fbpx
ಭವಿಷ್ಯ

ದೀಪಾವಳಿಯ ದಿನ ಈ ರಾತ್ರಿ ಈ ಪ್ರಾಣಿಗಳನ್ನು ಕಂಡರೆ ಶುಭ ಸಂಕೇತಗಳು ಸಿಗುತ್ತವೆ, ಮಾತೆ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರುವುದೆಂದು ತಿಳಿಯಿರಿ.

ದೀಪಾವಳಿಯ ದಿನ ಈ ರಾತ್ರಿ ಈ ಪ್ರಾಣಿಗಳನ್ನು ಕಂಡರೆ ಶುಭ ಸಂಕೇತಗಳು

ಸಿಗುತ್ತವೆ. ಮಾತೆ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲೆ ಇರುವುದೆಂದು ತಿಳಿಯಿರಿ.

 

 

ದೀಪಾವಳಿಯ  ಸಮಯದಲ್ಲಿ ಕೆಲವು ಸಂಕೇತಗಳು ಸಿಗುತ್ತವೆ. ಅದರಿಂದ ನಮಗೆ ಮಾತೆ ಲಕ್ಷ್ಮೀ ದೇವಿಯ ಆಶೀರ್ವಾದ ಭಕ್ತರಿಗೆ ಸಿಗುವುದು ಎಂದು ನಂಬಲಾಗಿದೆ. ಒಂದು ವೇಳೆ ದೀಪಾವಳಿಯ ದಿನ ರಾತ್ರಿ ಈ ನಾಲ್ಕು ಪ್ರಾಣಿಗಳನ್ನು ಕಂಡರೆ ನೀವು ಅಂದುಕೊಳ್ಳಬಹುದು ನಿಮ್ಮ ಬಳಿ ಲಕ್ಷ್ಮೀ ದೇವಿಯು ಬರುವಳೆಂದು. ನಿಮಗೆ ಗೊತ್ತಾ ಆ ನಾಲ್ಕು ಪ್ರಾಣಿಗಳು ಯಾವುವೆಂದು ನಾವು ನಿಮಗೆ ಇಂದು ಆ ನಾಲ್ಕು ಪ್ರಾಣಿಗಳು ಯಾವುದೆಂದು ಹೇಳುತ್ತೇವೆ….

1.ನಿಮಗೆ ನಿಮ್ಮ ಮನೆಯಲ್ಲಿ ಹಲ್ಲಿಯೂ ಕಾಣಿಸಿಕೊಂಡರೆ

 

ಇದು ನಿಮಗೆ ಸಾಮಾನ್ಯ ಅನ್ನಿಸಬಹುದು. ನಾವು ಪ್ರತಿದಿನ ಯಾವುದಾದರೂ ಒಂದು ಗೋಡೆಯ ಮೇಲೆ ಹಲ್ಲಿಯನ್ನು  ನೋಡಿಯೇ ನೋಡುತೇವ. ಆದರೆ ದೀಪಾವಳಿಯ ಹಬ್ಬದ ದಿನ  ಹಲ್ಲಿಯನ್ನು ಗೋಡೆಯ ಮೇಲೆ ಕಾಣುವುದು ಬಹಳ ಕಡಿಮೆ. ನೀವೇನಾದರೂ ದೀಪಾವಳಿಯ ದಿನ ಹಲ್ಲಿಯನ್ನು ನೋಡಿದರೆ ನಿಶ್ಚಿತವಾಗಿ ಧನಲಾಭ ಆಗುವುದೆಂದು ತಿಳಿಯಿರಿ. ಲಕ್ಷ್ಮೀ  ದೇವಿಯು ಖಂಡಿತವಾಗಿ ನಿಮ್ಮ ಮನೆಗೆ  ಬರುವಳು.

 

 

ಮನೆಯಲ್ಲಿ ಹಲ್ಲಿಗಳು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಂಗತಿ.ಅದೊಂದು ಜೀವಿ ಅಷ್ಟೇ ಆದರೆ ಮನುಷ್ಯ ಹಾಗೂ ಜೀವಿಗಳು ಪ್ರಕೃತಿಯ ಪ್ರಮುಖ ಭಾಗವಾಗಿದ್ದು .ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ .ಹಲ್ಲಿ ಎಲ್ಲಿ ? ಯಾವಾಗ ?ಹೇಗೆ ಕಾಣಿಸಿಕೊಂಡರೆ ? ಶುಭ ಹಾಗೂ ಯಾವುದು ಅಶುಭ ?  ಎಂಬುದನ್ನು ಸಹ ಕೆಲವು ಗ್ರಂಥಗಳಲ್ಲಿ ವಿವರಿಸಲಾಗಿದೆ.

ಕೆಲವು ಗ್ರಂಥಗಳ ಪ್ರಕಾರ ಕೆಲವೊಂದು ನಿರ್ದಿಷ್ಟ ಅವಧಿಯಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಹಾಗೂ ದೇಹದ ಭಾಗಗಳಲ್ಲಿ ಹಲ್ಲಿ ತಾಕಿದರೆ ಅದು ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತದೆ.

ದೀಪಾವಳಿಯ ದಿನ ರಾತ್ರಿ ಅಥವಾ ಸಂಜೆ ಮನೆಯಲ್ಲಿ ಹಲ್ಲಿ  ಕಾಣಿಸಿಕೊಂಡರೆ ಅದು ಶುಭ ಸಂಕೇತವೆಂದು ಹೇಳಲಾಗಿದೆ. ದೀಪಾವಳಿಯಂದು ಮನೆಗೆ ಬರುವ ಹಲ್ಲಿಯನ್ನು ಲಕ್ಷ್ಮೀ  ಎನ್ನಲಾಗುತ್ತದೆ. ಇಡೀ ವರ್ಷ ಮನೆಯಲ್ಲಿ ಸಂತೋಷ ಸಂಪತ್ತು ನೆಲೆಸುತ್ತದೆ ಎಂದು ನಂಬಲಾಗಿದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಲ್ಲಿ ಕಂಡರೆ ತಕ್ಷಣ ದೇವಸ್ಥಾನದಿಂದ ಅಥವಾ ಮನೆಯಲ್ಲಿಯೇ  ತಯಾರಿಸಿರುವ ಅಕ್ಷತೆಯನ್ನು ತಂದು ಹಲ್ಲಿಯ  ಮೇಲೆ ದೂರದಿಂದಲೇ ಹಾಕಿ. ಮನಸ್ಸಿನಲ್ಲಿ ನಿಮ್ಮ ಆಸೆಯನ್ನು ಹೇಳಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಮನೋಕಾಮನೆ ಈಡೇರುತ್ತವೆ ಎಂದು ನಂಬಲಾಗಿದೆ. ಹಲ್ಲಿಯೂ ಪವಿತ್ರಪಾಣಿ ಎಂದು ಸಹ ನಂಬಲಾಗಿದೆ ಹಾಗೆ ಇದು  ಹಣದ ಸಮಸ್ಯೆಯನ್ನು  ದೂರಮಾಡುತ್ತದೆ .

2.ದೀಪಾವಳಿಯ ದಿನ ಸೊoಡಿಲಿಯನ್ನು ಕಂಡರೆ ಶುಭ.

 

 

ನೀವು ನಿಮ್ಮ ಮನೆಯಲ್ಲಿ ಅಲ್ಲಲ್ಲಿ ಯಾವಾಗಾದರೂ ಸೊoಡಿಲಿಯನ್ನು ನೋಡುತ್ತಿರುತ್ತೀರಿ. ಅದು ಸಹ ಇಲಿಯ ರೀತಿಯಲ್ಲೇ ಇರುತ್ತದೆ. ಆದರೆ ಅದು ಸ್ವಲ್ಪ ಚಿಕ್ಕದು. ಇದನ್ನು ಮನೆಯಲ್ಲಿ ನೋಡಿದರೆ ಬಹಳ ಶುಭ ಎಂದು ಪರಿಗಣಿಸಲಾಗುವುದು. ಇನ್ನು ಕೆಲವು ಮನೆಗಳಲ್ಲಿ  ಸೊಂಡಿಲಿಯು ಬಹಳಷ್ಟು ಹಾನಿಯನ್ನು ಉಂಟು ಮಾಡುತ್ತದೆ. ನೀವು ಒಂದು ವೇಳೆ ದೀಪಾವಳಿಯ ದಿನ ರಾತ್ರಿ ಸೊoಡಿಲಿಯನ್ನು ನೋಡಿದರೆ ನಿಮಗೆ ಎಲ್ಲವೂ ಸರಿ ಹೋಗುತ್ತದೆ.ನಿಮಗೆ ಶುಭವಾಗಿ ಧನಲಾಭ ವಾಗುವುದೆಂದು ತಿಳಿಯಿರಿ .

3.ದೀಪಾವಳಿಯ ದಿನ ಬೆಕ್ಕನ್ನು ನೋಡಿದರೆ ಶುಭ.

 

ನಮ್ಮ ದೇಶದಲ್ಲಿ ಈ ರೀತಿಯ ಮಾನ್ಯತೆಗಳು ಕೆಲವು ಸಮಯದಲ್ಲಿ ಮಾತ್ರ ಇರುತ್ತವೆ. ಬಾಕಿ ದಿನಗಳಲ್ಲಿ ನಿಮ್ಮ ಅಡುಗೆ ಮನೆಗೆ ನುಗ್ಗಿ ಬೆಕ್ಕು ಕಿಟಕಿಯಿಂದ ಬಂದು ಹಾಲು ,ಮೊಸರು, ತುಪ್ಪ ಇತ್ಯಾದಿಗಳನ್ನು ತಿಂದು ಹೋಗಬಹುದು . ಆದ್ದರಿಂದ ನೀವು ಅದನ್ನು ಮನೆಯಲ್ಲಿ ನುಗ್ಗಲು ಬಿಡುವುದಿಲ್ಲ . ಆದರೆ ದೀಪಾವಳಿಯ ದಿನ ರಾತ್ರಿ ಬೆಕ್ಕು ನಿಮ್ಮ ಮನೆಯನ್ನು ಪ್ರವೇಶ ಮಾಡಿ ನಿಮ್ಮ ಮನೆಯಲ್ಲಿ ಕುಡಿದು ಹೋದರೆ . ಅದು ಸಾಕ್ಷಾತ್ ಮಾತೆ ಲಕ್ಷ್ಮೀ  ದೇವಿ ಬರುವ ಸಂಕೇತವೆಂದು ಪರಿಗಣಿಸಲಾಗಿದೆ.

4.ದೀಪಾವಳಿಯ ದಿನ ನೀವು ಗೂಬೆಯನ್ನು ನೋಡಿದರೆ

 

 

ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವ ಹಾಗೆ ನವರಾತ್ರಿಯ ಸಮಯದಲ್ಲಿ ಗೂಬೆಯನ್ನು ನೋಡಿದರೆ ಶುಭ ಸಂಕೇತ ಎಂದು ಪರಿಗಣಿಸಲಾಗಿದೆ. ಇದೇ ರೀತಿ ಇದೇ ರೀತಿಯ ಮಾನ್ಯತೆಯು ದೀಪಾವಳಿಯ ಹಬ್ಬಕ್ಕೂ ಸಹ ಇದೆ.ನಮಗೆಲ್ಲ ಗೊತ್ತು ಗೂಬೆ ರಾತ್ರಿಯ ಹೊತ್ತು ಕತ್ತಲಿನಲ್ಲಿ ಮಾತ್ರ ಹೊರಗೆ ಬರುವುದು ಕಣ್ಣಿಗೆ ಕಾಣಿಸಿಕೊಳ್ಳುವುದು. ಆದರೆ ದೀಪಾವಳಿಯ ದಿನ ರಾತ್ರಿ ಅಮಾವಾಸ್ಯೆಯ ಕತ್ತಲು ಇದ್ದರೂ ಸಹ ಸಂಪೂರ್ಣವಾಗಿ ದೀಪಗಳಿಂದ ರಾತ್ರಿಯ ಸಮಯ ಕಂಗೊಳಿಸುವುದು. ಈ ದೀಪಾವಳಿ ಹಬ್ಬದ ದಿನ ಬೆಳಕು ಇರುವ ಕಾರಣ ನಿಮಗೆ ಗೂಬೆಯು ಸಹ ಎಲ್ಲೂ ನೋಡಲು ಕಾಣಸಿಗುವುದಿಲ್ಲ. ಆದರೂ ಸಹ ಒಂದು ವೇಳೆ ದೀಪಾವಳಿಯ ರಾತ್ರಿ ನಿಮ್ಮ ಕಣ್ಣಿಗೆ ರಾತ್ರಿ ಗೂಬೆ ಕಾಣಿಸಿಕೊಂಡರೆ ನಿಮ್ಮ ಮೇಲೆ ಲಕ್ಷ್ಮೀ ದೇವಿಯ ಕೃಪೆ ಮತ್ತು ಆಶೀರ್ವಾದ ಇರುವುದೆಂದು ಅರ್ಥ ಮಾಡಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top