ಹಬ್ಬದ ವಿಶೇಷ ಸಿಹಿ ಸಿಹಿ ಖಾದ್ಯ ಕಾಯಿ ಹೋಳಿಗೆ ಮಾಡುವ ವಿಧಾನ
ಕಾಯಿ ಹೋಳಿಗೆ ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಸಣ್ಣದಾಗಿ ತುರಿದ ತೆಂಗಿನ ಕಾಯಿ – 1
* ಬೆಲ್ಲ –ಸುಮಾರು-300 gm.
* 1 ಟೀ ಸ್ಪೂನ್ ಯಾಲಕ್ಕಿ ಪುಡಿ
* ಎರಡು ಚಮಚದಸ್ಟು ಅಕ್ಕಿ ಹಿಟ್ಟು.
ಕಾಯಿ ಹೋಳಿಗೆ ಕಣಕ ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಮೈದಾ ಹಿಟ್ಟು 2 ಕಪ್
* ಚಿರೋಟಿ ರವಾ 1 ಕಪ್
* ಒಂದು ಸಣ್ಣ ಚಮಚ ಅರಸಿನ ಪುಡಿ.
*ಮತ್ತು ಸ್ವಲ್ಪ ಎಣ್ಣೆ
ಕಾಯಿ ಹೋಳಿಗೆ ತಯಾರಿಸುವ ವಿಧಾನ:
*ತುರಿದ ತೆಂಗಿನ ಕಾಯಿಯನ್ನು ಮಿಕ್ಸಿಯಲ್ಲಿ ಹಾಕಿ ಎರಡು ಸುತ್ತು ತಿರುಗಿಸಿಕೊಳ್ಳಿ.
*ಒಂದು ಕಾವಲಿಯಲ್ಲಿ ತೆಂಗಿನ ಕಾಯಿ ತುರಿ,ಬೆಲ್ಲ ಸೇರಿಸಿ ಕದಕುತ್ತಿರಿ.ಪಾಕ ಬಂದ ನಂತರ ಯಾಲಕ್ಕಿ ಪುಡಿ ,ಅಕ್ಕಿ ಹಿಟ್ಟು ಹಾಕಿ ಚನ್ನಾಗಿ ಗೊಟಾಯಿಸಿ ಗ್ಯಾಸ್ ಆರಿಸಿ.ಆರಿದ ನಂತರ ನಿಂಬೇ ಹಣ್ಣು ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.
*ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿರೋಟಿ ರವಾ , ಅರಶಿನ ಪುಡಿ,ಎಣ್ಣೆ ಸೇರಿಸಿ ಸ್ವಲ್ಪವೇ ನೀರು ಹಾಕುತ್ತ ಕಲಸಿಕೊಳ್ಳಿ.ಹಿಟ್ಟು ಹದವಾಗಿರಲಿ.ಅರ್ಧ ತಾಸು ನೆನೆಯಲು ಬಿಡಿ.
*ಕಣಕದ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು ಗೋಲಿ ಗಾತ್ರದಲ್ಲಿ ಉಂಡೆ ಮಾಡಿಕೊಳ್ಳಿ.ಅದನ್ನು ಸ್ವಲ್ಪ ಎಣ್ಣೆ ಕೈಯಲ್ಲಿ ತಟ್ಟಿಕೊಂಡು,ನಡುವೆ ಹೂರಣದ ಉಂಡೆ ಇರಿಸಿ ತಿರುಗಿಸಿ ಭದ್ರವಾಗಿ ಮುಚ್ಚಿರಿ.
*ಒಲೆಯ ಮೇಲೆ ತವ ಇರಿಸಿ.
*ಈಗ ಕಾಯಿ ಹೊಳಿಗೆಗಳನ್ನು ತೆಳ್ಳಗೆ ಲಟ್ಟಿಸಿ.ಕಾದ ತವಾದ ಮೇಲೆ ಹಾಕಿ ಎರಡು ಬದಿಗಳನ್ನು ಕೆಂಪಾಗಿ ಕಾಯಿಸಿ ಅರಲು ಬಿಡಿ.
*ಕಾಯಿ ಹೋಳಿಗೆಗಳು ತಯಾರಾಗಿವೆ. ಎಂಟು ದಿನಗಳಾದರೂ ಚೆನ್ನಾಗಿರುತ್ತವೆ.
*ತಯಾರಿಸುವ ಸಮಯ –ಸುಮಾರು-ಒಂದು ತಾಸು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
