fbpx
ದೇವರು

ಅಕ್ಟೋಬರ್-17 ಧನ ತ್ರಯೋದಶಿಯ ದಿನದಂದು ಮರೆತು ಕೂಡ ಈ ವಸ್ತುಗಳನ್ನು ಖರೀದಿಸಬೇಡಿ ಹಾಗೆ ಒಂದು ಪಟ್ಟಣ ಉಪ್ಪಿನಿಂದ ಮಾಡುವ ಉಪಾಯ ಅವಶ್ಯಕವಾಗಿ ಪಾಲಿಸಿ

ಧನ ತ್ರಯೋದಶಿಯ ದಿನದಂದು ಮರೆತು ಈ ವಸ್ತುಗಳನ್ನು ಖರೀದಿಸಬೇಡಿ

ಮತ್ತು ಹಾಗೆ ಕೆಲವು ಉಪಾಯಗಳನ್ನು ಅವಶ್ಯಕವಾಗಿ ಪಾಲಿಸಿರಿ.

 

ಅಕ್ಟೋಬರ್ ಹದಿನೇಳರಂದು ಧನ ತ್ರಯೋದಶಿಯ ಹಬ್ಬವೆಂದು ಆಚರಿಸಲಾಗುತ್ತದೆ. ಇದು ದೀಪಾವಳಿಗೂ ಮೊದಲು ಶುರುವಾಗಲಿದೆ ನಂತರ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ.ಈ ಬಾರಿ   ಧನ ತ್ರಯೋದಶಿಯು  ಮಂಗಳವಾರದ ದಿನ ಬಂದಿದ್ದು ಆ ದಿನ ಬಂಗಾರವನ್ನು ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುವುದು ಹಿಂದಿನಿಂದ ಬಂದ ಸಂಪ್ರದಾಯವಾಗಿದೆ. ಈ ದಿನ ಬಂಗಾರ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿ ಮಾಡುವುದರಿಂದ ಅವುಗಳ ಸಂಪತ್ತೂ ಹದಿಮೂರು ಪಟ್ಟು ಹೆಚ್ಚಾಗಲಿದೆ ಎಂದು ನಂಬಲಾಗಿದೆ. ಆದರೆ ಈ ಶುಭ ಸಂದರ್ಭದಲ್ಲಿ ಕೆಲವೊಂದು ವಸ್ತುಗಳನ್ನು ಮರೆತು ಸಹ ಖರೀದಿ ಮಾಡಬಾರದಂತೆ.

 

 

ಧನ ತ್ರಯೋದಶಿಯ ದಿನ ಗಾಜಿನ ವಸ್ತುಗಳನ್ನು ಖರೀದಿ ಮಾಡಬಾರದು. ಗಾಜನ್ನು ರಾಹುವಿಗೆ ಹೋಲಿಸಲಾಗಿದೆ. ರಾಹು ನೀಚ ಗ್ರಹವೆಂದು ಪರಿಗಣಿಸಲಾಗಿದೆ. ಗಾಜಿನ ವಸ್ತುವನ್ನು ಖರೀದಿ ಮಾಡುವುದರಿಂದ ಈ ದಿನ ಶುಭ ಫಲ ಪ್ರಾಪ್ತಿಯಾಗುವುದಿಲ್ಲ. ಹಾಗಾಗಿ ಮರೆತು ಸಹ ಈ ದಿನ ಗಾಜಿನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ.

ಧನ ತ್ರಯೋದಶಿಯ ದಿನ ಅಲ್ಯೂಮಿನಿಯಂ ವಸ್ತುಗಳನ್ನು ಕೂಡ ಖರೀದಿ ಮಾಡಬಾರದು. ಅಲ್ಯುಮಿನಿಯಂ ಕೂಡ ರಾಹುವಿಗೆ ಹೋಲಿಸಲಾಗಿದೆ ಹಾಗಾಗಿ ಧನ ತ್ರಯೋದಶಿಯ ದಿನ ಅಲ್ಯೂಮಿನಿಯಂ ವಸ್ತುಗಳನ್ನು ಖರೀದಿ ಮಾಡಬಾರದು.

ಧನ ತ್ರಯೋದಶಿಯ ದಿನ ಅಡುಗೆ ಮನೆಯಲ್ಲಿ ಬಳಸುವ ಚಾಕು ಮತ್ತು  ಚೂಪಾದ ವಸ್ತುಗಳನ್ನು ಖರೀದಿ ಮಾಡಬಾರದು.

 

 

ಚಿನ್ನದ ಆಭರಣಗಳ ಬದಲು ವಜ್ರ ಹಾಗೂ ಬೆಳ್ಳಿಯ ಆಭರಣಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಧನ ತ್ರಯೋದಶಿಯ ದಿನ ರಾತ್ರಿಯ ಸಮಯದಲ್ಲಿ   ಈ ಎರಡು ಉಪಾಯಗಳನ್ನು ಮಾಡಿದರೆ ಸಾಕ್ಷಾತ್ ಲಕ್ಷ್ಮಿಯ ಪ್ರಸನ್ನಳಾಗಿ ಅವಳ ಕೃಪಾ ಕಟಾಕ್ಷಕ್ಕೆ ನೀವು ಸಹ ಪಾತ್ರರಾಗುವಿರಿ.

ನೀವು ತುಂಬಾ ಕಷ್ಟಪಟ್ಟು ಪರಿಶ್ರಮೆದಿoದ ದುಡಿಯುತ್ತಿದ್ದರೆ. ಆ ಪರಿಶ್ರಮದ ಫಲ ಸಿಗುತ್ತಿಲ್ಲ ಎಂದಾದರೆ… ಈ ಸಣ್ಣ ಉಪಾಯವೊಂದನ್ನು ನಿಮ್ಮ ಮನೆಯಲ್ಲಿ ಮಾಡಿ  ನೋಡಿ.

 

 

ಧನ ತ್ರಯೋದಶಿಯ ದಿನ ಅಂದರೆ ರಾತ್ರಿ ಎಂಟು ಗಂಟೆಯ ನಂತರ ಎರಡು ಕರ್ಪೂರವನ್ನು ತೆಗೆದುಕೊಂಡು ಒಂದು ಬೆಳ್ಳಿಯ ಬಟ್ಟಲಿನಲ್ಲಿ ಇಟ್ಟು ಅದರೊಳಗೆ ಒಂದು ಲವಂಗವನ್ನು ಇಟ್ಟು ಮನೆಯ ಮುಖ್ಯ ದ್ವಾರದ ಬಾಗಿಲಿನಲ್ಲಿ ತೆಗೆದುಕೊಂಡು ಹೋಗಿ ಅದಕ್ಕೆ ಬೆಂಕಿ ಹಾಕಿ ಉರಿಸಿ ಹೀಗೆ ಕರ್ಪೂರವನ್ನು ಮತ್ತು ಒಂದು ಲವಂಗವನ್ನು ಸತತವಾಗಿ ಉರಿಸುವುದರಿಂದ ಶ್ರೀ ಮಹಾಲಕ್ಷ್ಮೀ ದೇವಿಯ ಬೇಗನೆ ಪ್ರಸನ್ನಳಾಗುತ್ತಾಳೆ. ಈ ಉಪಾಯದಿಂದ ಮನೆಯಲ್ಲಿ ಧನಕ್ಕೆ  ಸಂಬಂಧಿಸಿದ ಕಷ್ಟಗಳಿಂದ ವಿಮುಕ್ತಿ ಹೊಂದಿ ಧನ ಸಂಪತ್ತು ಯಥೇಚ್ಛವಾಗಿ ಲಭಿಸುವುದು ಹಾಗೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯಲ್ಲಿದ್ದರೂ ಸಹ ದೂರವಾಗುವುದು .

ಧನ ತ್ರಯೋದಶಿಯ ದಿನ ಒಂದು ಪಟ್ಟಣ ಉಪ್ಪಿನಿಂದ ಮಾಡುವ ಉಪಾಯ.

ನೀವು ಅಧಿಕವಾಗಿ ಜೀವನದಲ್ಲಿ  ಚಿಂತೆಗೀಡಾಗಿದ್ದೀರಾ ?  ನಿಮಗೆ ರಾತ್ರಿಯ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲವೇ ? ಒಂದು ವೇಳೆ ನಿದ್ರೆ ಬಂದರೂ ಸಹ ಅನೇಕ ರೀತಿಯ ಕೆಟ್ಟ ಕನಸುಗಳು ನಿಮಗೆ ಬೀಳುತ್ತವೆಯೇ ?  ಇದರ ಜೊತೆಗೆ ನಿದ್ರೆಯು ಕೂಡ ಸರಿಯಾಗಿ ಬರುತ್ತಿಲ್ಲವೆಂದರೆ ? ಈ ಒಂದು ಸರಳ ಉಪಾಯವನ್ನು ಪಾಲಿಸಿ ನೋಡಿ.

 

ಧನ ತ್ರಯೋದಶಿಯ ದಿನ ನಾವು ಅಂಗಡಿಯಿಂದ ಹೊಸದಾಗಿ ಒಂದು ಪಟ್ಟಣ ಉಪ್ಪನ್ನು  ಮನೆಗೆ ತೆಗೆದುಕೊಂಡು ಬಂದು. ಆ ಉಪ್ಪನ್ನು ಒಂದು ಬಟ್ಟಲಿನಲ್ಲಿ ಹಾಕಿ ರಾತ್ರಿ ಎಂಟು ಗಂಟೆಯ ನಂತರ ಮನೆಯ ಉತ್ತರ ಪೂರ್ವ ದಿಕ್ಕಿನಲ್ಲಿ ಈ ಉಪ್ಪು ತುಂಬಿದ ಬಟ್ಟಲನ್ನು ಇಡಬೇಕು ಮತ್ತು ಪೂಜಾ ಕೋಣೆಯಲ್ಲಿ ಶ್ರೀ ಮಹಾಲಕ್ಷ್ಮೀ  ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು ನಂತರ ಶ್ರೀ ಮಹಾಲಕ್ಷ್ಮೀ ದೇವಿಯ ಮಂತ್ರವನ್ನು ಜಪಿಸಬೇಕು .

ನಂತರ ಮಲಗಿ ಬೆಳಗ್ಗೆ ಎದ್ದ ನಂತರ ಈ ಉತ್ತರ ಪೂರ್ವ ದಿಕ್ಕಿನಲ್ಲಿ ಮನೆಯೊಳಗೆ ಇಟ್ಟ ಒಂದು ಬಟ್ಟಲು ಉಪ್ಪನ್ನು ನೀವು ಮನೆಯಲ್ಲಿ ಮಾಡುವ ಅಡುಗೆಗೆ ಉಪಯೋಗಿಸಿ. ಇದರಿಂದ ಧನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಕಾರಾತ್ಮಕ ಶಕ್ತಿಯು ದೂರವಾಗಿ ಧನಾತ್ಮಕ ಶಕ್ತಿಯೂ ಸಹ ಮನೆಯೊಳಗೆ  ತುಂಬುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top