fbpx
ಕನ್ನಡ

“ಪ್ರತ್ಯೇಕ ರಾಜ್ಯ ದ್ವಜವನ್ನು ಹೊಂದುವುದು 6 ಕೋಟಿ ಕನ್ನಡಿಗರ ಕನಸು”-ಸಿ.ಎಂ.ಸಿದ್ದರಾಮಯ್ಯ.

“ಪ್ರತ್ಯೇಕ ರಾಜ್ಯ ದ್ವಜವನ್ನು ಹೊಂದುವುದು 6 ಕೋಟಿ ಕನ್ನಡಿಗರ ಕನಸು”-ಸಿ.ಎಂ.ಸಿದ್ದರಾಮಯ್ಯ..

 

 

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶನಿವಾರ ಕರ್ನಾಟಕ ತನ್ನದೇ ಆದ ಪ್ರತ್ಯೇಕ ರಾಜ್ಯ ಧ್ವಜವನ್ನು ಹೊಂದಿರಬೇಕು ಎಂಬ ವಿಷಯವನ್ನು ಪುನರುಚ್ಚರಿಸಿದರು..ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜವನ್ನು ಹೊಂದುವುದು ಆರು ಕೋಟಿಗೂ ಹೆಚ್ಚು ಕನ್ನಡಿಗರ ಕನಸಾಗಿದೆ ಎಂದು ಅವರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟಿಸಿದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು..

 

 

“1966 ರಿಂದ ಕರ್ನಾಟಕ ತನ್ನದೇ ಧ್ವಜವನ್ನು ಹೊಂದಿದೆ ಕೆಂಪು, ಹಳದಿ ವರ್ಣದ ಧ್ವಜ ಈಗಾಗಲೇ ಕನ್ನಡ ಧ್ವಜವಾಗಿ ಬಳಕೆಯಾಗುತ್ತಿದೆ..,ಅಲ್ಲದೆ ಭಾರತೀಯ ಸಂವಿಧಾನವು ಯಾವುದೇ ರಾಜ್ಯಗಳಿಗೆ ಪ್ರತ್ಯೇಕ ರಾಜ್ಯ ದ್ವಜವನ್ನು ಹೊಂದುವುದನ್ನ ವಿರೋಧಿಸುವುದಿಲ್ಲ.ಹಾಗಾಗಿ ಕರ್ನಾಟಕ ತನ್ನದೇ ಆದ ಪ್ರತ್ಯೇಕ ನಾಡಧ್ವಜವನ್ನು ಹೊಂದಬೇಕು.” ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು.

 

 

“ಮೆಟ್ರೋ ಮತ್ತು ಹಿಂದಿ ಹೇರಿಕೆಯ ವಿಚಾರಕ್ಕೆ ಬಂದರೆ ತಮಿಳುನಾಡು ಮತ್ತು ಕೇರಳ ಎರಡು ಭಾಷೆಯ ನೀತಿಯನ್ನು ಅನುಸರಿಸುತ್ತವೆ, ಆದರೆ ಕರ್ನಾಟಕದಲ್ಲಿ ಮಾತ್ರ ಮೂರು ಭಾಷೆಯ ನೀತಿಯನ್ನು ಏಕೆ ವಿಧಿಸಬೇಕು? ನಾವು ಅದನ್ನು ಸ್ವೀಕರಿಸುವುದಿಲ್ಲ..ಹಾಗಾಗಿ ಮೆಟ್ರೋದಲ್ಲಿ ಹಿಂದಿಯನ್ನು ಕೈಬಿಡುವುದಾಗಿ ಕೇಂದ್ರಕ್ಕೆ ಪಾತ್ರ ಬರೆದಿದ್ದೆ” ಎಂದು ಅವರು ಹೇಳಿದರು..

 

 

“ಪ್ರತ್ಯೇಕ ಕನ್ನಡ ದ್ವಜವನ್ನು ಹೊಂದುವುದರಿಂದ ಭಾರತೀಯ ಏಕತೆಗೆ ಧಕ್ಕೆಯುಂಟಾಗುತ್ತದೆ ಎಂದು ಕೆಲವರು ವಿರೋಧಿಸಿದರು ಆದರೆ ಈ ವಾದ ಅಪ್ರಬುದ್ಧ ಮತ್ತು ಹುರುಳಿಲ್ಲದ ವಾದವಾಗಿದೆ.ಜರ್ಮನಿ, ಅಮೆರಿಕ ಅಥವಾ ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ರಾಜ್ಯಗಳು ತಮ್ಮದೇ ಪ್ರತ್ಯೇಕ ಧ್ವಜಗಳನ್ನು ಹೊಂದಿವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಯಾವುದೇ ರೀತಿ ಭಂಗವಾಗಿಲ್ಲ.ರಾಜ್ಯದಲ್ಲಿ ಈಗಾಗಲೇ ಅಧಿಕೃತವಾಗಿ ನಾಡಗೀತೆ ಇದೆ. ಅದೇ ರೀತಿ ನಾಡಧ್ವಜ ಇದ್ದರೆ ತಪ್ಪೇನು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top