fbpx
ಮನೋರಂಜನೆ

ಮನೆಯಿಂದ ಹೊರಹೋಗಲು ಮೊದಲ ವಾರವೇ ನಾಮಿನೇಟ್ ಆದ ಕನ್ನಡ ಉಚ್ಚಾರಣೆಯಿಂದ ಟ್ರೊಲ್ ಗೆ ಒಳಗಾಗಿರುವ “ನಿವೇದಿತಾ ಗೌಡ”

ಮನೆಯಿಂದ ಹೊರಹೋಗಲು ಮೊದಲ ವಾರವೇ ನಾಮಿನೇಟ್ ಆದ ಕನ್ನಡ ಉಚ್ಚಾರಣೆಯಿಂದ ಟ್ರೊಲ್ ಗೆ ಒಳಗಾಗಿರುವ “ನಿವೇದಿತಾ ಗೌಡ”

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಎಂದಿನಂತೆ ಪ್ರತಿ ವಾರ ಮನೆಯಿಂದ ಹೊರ ಹೋಗಲು ನಡೆಸುವ ನಾಮಿನೇಟ್ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯರು ಮಾಡಿರುವ ವೋಟ್ ನ ಪ್ರಕಾರ ಎಲ್ಲ ಟ್ರೊಲ್ ಪೇಜ್ ಗಳಿಗೆ ಹಬ್ಬವಾಗಿದ್ದ ನಿವೇದಿತಾ ಗೌಡ ಕೂಡ ಆಯ್ಕೆಯಾಗಿದ್ದಾರೆ. ನಾಮಿನೇಟ್ ಆಗಿದ್ದಾರೆ..ಈ ಮೂಲಕ ಮೊದಲ ದಿನವೇ ಟ್ರೊಲ್ ಪೇಜ್ ಗಳಿಗೆ ಹಬ್ಬವಾಗಿದ್ದ ನಿವೇದಿತಾ ಗೌಡ ಮೊದಲ ವಾರವೇ ಮನೆಯಿಂದ ಹೊರಹೋಗಲು ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ..ನಿವೇದಿತಾ ಅವರು ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಪೈಕಿ ಕಿರಿಯವರಾಗಿದ್ದಾರೆ ಮುಂದೆ ಓದಿ..

 

 

 

ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ರನ್ನು ಮನೆಯ ಸದಸ್ಯರು ನಾಮಿನೇಟ್ ಮಾಡಿರುವ ವಿಚಾರವನ್ನು ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಕಲರ್ಸ್ ಸೂಪರ್ ಚಾನೆಲ್ ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ..ನಿವೇದಿತಾ ಗೌಡ ಅವರೊಂದಿಗೆ ನಾಮಿನೇಟ್ ಆಗಿರುವ ಸದಸ್ಯರ್ಯಾರು ಎಂದು ತಿಳಿದಿಕೊಳ್ಳಲು ಕಾರ್ಯಕ್ರಮವನ್ನೇ ನೋಡಬೇಕು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top