fbpx
ಕನ್ನಡ

ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ತಮಿಳು ಪ್ರೇಮ: ಕ್ಷೇತ್ರದ ಜನರಿಗೆ ತಮಿಳು ಚಿತ್ರದ ಟಿಕೆಟ್ ವಿತರಣೆ..

ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ತಮಿಳು ಪ್ರೇಮ: ಕ್ಷೇತ್ರದ ಜನರಿಗೆ ತಮಿಳು ಚಿತ್ರದ ಟಿಕೆಟ್ ವಿತರಣೆ..

 

 

ತಮಿಳು ನಟ ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರವೂ ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ತೆರೆಕಂಡಿದ್ದು ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕಾಂಗ್ರೆಸ್ ಶಾಸಕ ಆರ್.ವಿ. ದೇವರಾಜ್ ಪುತ್ರ ಬಿಬಿಎಂಪಿ ಸದಸ್ಯ ಯುವರಾಜ್ ರವರು ಊರ್ವಶಿ ಚಿತ್ರ ಮಂದಿರದ ಮುಂದೆ ತಮ್ಮ ಬ್ಯಾನೆರ್ ಫ್ಲೆಕ್ಸ್ ಗಳನ್ನ ಹಾಕಿಸಿಕೊಂಡು ತಮಿಳು ಪ್ರೇಮ ಮೆರೆದಿರುವುದಲ್ಲದೆ ಕ್ಷೇತ್ರದ ಜನರಿಗೆ ಪುಕ್ಕಟೆಯಾಗಿ ತಮಿಳು ಚಿತ್ರದ ಟಿಕೆಟ್ ನೀಡಿದ್ದಾರೆ..

 

 

ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಪುತ್ರ, BBMP ಸದಸ್ಯ ಯುವರಾಜ್ ಕಾನೂನು ಉಲ್ಲಂಘನೆ ಮಾಡಿ ತಮಿಳಿನ ‘ಮರ್ಸಲ್’ ಚಿತ್ರದ ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಎಲ್ಲ ಒಂದು ಸಾವಿರ ಟಿಕೆಟ್ ಗಳನ್ನೂ ಖರೀದಿಸಿ ತಮ್ಮ ಕ್ಷೇತ್ರದ ಮತದಾರರಿಗೆ ನೀಡಿ ತಮ್ಮ ತಮಿಳು ಪ್ರೇಮ ಪ್ರದರ್ಶಿಸಿದ್ದಾರೆ..ವೋಟಿಗಾಗಿ ಕನ್ನಡತನವನ್ನು ಬಿಟ್ಟು ಪರಭಾಷಿಕರ ಬೂಟು ನೆಕ್ಕುತ್ತಿರುವ ಕಾಂಗ್ರೆಸ್ ಶಾಸಕ ಆರ್.ವಿ.ದೇವರಾಜ್ ಪುತ್ರ, BBMP ಸದಸ್ಯ ಯುವರಾಜ್ ಈ ಹಿಂದೆ ತಮಿಳಿನ ಕಬಾಲಿ ಚಿತ್ರ ರಿಲೀಸ್ ಆದಾಗಲೂ ಈ ರೀತಿ ಟಿಕೆಟ್ ನೀಡಿದ್ದರು.

 

 

ಪಾಲಿಕೆ ನಿಯಮದ ಪ್ರಕಾರ ಕೇವಲ 2 ಫಿಲಂ ಪೋಸ್ಟರ್ ಗಳಿಗೆ ಮಾತ್ರ ಅವಕಾಶವಿದ್ದರೂ ತನ್ನ ಚಿತ್ರಮಂದಿರದ ಆವರಣದಲ್ಲಿ 20 ಕ್ಕೂ ಹೆಚ್ಚು ಮರ್ಸಲ್ ಚಿತ್ರದ ಪೋಸ್ಟರ್ ಗಳನ್ನೂ ಅಂಟಿಸಿ,, ಬ್ಯಾನೆರ್ ಗಳಲ್ಲಿ ತಮ್ಮ ಚಿತ್ರಗಳಲ್ಲಿ ಹಾಕಿಸಿಕೊಂಡು ತಮಿಳು ಪ್ರೇಮವನ್ನು ಪ್ರದರ್ಶಸಿ ತಾನು ನಡೆದಿದ್ದೇ ದಾರಿ ಎಂಬಂತೆ ಸಾಗುತ್ತಿರುವುದು ನೋಡಿದರೆ ಕನ್ನಡಿಗರು ವಿಶಾಲ ಹೃದಯದವರು ಎಂಬ ಮಾತಿಗೆ ಹಿಡಿದ ಕನ್ನಡಿಯಾಗಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top