fbpx
ದೇವರು

ಕಾರ್ತಿಕ ಮಾಸದಲ್ಲಿ ಯಾವ ಕಾರ್ಯಗಳನ್ನು ಮಾಡಿದರೆ ಪುಣ್ಯ ಲಭಿಸುತ್ತೆ ? ಯಾವ ಕಾರ್ಯ ಮಾಡಿದರೆ ಒಳ್ಳೆಯದಲ್ಲ

ಕಾರ್ತಿಕ ಮಾಸದಲ್ಲಿ ಏನು ಮಾಡಬೇಕು ? ಏನು ಮಾಡಬಾರದು ? ಎಂದು

ಇಂದು ನಾವು ತಿಳಿಯೋಣ.

ಕಾರ್ತಿಕ ಮಾಸವು 6 ನೇ   ತಾರೀಖಿನ  ಅಕ್ಟೋಬರ್‌ 2017 ರಿಂದ ಪ್ರಾರಂಭವಾಗಿ 18 ನೆಯ  ನವೆಂಬರ್ 2017 ರವರೆಗೆ   ಇರಲಿದೆ. ಈ ಕಾರ್ತಿಕ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಿದರೆ ಒಳ್ಳೆಯದು ? ಯಾವ ಕೆಲಸಗಳನ್ನು ಮಾಡಬಾರದು ? ಎಂದು ಇಂದು ನಾವು ತಿಳಿಯೋಣ ಬನ್ನಿ ….

ಶ್ರೀಕೃಷ್ಣನ ಹೀಗೆ ಹೇಳಿದ್ದಾನೆ ಗಿಡಗಳಲ್ಲಿ ತುಳಸಿ, ಮಾಸಗಳಲ್ಲಿ ಕಾರ್ತಿಕ ಮಾಸ , ದಿವಸಗಳಲ್ಲಿ ಏಕಾದಶಿ, ತೀರ್ಥಗಳಲ್ಲಿ ದ್ವಾರಕ್ಕೆ, ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದವು ಮತ್ತು ಇಷ್ಟವಾದವು ಎಂದು ಹೇಳಿದ್ದಾನೆ .

 

 

ವೇದಕ್ಕೆ ಸಮಾನವಾದ ಶಾಸ್ತ್ರವಿಲ್ಲ ಗಂಗೆಗೆ ಸಮಾನವಾದ ತೀರ್ಥ ಇಲ್ಲ ಸತ್ಯ ಯುಗಕ್ಕೆ ಸಮಾನವಾದ ಬೇರೆ ಯೋಗವಿಲ್ಲ. ಹಾಗೆಯೇ ಈ ಕಾರ್ತಿಕ ಮಾಸಕ್ಕೆ ಸಮಾನವಾದ ಬೇರೆ ಮಾಸವಿಲ್ಲ .

ಈ ತಿಂಗಳು ಮಹಾವಿಷ್ಣು ಯೋಗ ನಿದ್ರೆಯಿಂದ ಎಚ್ಚರದಲ್ಲಿರುತ್ತಾನೆ. ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮಾಸ ಈ ಕಾರ್ತಿಕ ಮಾಸ. ಇದನ್ನು ದಾಮೋದರ ಮಾಸ ಅಥವಾ ದಾಮೋದರ ತಿಂಗಳು ಎಂದು ಸಹ ಕರೆಯುತ್ತಾರೆ. ಈ ಮಾಸವು ಅಕ್ಷಯ ಫಲ ನೀಡುವುದು.

ಈ ಮಾಸದಲ್ಲಿ ವ್ರತ ಮಾಡುವುದರಿಂದ ಕೀರ್ತಿ, ತೇಜಸ್ಸು, ಆಯಸ್ಸು, ಧನ, ಸಂಪತ್ತು, ಬುದ್ಧಿ ಎಲ್ಲವೂ ವೃದ್ಧಿಯಾಗುವುದು. ಈ ಕಾರ್ತಿಕ ಮಾಸದಲ್ಲಿ  ಚಂದ್ರನ ಕಿರಣಗಳು ನೇರವಾಗಿ ಪೃಥ್ವಿಯ ಮೇಲೆ ಬೀಳುವವು.

ಪದ್ಮ ಪುರಾಣದ ಪ್ರಕಾರ ಯಕ್ಷರ ಪೂಜೆ  ಮೊದಲು  ಆಗುವುದು.ಮನೆಯನ್ನು ಮತ್ತು ಮನಸ್ಸನ್ನು ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಸಮಯದಲ್ಲಿ ದೇವಿ, ಗಂಧರ್ವರು ,ಋಷಿ ಮುನಿಗಳು ಇನ್ನೂ ಇತ್ಯಾದಿ  ದೇವತೆಗಳು ಪವಿತ್ರವಾದ ನದಿಗಳಲ್ಲಿ ಸ್ನಾನ ಮಾಡಲು ಬರುತ್ತಾರೆ.

ಯಮನನ್ನು ಸಂತುಷ್ಟಗೊಳಿಸಲು ಧನವಂತರಿ ಪೂಜೆಯನ್ನು ಮಾಡಿ ಯಮನನ್ನು ಸಂತುಷ್ಟಗೊಳಿಸಿ ಆಯಸ್ಸನ್ನು ಹೆಚ್ಚು  ಮಾಡಿಕೊಳ್ಳುವುದು ಈ ಕಾರ್ತಿಕ ಮಾಸದಲ್ಲಿಯೆೇ.

 

 

ಇದೇ ಅಕ್ಟೋಬರ್ ತಿಂಗಳಲ್ಲಿ ಕಾರ್ತಿಕ ಮಾಸದಲ್ಲಿ ಬರುವ 19 ನೇ ತಾರೀಖಿನ    ಗುರುವಾರ ಅಮಾವಾಸ್ಯೆ ದಿನ ದೀಪಾವಳಿ  ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ ಲಕ್ಷ್ಮೀ ಪೂಜೆಯನ್ನು ಮಾಡುವುದು.ಮಹಿಳೆಯರು ಈ ದಿನ ವಿಶೇಷವಾಗಿ ಭಕ್ತಿ, ಭಾವದಿಂದ ಲಕ್ಷ್ಮೀಯನ್ನು  ಮನೆಗೆ ಆಹ್ವಾನಿಸಿ ಪೂಜೆ ಮಾಡುತ್ತಾರೆ ಅದು ಗೋಧೂಳಿ ಸಮಯದಲ್ಲಿ  ಪೂಜೆ ಮಾಡುವುದು ಇನ್ನೂ ವಿಶೇಷ.

ಇದೇ ದೀಪಾವಳಿ ಹಬ್ಬದ ದಿನ ಶಿವ,ದೇವಿ, ಸೂರ್ಯ ದೇವರ ದೇವಸ್ಥಾನಗಳಲ್ಲಿ ದೀಪ ಬೆಳಗಿಸಿದರೆ ಒಳ್ಳೆಯದು.ಇದೇ ಕಾರ್ತಿಕ ಮಾಸದಲ್ಲಿ ಶ್ರೀ ವಿಷ್ಣುವು ಮತ್ಸ್ಯ ಅವತಾರವನ್ನು ಸಹ  ಈ ಭೂಮಿಯ ಮೇಲೆ ತಳೆದಿದ್ದನು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ .

1.ಕಾರ್ತಿಕ ಮಾಸದಲ್ಲಿ ನದಿಗಳಲ್ಲಿ ಕಾರ್ತಿಕ ಸ್ನಾನ ಮಾಡುವುದು ಒಳ್ಳೆಯದು ಅದು ಸೂರ್ಯೋದಯಕ್ಕೆ ಮುನ್ನ ಕಾರ್ತಿಕ ಸ್ನಾನ ಮಾಡಬೇಕು .

2.ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕು ಯಾಕೆಂದರೆ ನಮ್ಮ ತನು ಮನಸ್ಸಿನಲ್ಲೂ ಸಹ ಈಶ್ವರನು ನೆಲೆಸಿರುತ್ತಾನೆ ನಾವು ಪೂಜೆ ಮಾಡುತ್ತೇವೆ ವ್ರತ ನಿಯಮಗಳನ್ನು ಪಾಲಿಸುತ್ತೇವೆ. ಆದ್ದರಿಂದ ನಮ್ಮ ಈ ಪೂಜೆ ವ್ರತ ಆಚರಣೆಗೆ ಅಡ್ಡಿ ಉಂಟಾಗಬಾರದೆಂದು ಬ್ರಹ್ಮಚರ್ಯವನ್ನು ಪಾಲನೆ ಮಾಡಬೇಕು .

3.ಧಾನ್ಯಗಳ ಸೇವನೆ ನಿಷಿದ್ಧ ದ್ವಿದಳ ಧಾನ್ಯಗಳಾದ ಬೇಳೆ ಕಾಳುಗಳನ್ನು ತಿನ್ನಬಾರದು ಸಣ್ಣಪುಟ್ಟ ಫಲ ಹಾರಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು ಹೆಸರು ಬೇಳೆ, ಉದ್ದಿನ ಬೇಳೆ, ಕಡ್ಲೆ ಕಾಳು, ಬಟಾಣಿ ಈ ರೀತಿ ದ್ವಿದಳ  ಧಾನ್ಯಗಳನ್ನು ಸೇವಿಸಬಾರದು.

 

 

4.ಕಾರ್ತಿಕ ಮಾಸದಲ್ಲಿ ವ್ರತ ಮಾಡುವವರು ಈರುಳ್ಳಿ ,ಬೆಳ್ಳುಳ್ಳಿ, ಬದನೆ ಕಾಯಿ ಮತ್ತು  ಎಣ್ಣೆಯನ್ನು ಸಹ ಅಡುಗೆಯಲ್ಲಿ ಬಳಸಬಾರದು. ಬೇರೆಯವರು ಊಟ ಮತ್ತು ರಾತ್ರಿಯ ಸಮಯದಲ್ಲಿ ಮಾಡಿಟ್ಟ ಅಡುಗೆಯನ್ನು ಸಹ   ಸೇವಿಸಬಾರದು.

ವಿದೇಶ ಪ್ರವಾಸ ಈ ಸಮಯದಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ನಿಷೇಧಿಸಲಾಗಿದೆ.

5.ಮದ್ಯ ಸೇವನೆ, ಮಾಂಸಾಹಾರ ಸೇವನೆ ಕಾರ್ತಿಕ ಮಾಸದಲ್ಲಿ ನಿಷಿದ್ಧ. ನಶೆ ಬರುವಂತಹ ಯಾವುದೇ ಪದಾರ್ಥಗಳನ್ನು ಸೇವಿಸುವುದು ಕಾರ್ತಿಕ ಮಾಸದಲ್ಲಿ ಒಳ್ಳೆಯದಲ್ಲ.

6.ಕಾರ್ತಿಕ ಮಾಸದಲ್ಲಿ  ಒಂದು ಬಾರಿಯಾದರೂ ಕಲ್ಲಿನ ಮೇಲೆ ಊಟ ಮಾಡುವುದು ಒಳ್ಳೆಯದು ಹಾಗೆಯೇ  ಊಟ ಮಾಡಬೇಕು.

 

 

7.ಕಾರ್ತಿಕ ಮಾಸದಲ್ಲಿ ವ್ರತ ಮಾಡುವವರು ಯಾರೇ ಆಗಲಿ ಯಾರ ಮನಸ್ಸನ್ನು ಸಹ ನೋಯಿಸಬಾರದು ನಿಂದಿಸಬಾರದು ಅವರ ಮನಸ್ಸಿಗೆ ನೋವುಂಟು ಮಾಡಬಾರದು ತಪಸ್ವಿಯ ರೀತಿಯಲ್ಲಿ ವ್ಯವಹರಿಸಬೇಕು ಕಡಿಮೆ ಮಾತನಾಡಬೇಕು ಹಾಗೆಯೇ ಸಂಯಮದಿಂದ ಇರಬೇಕು.

8.ತುಳಸಿಯ  ಪೂಜೆಗೆ ವಿಶೇಷ ಮಹತ್ವವಿದೆ. ಅದು ಕಾರ್ತಿಕ ಮಾಸದಲ್ಲಿ ಆದ್ದರಿಂದ ಬೆಳಗ್ಗೆ ಸಂಜೆ ತುಳಸಿ ಪೂಜೆ ಮಾಡಬೇಕು. ಹಾಗೆಯೇ ಪ್ರತಿದಿನ ಕಾರ್ತಿಕ ಮಾಸದಲ್ಲಿ ಸಂಜೆ ತುಳಸಿಯ ಗಿಡದ ಬಳಿ ಒಂದು ದೀಪವನ್ನು ಹಚ್ಚಬೇಕು.

9.ನದಿಗಳಲ್ಲಿ, ಸಮುದ್ರಗಳಲ್ಲಿ, ಹಳ್ಳ, ಕೊಳ್ಳ, ತೊರೆ, ಇರುವ  ಸ್ಥಳಗಳಲ್ಲಿ ದೀಪ ದಾನ ಮಾಡಬೇಕು ಅಂದರೆ ದೀಪವನ್ನು ಹಚ್ಚಿ ನೀರಿನಲ್ಲಿ  ತೇಲಿ ಬಿಡಬೇಕು.

 

 

ಕೊನೆಯದಾಗಿ ಪುರಾಣಗಳಲ್ಲಿ ಮತ್ತು ಸ್ಕಂದ ಪುರಾಣದಲ್ಲಿ ಹೇಳಿರುವುದೇ ಹೇಳಿರುವುದೇನೆಂದರೆ ಹಿಂದೂ ಧರ್ಮದವರಿಗೆ ಮಾಸಗಳಲ್ಲಿ ಉತ್ತಮ ಮಾಸವೆಂದರೆ ಈ ಕಾರ್ತಿಕ ಮಾಸ .ಹಿಂದೂ ಪಂಚಾಂಗದ ಪ್ರಕಾರ ಈ ಕಾರ್ತಿಕ ಮಾಸವು ಎಂಟನೇ ಮಾಸವಾಗಿದೆ.

ಇವೆಲ್ಲಾ ನಿಯಮಗಳನ್ನು ಪಾಲಿಸ ಬೇಕೆಂದೇನೂ ಇಲ್ಲ. ಇವಿಷ್ಟು ನಿಯಮಗಳಲ್ಲಿ ಯಾವುದಾದರೂ ಒಂದನ್ನು ನಿಮಗೆ ಆಗುವುದನ್ನು ಮಾಡಿದರೂ ಸಾಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top