fbpx
ಆರೋಗ್ಯ

ಅಯ್ಯೋ ಕಾಲು ಊತ (ಎಡಿಮಾ) ನಡೆಯೋಕೆ ಆಗ್ತಿಲ್ಲ ಅನ್ನೋರು ಈ ಮನೆಮದ್ದುಗಳು ಮಾಡ್ಕೊಂಡು ಜಮ್ ಅಂತ ಓಡಾಡಿ

ಕಾಲು ಊತ ತಡೆಯಲು

ಸುಲಭವಾದ ಮನೆಮದ್ದು

ಊದಿಕೊಂಡ ಕಾಲು ಒಂದು ರೋಗವಲ್ಲ ಬದಲಾಗಿ ಒಂದು ಸಾಮಾನ್ಯ ಸಮಸ್ಯೆ, ಅಂಗಾಂಶಗಳಲ್ಲಿ ಸಂಗ್ರಹವಾಗುವ ದ್ರವ್ಯಗಳು ಇದಕ್ಕೆ ಮೂಲ ಕಾರಣ ಈ ಸ್ಥಿತಿಯನ್ನು ಎಡಿಮಾ ಎಂದು ಕರೆಯುತ್ತಾರೆ.

 

 

ಅತಿಯಾದ ತೂಕ , ದೀರ್ಘಕಾಲದವರೆಗೆ ನಿಲ್ಲುವುದು , ವಯಸ್ಸಾದವರಲ್ಲಿ , ಗರ್ಭಧಾರಣೆ ಸಮಯದಲ್ಲಿ , ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS), ಅಪೌಷ್ಟಿಕತೆ, ದೈಹಿಕ ವ್ಯಾಯಾಮದ ಕೊರತೆ ಮತ್ತು ರಕ್ತ ಕೊರತೆ ಇನ್ನು ಹಲವಾರು ಕಾರಣಗಳಿಂದ ಉಂಟಾಗಬಹುದು.

ಕಾಲಿನ ಶಸ್ತ್ರಚಿಕಿತ್ಸೆ ಅಥವಾ ಪೆಟ್ಟು ಸಹ ಈ ಸ್ಥಿತಿಗೆ ಕಾರಣವಾಗಬಹುದು.

ಮಧುಮೇಹ, ಹೃದಯ ಸಮಸ್ಯೆಗಳು, ಮೂತ್ರಪಿಂಡದ ಅಥವಾ ಯಕೃತ್ತಿನ ರೋಗ ಹೊಂದಿರುವ ಜನರು ಮತ್ತು ಗರ್ಭಿಣಿ ಮಹಿಳೆಯರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ.

ಊತ ಹೆಚ್ಚಾದಂತೆ ನಡೆಯಲು ನಿಲ್ಲಲು ಕಷ್ಟಪಡಬೇಕಾಗುತ್ತದೆ ನೋವು ಉರಿ ಊತ , ಕಾಲು ಊದಿ ಕೆಂಪಾಗುವುದು ಇನ್ನಿತರ ಲಕ್ಷಣಗಳು ಕಾಣುತ್ತವೆ.

ಕಾಲು ಊತ ತಡೆಯಲು ಸುಲಭವಾದ ಮನೆಮದ್ದು ಹೀಗಿವೆ

ಆಪಲ್ ಸೈಡರ್ ವಿನೆಗರ್

 

 

ಆಪಲ್ ಸೈಡರ್ ವಿನೆಗರ್ ಸಹ ನಿಮ್ಮ ಪಾದಗಳಲ್ಲಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಕಾಲು ಊತ ಕಡಿಮೆಯಾಗುತ್ತದೆ .

ಒಂದು ಬಟ್ಟಲು ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಟವಲ್ ಅನ್ನು ಅದ್ದಿ 10 ನಿಮಿಷಗಳ ಕಾಲ ಕಾಲಿನ ಸುತ್ತ ಸುತ್ತಿಕೊಳ್ಳಿ ಅಥವಾ ಒಂದು ಲೋಟ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ.

ಕೊತ್ತಂಬರಿ ಬೀಜ

 

 

2 ರಿಂದ 3 ಟೀ ಚಮಚ ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ ಅರ್ಧ ಆಗುವಷ್ಟು ಕುದಿಸಿ ನಂತ್ರ ತಣ್ಣಗೆ ಆರಿಸಿ ದಿನಕ್ಕೆ 2 ಬಾರಿ ಪುನರಾವರ್ತಿಸಿ.

ವಾಕಿಂಗ್ ಜಾಗಿಂಗ್

 

 

ಊತವನ್ನು ಕಡಿಮೆ ಮಾಡಲು ಮತ್ತು ಉರಿಯೂತ ಮತ್ತು ನೋವನ್ನು ನಿವಾರಿಸಲು ನೀವು ಮಾಡಬಹುದಾದ ಅತ್ಯುತ್ತಮ ವ್ಯಾಯಾಮಗಳಲ್ಲಿ ಈಜು ಕೂಡ ಒಂದು ವಾರದಲ್ಲಿ ಕನಿಷ್ಠ 5 ದಿನಗಳು ವಾಕಿಂಗ್ ಜಾಗಿಂಗ್ 30 ನಿಮಿಷಗಳ ಕಾಲ ಮಾಡಿ .

ಮೆಗ್ನೀಸಿಯಮ್

 

 

ದೇಹದಲ್ಲಿನ ಮೆಗ್ನೀಸಿಯಮ್ ಕೊರತೆಯು ಪಾದಗಳಲ್ಲಿ ಊತಕ್ಕೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಎದುರಿಸಲು ಮೆಗ್ನೀಸಿಯಮ್ ಆಹಾರವನ್ನು ಸೇವಿಸಿ.

ಮೆಗ್ನೀಸಿಯಮ್-ಭರಿತ ಆಹಾರಗಳಾದ ಮೀನು, ಸೋಯಾಬೀನ್ಗಳು, ಆವಕಾಡೊ, ಬಾಳೆಹಣ್ಣುಗಳು ಮತ್ತು ಡಾರ್ಕ್ ಚಾಕೊಲೇಟ್ಗಳನ್ನು ತಿನ್ನಿ .

ಬಿಸಿ ತಣ್ಣೀರಿನ ಚಿಕಿತ್ಸೆ

ಎರಡು ದೊಡ್ಡ ಬಟ್ಟಲಲ್ಲಿ ಒಂದರಲ್ಲಿ ಬಿಸಿ ನೀರು ಇನ್ನೊಂದರಲ್ಲಿ ತಣ್ಣೀರು ಹಾಕಬೇಕು
ನಂತರ 3 ರಿಂದ 4 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದವನ್ನು ಇರಿಸಿ
ತಕ್ಷಣ ಸುಮಾರು 1 ನಿಮಿಷ ತಣ್ಣನೆಯ ನೀರಿನಲ್ಲಿ ನಿಮ್ಮ ಪದವನ್ನು ಇರಿಸಿ
15 ರಿಂದ 20 ನಿಮಿಷಗಳ ಕಾಲ ಈ ಕ್ರಿಯೆ ಮುಂದುವರಿಸಿ ದಿನವೂ ಈ ಕ್ರಿಯೆ ಪುನರಾವರ್ತಿಸಿ ಬಿಸಿನೀರು ರಕ್ತ ಪರಿಚಲನೆಯನ್ನು ಹೆಚ್ಚಿಸಿದರೆ ತಣ್ಣೀರು ಊತ ಕಡಿಮೆ ಮಾಡುತ್ತದೆ.
ಊತ ಕಡಿಮೆ ಮಾಡಲು ದಿನವೂ ಈ ಕ್ರಿಯೆ ಮುಂದುವರಿಸಿ.

 ಅಂಗಮರ್ದನ (ಮಸಾಜ್)

ಬೆಚ್ಚಗಿನ ಸಾಸಿವೆ ಎಣ್ಣೆ ,ಆಲಿವ್ ತೈಲ ಅಥವಾ ಹರಳೆಣ್ಣೆ ಹಚ್ಚಿ 5 ನಿಮಿಷ ಮಸಾಜ್ ಮಾಡಿಕೊಂಡರೆ ಆರಾಮ ನೀಡುತ್ತದೆ.

ಎಪ್ಸಮ್ ಸಾಲ್ಟ್

ಎಪ್ಸಮ್ ಉಪ್ಪು ½ ಕಪ್ ನೀರಿನ ಟಬ್ ಗೆ ಮಿಶ್ರಣ ಮಾಡಿ
10 ರಿಂದ 15 ನಿಮಿಷಗಳ ಕಾಲ ಪಾದವನ್ನು ಇರಿಸಿಕೊಳ್ಳುವುದು ವಾರದಲ್ಲಿ 3 ಬಾರಿ ಪುನರಾವರ್ತಿಸಿದರೆ ಕಾಲಿನ ಊತ ಕಡಿಮೆಯಾಗುತ್ತದೆ.

 ಶುಂಠಿ

ದಿನಕ್ಕೆ 2 ರಿಂದ 3 ಬಾರಿ ಶುಂಠಿ ಎಣ್ಣೆಯಿಂದ ಕಾಲಿಗೆ ಮಸಾಜ್ ಮಾಡಿದರೆ ಊತ ಕಡಿಮೆಯಾಗುತ್ತದೆ.
2 ರಿಂದ 3 ಕಪ್ ಶುಂಠಿ ಚಹಾ ಕುಸಿದರೆ ಸಹ ಕಾಲಿನ ಊತ ಕಡಿಮೆಯಾಗುತ್ತದೆ.

ದಾಂಡೇಲಿಯನ್

ಒಂದು ಚಮಚ ದಂಡೇಲಿಯನ್ ಎಲೆಗಳ ಮಿಶ್ರಣ ತೆಗೆದು ಕೊಂಡು ಟೀ ಮಾಡಿಕೊಂಡು ಕುಡಿಯುವುದು ಕಾಲು ಊಟಕ್ಕೆ ಉತ್ತಮ ಪರಿಹಾರ.

ನಿಂಬೆ ರಸ

ಬೆಚ್ಚಗಿನ ಒಂದು ಕಪ್ ನೀರಿಗೆ 2 ಚಮಚ ನಿಂಬೆ ರಸ ಮಿಶ್ರಣ ಮಾಡಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top