fbpx
ಮನೋರಂಜನೆ

ಚಿರು-ಮೇಘನಾ ಮದುವೆಯನ್ನು ಕನ್ಫರ್ಮ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್..! ಕಿಚ್ಚನ ಟ್ವೀಟ್’ಗೆ ಚಿರು-ಮೇಘನಾ ಕೊಟ್ಟ ಉತ್ತರ ಏನು ಗೊತ್ತಾ..?

ಚಿರು-ಮೇಘನಾ ಮದುವೆಯನ್ನು ಕನ್ಫರ್ಮ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್..! ಕಿಚ್ಚನ ಟ್ವೀಟ್’ಗೆ ಚಿರು-ಮೇಘನಾ ಕೊಟ್ಟ ಉತ್ತರ ಏನು ಗೊತ್ತಾ..?

 

 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ರವರು ಮದುವೆ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿತ್ತು. ಖಾಸಗಿ ಸಮಾರಂಭಗಳಲ್ಲಿ ಈ ಇಬ್ಬರು ಒಟ್ಟೊಟ್ಟಾಗಿ ಭಾಗವಹಿಸಿದ್ದರಿಂದ ಇವರಿಬ್ಬರ ಮಧ್ಯೆ ಪ್ರೀತಿ ಆಗಿದ್ದು ಈಗ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ..ಚಿರು ಮತ್ತು ಮೇಘನಾ ರ ಮದುವೆ ಫಿಕ್ಸ್ ಆಗಿದ್ದು ಶೀಘ್ರದಲ್ಲೇ ಎಂಗೇಜ್ ಮೆಂಟ್ ನಡೆಯಲಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಮುಂದೆ ಓದಿ.

 

 

 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅಕ್ಟೊಬರ್ 22 ರಂದು ನಿಶ್ಚಿತಾರ್ಥ ಮಾಡಿಕೊಂಡು ಡಿಸೇಂಬರ್ ಎರಡನೇ ವಾರದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದರೂ ಚಿರು ಆಗಲಿ ಮತ್ತು ಮೇಘನಾ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿರಲಿಲ್ಲ. ಆದರೆ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ನಲಿ ಟ್ವೀಟ್ ಮಾಡುವ ಮೂಲಕ ಚಿರು ಮತ್ತು ಮೇಘನಾ ಮೆದುವೆಯಾ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ.

 

 

ಮೇಘನಾ ತಂದೆ ಸುಂದರ್ ರಾಜ್ ಜೊತೆ ತೆಗೆದು ಸೆಲ್ಫಿಯನ್ನು ಅಪ್ಲೋಡ್ ಮಾಡಿರುವ ಕಿಚ್ಚ ಸುದೀಪ್ “ನಿಶ್ಚಿತಾರ್ಥ ಸಮಾರಂಭಕ್ಕೆ ಆಮಂತ್ರಣ ಪತ್ರಕೆಯನ್ನು ಸುಂದರ್ ಮಾವರಿಂದ ಸ್ವೀಕರಿಸಿದೆ..ಚಿರುಸಾರ್ಜ ಮತ್ತು ಮೇಘನಾಸ್ರಾಜ್ ಅವ್ರು ಜೊತೆಯಲ್ಲಿ ಬಹಳ ಸುಖವಾಗಿ ಒಟ್ಟಿಗೆ ಇರಲಿ ಎಂದು ಹಾರೈಸುತ್ತೇನೆ ” ಎಂದು ಟ್ವೀಟ್ ಕಿಚ್ಚ್ಗ ಟ್ವೀಟ್ ಮಾಡಿದ್ದಾರೆ..ಮುಂದೆ ಓದಿ

 

 

ಕಿಚ್ಚ ಸುದೀಪ್ ಮದುವೆಯ ಕುರಿತು ಮಾಡಿರುವ ಟ್ವೀಟ್ ಗೆ ನಟಿ ಮೇಘನಾ ರಾಜ್ “ನಾವು ನಿಮ್ಮನ್ನು ಪ್ರೀತಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ನಟ ಚಿರಂಜೀವಿ ಸರ್ಜಾ ಕೂಡ ಕಿಚ್ಚ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು “ಹಾರೈಸಿದ್ದಕ್ಕೆ ಬಹಳ ಧನ್ಯವಾದಗಳು bro”ಎಂದು ಪ್ರತಿಕ್ರಿಯಿಸಿದ್ದಾರೆ..ಈ ಮೂಲಕ ರಕ್ಷಿತ್ ರಶ್ಮಿಕಾ ಬಳಿಕ ಮತ್ತೊಂದು ತಾರಾ ಜೋಡಿ ಹಸೆಮಣೆಯೇರಲು ಸಜ್ಜಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top