ಬಿಗ್ ಬಾಸ್ ಮನೆಯ ಸುರಸುಂದರಿ ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗೆಗಿನ ಈ ವಿಷಯಗಳನ್ನ ತಿಳ್ಕೊಂಡ್ರೆ ಆಶ್ಚರ್ಯ ಪಡ್ತೀರಾ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..
ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವ 11 ಜನ ಸೆಲೆಬ್ರೆಟಿಗಳ ಪೈಕಿ ಶ್ರುತಿ ಪ್ರಕಾಶ್ ಕೂಡ ಅಬ್ಬರು..ಸದ್ಯ ಪಡ್ಡೆ ಹುಡುಗರ ಫೆವೆರೆಟ್ ಆಗಿರುವ ಶ್ರುತಿ ಪ್ರಕಾಶ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಹತ್ತಾರು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ..ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ಖ್ಯಾತಿಗಳಿಸಿರುವ ಶ್ರುತಿ ಪ್ರಕಾಶ್ ಅವರ ಬಗೆಗಿನ ಕೆಲವು ವಿಚಾರಗಳನ್ನು ನೀವು ತಿಳ್ಕೊಳ್ಳೆಬೇಕು..ಮುಂದೆ ಓದಿ
24 ವರ್ಷ ವಯಸ್ಸಿನ ಶ್ರುತಿ ಪ್ರಕಾಶ್ ಹುಟ್ಟಿದ್ದು ಬೆಳಗಾವಿಯಲ್ಲಿ..ತಂದೆ ಕರ್ನಲ್ ಪ್ರಕಾಶ್ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದರು ಈಗ ನಿವೃತ್ತಿ ಹೊಂದಿದ್ದಾರೆ. ತಾಯಿ ಸವಿತಾ ಪ್ರಕಾಶ್ ಗೃಹಿಣಿ..ಶ್ರುತಿ ಹುಟ್ಟಿದ್ದು ಕರ್ನಾಟಕದಲ್ಲೇ ಆದರೂ ನೆಲೆ ಕಂಡುಕೊಂಡಿದ್ದು ಮಾತ್ರ ಮುಂಬೈನಲ್ಲಿ..ಮುಂದೆ ಓದಿ.
ಗಾಯಕಿ ಆಗಿ ಅನೇಕ ಲೈವ್ ಶೋಗಳನ್ನು ನಡೆಸಿ ಹೆಸರು ಗಳಿಸಿರುವ ಶ್ರುತಿ ವೃತ್ತಿಪರ ತರಬೇತಿ ಪಡೆದ ಗಾಯಕಿ ಅಲ್ಲದೆ ಇದ್ದರೂ ವೆಲ್ ಟ್ರೈನ್ಡ್ ಸಿಂಗರ್ ಗಳಂತೆ ಲಯಬದ್ಧವಾಗಿ ಶ್ರುತಿ ಪ್ರಕಾಶ್ ಹಾಡುತ್ತಾರೆ. ಕೇವಲ ಹಾಡುಗಾರಿಕೆಯಲ್ಲದೆ “ಚಾನೆಲ್ ವಿ’ ನಲ್ಲಿ ಪ್ರಸಾರವಾಗುತ್ತಿದ್ದ ‘ಇಶ್ಕ್ ಅನ್ ಪ್ಲಗ್ಡ್’ ಮತ್ತು ಸ್ಟಾರ್ ಪ್ಲಸ್ ಚಾನೆಲ್ ನಲ್ಲಿ ಬರುತಿದ್ದ ‘ಸಾಥ್ ನಿಭಾನಾ ಸಾಥಿಯಾ’ ಎಂಬ ಧಾರಾವಾಹಿಗಳಲ್ಲಿ ಕೂಡ ಶ್ರುತಿ ಪ್ರಕಾಶ್ ಅಭಿನಯಿಸಿದ್ದಾರೆ..
ತಂದೆ ಆರ್ಮಿ ಆಫೀಸರ್ ಆಗಿದ್ದ ಕಾರಣ ಹೆಚ್ಚು ಕಾಲ ಕರ್ನಾಟಕದಿಂದ ದೂರವಾಗಿದ್ದ ಶ್ರುತಿ ಪ್ರಕಾಶ್ ಈಗ ಕನ್ನಡ ಬಿಗ್ ಬಾಸ್ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ..ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸುವ ಆಸೆ ಹೊಂದಿರುವ ಶ್ರುತಿ ಪ್ರಕಾಶ್ ಅವರಿಗೆ ‘ಬಿಗ್ ಬಾಸ್’ ಕಾರ್ಯಕ್ರಮವು ಈ ನಿಟ್ಟಿನಲ್ಲಿ ಒಂದೊಳ್ಳೆ ವೇದಿಕೆಯಾಗಿದೆ..
Contestant No. 5: Shruthi – HaaDalli Shruthi ide, maneyalli sangeetha irutta? #BBK5 pic.twitter.com/RIamJpTZ14
— Colors Super (@ColorsSuper) October 15, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
