fbpx
ಮನೋರಂಜನೆ

ಮೇಘಾ ಅವರನ್ನು “ಪ್ರಥಮ್ ತಂಗಿ” ಎಂದು ಟ್ರೊಲ್ ಮಾಡಿದ್ದಕ್ಕೆ ಒಳ್ಳೆಹುಡುಗ ಪ್ರಥಮ್ ಕೊಟ್ಟ ಕಾಮೆಂಟ್ ಏನು ಗೊತ್ತಾ?

ಮೇಘಾ ಅವರನ್ನು “ಪ್ರಥಮ್ ತಂಗಿ” ಎಂದು ಟ್ರೊಲ್ ಮಾಡಿದ್ದಕ್ಕೆ ಒಳ್ಳೆಹುಡುಗ ಪ್ರಥಮ್ ಕೊಟ್ಟ ಕಾಮೆಂಟ್ ಏನು ಗೊತ್ತಾ?

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು 100 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿರುವ ಸಾಮಾನ್ಯ ವ್ಯಕ್ತಿಗಳ ಪೈಕಿ ಕೊಡಗಿನ ಬೆಡಗಿ ಮೇಘಾ ಕೂಡ ಒಬ್ಬರು.. ಕಾರ್ಯಕ್ರಮದ ಮೊದಲ ದಿನವೇ ನಾನು ನಟಿ ಎಂದು ಹೇಳಿಕೊಂಡು ಸ್ಪರ್ಥಿಗಳೊಂದಿಗೆ ಪರಿಚಯ ಮಾಡಿಕೊಳ್ಳುತ್ತಿರುವ ಮೇಘಾರನ್ನ ಟ್ರಾಲ್ ಪೇಜ್ ಗಳು ಇವಳು ‘ಪ್ರಥಮ್ ತಂಗಿ’ ಎಂದು ಸಿಕ್ಕಾಪಟ್ಟೆ ಟ್ರಾಲ್ ಮಾಡುತ್ತಿವೆ.. ಮುಂದೆ ಓದಿ

 

 

ಒಂದು ಟ್ರಾಲ್ ಫೇಸ್ಬುಕ್ ಪೇಜ್ ತನ್ನ ಪೋಸ್ಟ್ ವೊಂದರಲ್ಲಿ ” ಮೇಘಾ ಎರಡನೇ ಪ್ರಥಮ್ ಆಗಿ ಹೊರಹೊಮ್ಮುವುದನ್ನು ನೋಡಲು ತಯಾರಾಗಿ” ಎಂದು ಟ್ರೊಲ್ ಮಾಡಿತ್ತು..ಈ ಪೋಸ್ಟ್ ಗೆ ಒಳ್ಳೆ ಹುಡುಗ ಪ್ರಥಮ್ ಕೂಡ ರಿಪ್ಲೈ ಮಾಡಿ ಅಚ್ಚರಿ ಮೂಡಿಸಿದ್ದಾರೆ..” ಯಾಕಪ್ಪ?ಸುಮ್ನಿರಕಾಗಲ್ವ?ನಂಗೂ ಆ ಹುಡ್ಗಿಗೂ ಸಂಬಂಧನೇ ಇಲ್ಲ ಗುರು.ಸುಮ್ನಿರು ಗುರು.ನೀವೊಬ್ರು ಶುರು ಮಾಡಿದ್ರೆ ಎಲ್ಲಾ ನನ್ಮಕ್ಳು ಹಾಗೆ ಅನ್ನೋಕೆ ಶುರು ಮಾಡ್ತಾರೆ ” ಎಂದು ಕಾಮೆಂಟ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top