ್ಮ ನೆನೆಪಿನ ಶಕ್ತಿ ಸಮಸ್ಯೆಯನ್ನು ತಡೆಗಟ್ಟುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top