fbpx
ದೇವರು

ಅರಳಿ ಮರದ ಕೆಳಗೆ ದೀಪಾರಾಧನೆ ಮಾಡಿದರೆ ಲಕ್ಷ್ಮೀ ಕಟಾಕ್ಷ ದೊರೆಯುವುದು ಜೊತೆಗೆ ಅಶ್ವತ್ಥ ಮರದ ಮಹತ್ವ ತಿಳಿಯಿರಿ

ಅರಳಿ ಮರದ ಕೆಳಗೆ

ದೀಪಾರಾಧನೆ ಮಾಡಿದರೆ ಲಕ್ಷ್ಮೀ

ಕಟಾಕ್ಷ ದೊರೆಯುವುದು. ಇದರ

ಜೊತೆಗೆ ಅಶ್ವತ್ಥ ಮರದ

ಮಹತ್ವವನ್ನು ತಿಳಿಯೋಣ

ಬನ್ನಿ….

ನಮ್ಮ  ಭಾರತ ದೇಶದಲ್ಲಿ ಎಲ್ಲ ಮುಖ್ಯ ದೇವಸ್ಥಾನಗಳಲ್ಲಿಯೂ ಸಹ ಅಶ್ವತ್ಥ ಮರವನ್ನು ಖಚಿತವಾಗಿ ಬೆಳೆಸಿರುತ್ತಾರೆ. ಈ ಮರವನ್ನು ಹಿಂದೂಗಳು ದೈವ ಸ್ವರೂಪವಾಗಿ ಭಾವಿಸುತ್ತಾರೆ.

 

 

ಈ ಮರದ ಬೇರಿನಲ್ಲಿ ಸಾಕ್ಷಾತ್ ಬ್ರಹ್ಮ, ಕಾಂಡದಲ್ಲಿ ಶ್ರೀವಿಷ್ಣು, ಎಲೆಗಳಲ್ಲಿ ಪರಮೇಶ್ವರನು ಇರುತ್ತಾರೆ.

ಬ್ರಹ್ಮಪುರಾಣದ ಪ್ರಕಾರ ಅಶ್ವಥ ಮರವು ಶ್ರೀ ಮಹಾವಿಷ್ಣುವಿನ ಜನ್ಮ ಸ್ಥಳವಾಗಿದೆ.

 

 

ಅಷ್ಟೇ ಅಲ್ಲದೆ ಶ್ರೀ ಮಹಾಲಕ್ಷ್ಮೀ ದೇವಿಯು ಸಹ ಈ ಮರದಲ್ಲಿ ನೆಲೆಸಿರುತ್ತಾಳೆ.

ಬ್ರಹ್ಮ, ವಿಷ್ಣು, ಪರಮೇಶ್ವರರು  ತಮ್ಮ ದಿವ್ಯ ಆಯುಧಗಳನ್ನು ಈ ಅಶ್ವತ್ಥ ಮರದ ಮೇಲೆ ಇಟ್ಟಿರುತ್ತಾರೆ ಎಂದು ಪುರಾಣ ಗ್ರಂಥಗಳು ಹೇಳುತ್ತವೆ.

 

 

ಲಂಕೆಯಲ್ಲಿ ಸೀತಾಮಾತೆಗೆ ಆಶ್ರಯ ನೀಡಿದ್ದು ಈ ಅಶ್ವಥ ಮರವೇ ಸಕಲ  ದೇವಾನು ದೇವತೆಗಳು ಸಹ ಈ ಅಶ್ವತ್ಥ ಮರದಲ್ಲಿ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ .ಆದ್ದರಿಂದ ಭಕ್ತರು ಇದನ್ನು ಪವಿತ್ರವಾದ ಮರವೆಂದು ಭಾವಿಸಿ ಪೂಜೆಯನ್ನು ಮಾಡುತ್ತಾರೆ.

 

 

ಈ ಮರಕ್ಕೆ ನೀರು ಹಾಕಿ ಪೂಜೆ ಮಾಡಿದರೆ ಧನ ಸಂಪತ್ತಿನ ಜೊತೆಗೆ ಸಿರಿ, ಸಂಪತ್ತು , ಆರೋಗ್ಯ  ಅಭಿವೃದ್ಧಿಯಾಗುತ್ತದೆ.

ಈ ಮರದ ಕೆಳಗೆ ಕುಳಿತುಕೊಂಡು ಹನುಮಾನ್ ಚಾಲೀಸವನ್ನು ಪಠಿಸಿದರೆ  ಜೀವನದ ಎಲ್ಲ ಸಮಸ್ಯೆಗಳಿಗೂ ಸಹ ಒಳ್ಳೆಯ ಪರಿಹಾರ ಸಿಗುವುದು.

 

 

ರಾತ್ರಿಯ ಸಮಯದಲ್ಲಿಯೂ ಆಮ್ಲಜನಕವನ್ನು ಕೊಡುವ ಅತೀ ಕಡಿಮೆ ಮರಗಳಲ್ಲಿ ಅಶ್ವಥ ಮರ ಅಥವಾ ಅರಳಿ ಮರ ಎಂದು ಕರೆಯುವ ಈ ನಮ್ಮ ಪವಿತ್ರವಾದ ಮರವು ಕೂಡ ಒಂದು.

ಹಿಂದೂ ಧರ್ಮದಲ್ಲಿ ತುಂಬಾ ಆಚಾರಗಳು ಆರೋಗ್ಯ ಪ್ರಧಾನವಾಗಿಯೇ ಇರುತ್ತವೆ. ಅಶ್ವತ್ಥ ಮರದಿಂದ ಅನೇಕ ಆಯುರ್ವೇದ ಉಪಯೋಗಗಳು ಸಹ ಇವೆ.

 

 

ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪಾರಾಧನೆ ಮಾಡಿದರೆ ಶನಿ ಪ್ರಭಾವ ಕೂಡ ಕಡಿಮೆಯಾಗುತ್ತದೆ. ಸಂತಾನ ಭಾಗ್ಯ ದೊರೆಯುವುದು ವಿವಾಹ ಸಮಸ್ಯೆಗಳಿದ್ದರೆ ಅಂತಹ ಸಮಸ್ಯೆಗಳು ದೂರವಾಗಿ ಕಂಕಣ ಭಾಗ್ಯ ಲಭಿಸುವುದು. ಲಕ್ಷ್ಮಿಕಟಾಕ್ಷ ಕೂಡ ಸಿಗುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top