fbpx
ದೇವರು

ದೀಪಾವಳಿಯ ನರಕ ಚತುರ್ದಶಿ ಹಬ್ಬವನ್ನು ಹೇಗೆ ಆಚರಣೆ ಮಾಡಬೇಕು , ಕೆಲವು ಮಂತ್ರಗಳು ಮತ್ತು ಈ ಆಚರಣೆ ಮಾಡಿದರೆ ಮನೆಗೆ ತುಂಬಾ ಒಳ್ಳೇದು

ದೀಪಾವಳಿ ಹಬ್ಬದಲ್ಲಿ ಬರುವ

ನರಕ ಚತುರ್ದಶಿಯ ಧಾರ್ಮಿಕ

ಮಹತ್ವ ಏನು ? ಈ ಹಬ್ಬದ

ದಿನವನ್ನು ಯಾವ ರೀತಿ

ಆಚರಿಸಲಾಗುತ್ತದೆ ? ಎಂದು

ಇಂದು ನಾವು

ತಿಳಿದುಕೊಳ್ಳೋಣ ಬನ್ನಿ…..

ದೀಪಾವಳಿ ಎಂದರೆ ದೀಪಗಳ ಹಬ್ಬ ಅಥವಾ ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ.

 

 

ಪುರಾಣಗಳ ಪ್ರಕಾರ ಶ್ರೀರಾಮನು ತನ್ನ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣನೊಡನೆ ಹದಿನಾಲ್ಕು ವರ್ಷಗಳ ಕಾಲ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿ ಬಂದ ಸಮಯವನ್ನು ದೀಪಾವಳಿ ಹಬ್ಬವೆಂದು ಆಚರಿಸುತ್ತಾರೆ.

ಆದ್ದರಿಂದ ಜನರು ಕತ್ತಲೆ ಸಾಗಿ ಬೆಳಕು ಬರುವ ಹಬ್ಬ ಅಂದರೆ ದುಷ್ಟಶಕ್ತಿಗಳ ಮೇಲೆ ವಿಜಯವನ್ನು ಆಚರಿಸಲು ನರಕ ಚತುರ್ದಶಿಯ ದಿನದಂದು ದೀಪಗಳನ್ನು ಬೆಳಗುತ್ತಾರೆ.

 

 

ಇನ್ನೂ ನರಕ ಚತುರ್ದಶಿಯ ದಿನ ಶ್ರೀಕೃಷ್ಣನು ಜರಾಸಂಧನೆoಬ ರಾಕ್ಷಸನನ್ನು ಭೀಮಸೇನನ ಕೈಯಿಂದ ಕೊಲ್ಲಿಸಿದನು. ಅಲ್ಲಿ ಬಂಧಿತರಾದ ಕನ್ಯೆಯರಿಗೆ ಬಿಡುಗಡೆಗೊಳಿಸಿದನು  ಮತ್ತು ಅವರನ್ನು  ರಕ್ಷಣೆ ಮಾಡಿದ ದಿವಸವನ್ನು ನರಕ ಚತುದರ್ಶಿ ದಿನವೆಂದು ಆಚರಿಸಲಾಗುವುದು. ಇದು ಸ್ತ್ರೀ ಕುಲದ ಸಂರಕ್ಷಣೆ ಮತ್ತು  ಅಸುರ ನಿಗ್ರಹದ ಸಂದೇಶವನ್ನು  ಈ ಹಬ್ಬವು ಸಾರುತ್ತದೆ.

 

 

ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಶ್ಲೇಷ ಕೃಷ್ಣ ಪಕ್ಷದವರೆಗೆ ಭೂಮಿಯಲ್ಲಿ ಸಂಚಾರಕ್ಕಾಗಿ ಬರುವ ಯಮಧರ್ಮ ಮತ್ತು ಪಿತೃ ದೇವತೆಗಳು ತಮ್ಮ ಲೋಕಕ್ಕೆ ಹಿಂತಿರುಗುವ ಸಮಯವೇ ಈ ತ್ರಯೋದಶಿಯ ದಿನ.

ಆ ದಿನ ಸಂಜೆ ಮನೆಯ ಮುಂದೆ ದೀಪವನ್ನು ಹಚ್ಚಬೇಕು .ರಾತ್ರಿಯ ಸಮಯದಲ್ಲಿ ಹೊರಡುವ ಪಿತೃದೇವತೆಗಳಿಗೆ ದೀಪವನ್ನು ಹಚ್ಚಿ ಸಮರ್ಪಣೆ ಮಾಡಿದರೆ ನಮ್ಮ ಮನೆಯಲ್ಲಿ ಅಪಮೃತ್ಯು ಬಾರದಂತೆ ಅನುಗ್ರಹಿಸುತ್ತಾರೆ.

 

 

ಆಶ್ವಿಜ ತ್ರಯೋದಶಿಯ ಸಂಜೆ ನೀರು ತುಂಬಬೇಕು. ದಕ್ಷಿಣ ದಿಕ್ಕಿಗೆ ಅಧಿಪತಿಯಾದ  ಯಮ ದೇವನಿಗೆ ಎರಡು ದೀಪಗಳಿಗೆ  ಎಳ್ಳೆಣ್ಣೆಯನ್ನು  ಹಾಕಿ ಜೋಡಿ ದೀಪವನ್ನು ಹಚ್ಚಬೇಕು. ನಂತರ ಈ ಶ್ಲೋಕವನ್ನು ಹೇಳಬೇಕು…

“ಮೃತ್ಯುನಾ ಪಾಶದoದಾಭ್ಯಂ  ಕಾಲಹ್  ಶ್ಯಾಮಲಾಯ ಸಹ l, ತ್ರಯೋದಶ್ಯಾಂ ದೀಪದಾನತ್ ಸೂರ್ಯಜ್  ಪ್ರಯತಾಂ ಮಮ್ ll ಯಮಾಂತರ್ಗತ  ಪ್ರಾಣಸ್ಥ .”

“ಓಂ ಶ್ರೀ ನರಸಿಂಹಾಯ ನಮಃ” ಎಂದು ಹೇಳಿ ಕೈ ಮುಗಿದು ಪ್ರಾರ್ಥಿಸಬೇಕು.

ನಂತರ ಕೈಕಾಲು ತೊಳೆದುಕೊಂಡು ಒಂದು ಚೊಂಬಿನಲ್ಲಿ ನೀರನ್ನು ಇಟ್ಟು ಗಂಗಾ ಪೂಜೆ ಮಾಡಬೇಕು. ಈ ಆಚರಣೆಯಿಂದ ಚಂದ್ರ ದೋಷ ಮತ್ತು ಶನಿ ದೋಷಗಳು ನಿವಾರಣೆಯಾಗಿ ಆಯುಷ್ಯ ವೃದ್ಧಿಯಾಗುತ್ತದೆ.

ಮರುದಿನ ಅಂದರೆ ಚತುರ್ದಶಿಯ ಮಾರನೇ ದಿನದಂದು ಬೆಳಗಿನ ಜಾವ ಬೇಗ ಎದ್ದು ತೈಲ ಅಭ್ಯಂಜನ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿ, ದೇವರ ದರ್ಶನ ಮಾಡಿ ಕೈಮುಗಿದು ಪ್ರಾರ್ಥಿಸಿ ಮನೆ ದೇವರಿಗೆ ಮತ್ತು ಗುರು ಹಿರಿಯರಿಗೆ ಪೂಜೆಯನ್ನು ಮಾಡಬೇಕು.

 

 

ಶ್ರೀ ಕೃಷ್ಣ ಅಷ್ಟೋತ್ತರವನ್ನು ಪಠಿಸಿ ದೀಪಾಲಂಕಾರದಿಂದ ಪೂಜಿಸಿ ನಂತರ ಭೋಜನಾದಿತ್ಯ  ಕರ್ಮಗಳನ್ನು ಮುಗಿಸಿಕೊಳ್ಳಬೇಕು. ಈ ಸಂಜೆ ನರಕಾಸುರನ ಸಂಹಾರದ ಕಥೆಯನ್ನು ಓದಿ.

ಶ್ರೀ ಕೃಷ್ಣನಿಗೂ ಭೀಮಸೇನನಿಗೂ ಹೂ, ತುಳಸಿ ,ನೀರು ಅರ್ಪಿಸಿ ಮನೆಯ ಮುಂದೆ ಎಂಟು ದಿಕ್ಕುಗಳಿಗೂ ದೀಪವನ್ನು ಬೆಳಗಿಸಬೇಕು. ಈ ಆಚರಣೆಯಿಂದ ಶನಿ ದೋಷ ನಿವಾರಣೆಯಾಗಿ ವ್ಯಾಪಾರದಲ್ಲಿ ಉನ್ನತಿ ಲಭಿಸುವುದು ಮಧ್ಯಾಹ್ನ ಬ್ರಾಹ್ಮಣರಿಗೆ ಭೋಜನವನ್ನು ನೀಡಿ ವಸ್ತ್ರ ದಾನವನ್ನು ಸಹ ಮಾಡಬಹುದು.

 

 

ಪ್ರದೋಷ ಕಾಲದಲ್ಲಿ ದೀಪದಾನ ಮಾಡಬೇಕು ಪ್ರದೋಷ ಕಾಲದ ವ್ರತವನ್ನು ತೆಗೆದುಕೊಂಡವರು ಪ್ರದೋಷ ಪೂಜೆ ಮತ್ತು ಶಿವ ಪೂಜೆಯನ್ನು ಮಾಡಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top