fbpx
ದೇವರು

135 ವರ್ಷಗಳ ನಂತರ ಈ ವರ್ಷದ ದೀಪಾವಳಿಯ‍ ದಿನ  ಮೂರು ಮಹಾ ಸಂಯೋಗವು ಒಂದೇ ಬಾರಿಗೆ ಉಂಟಾಗಲಿದೆ

ನೂರಾ ಮೂವತ್ತೊoದು

ವರ್ಷಗಳ ನಂತರ ಈ ವರ್ಷದ

ದೀಪಾವಳಿಯ‍ ದಿನ  ಮೂರು

ಮಹಾ ಸಂಯೋಗವು ಒಂದೇ

ಬಾರಿಗೆ ಉಂಟಾಗಲಿದೆ .

 

ಆ ಮೂರು ಯೋಗಗಳು ಯಾವುವೆಂದರೆ ಮೊದಲನೆಯದಾಗಿ ಗುರು ಮತ್ತು ಚಿತ್ರಾ ನಕ್ಷತ್ರದ ಸಂಯೋಗ,

 

 

ಎರಡನೆಯದಾಗಿ ಗುರುವಾರದ ದಿನವೇ ದೀಪಾವಳಿ ಹಬ್ಬ ಬಂದಿರುವುದು ಇನ್ನೊಂದು ವಿಶೇಷ.

 

 

ಮೂರನೆಯದಾಗಿ ರಾತ್ರಿ ಎಂಟು ಗಂಟೆಯ ನಂತರ ಗುರುವಾರ ನಾಲ್ಕು ಗ್ರಹಗಳು ತುಲಾ ರಾಶಿಯಲ್ಲಿ ಜೊತೆಯಾಗುವುದು ಅದ್ಯಾವುದೆಂದರೆ ಸೂರ್ಯ, ಬುಧ, ಗುರು ಮತ್ತು ಚಂದ್ರ ಗ್ರಹ ಇದಕ್ಕೆ ಚತುರ ಗ್ರಹ ಸಂಯೋಗ ಎಂದು ಕರೆಯಲಾಗುತ್ತದೆ.

 

 

ಇದೇ ಅಕ್ಟೋಬರ್ ಹತ್ತೊಂಬತ್ತನೇ ತಾರೀಖಿನಂದು  ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವೂ ಸಹ ಬಂದಿದೆ. ಇದು ಇಪ್ಪತ್ತೇಳು ವರ್ಷಗಳ ನಂತರ ಚಿತ್ರಾ ನಕ್ಷತ್ರದಲ್ಲಿ ಬಂದಿರುವುದು ತುಂಬಾ ವಿಶೇಷವಾಗಿದೆ .

ಈ ದಿನ ನೀವೇನಾದರೂ ಮನೆಗೆ ಹೊಸತನ್ನು  ಖರೀದಿ ಮಾಡಿ ತೆಗೆದುಕೊಂಡು ಬಂದರೆ ಅದು ಅತ್ಯಂತ ಲಾಭಕಾರಿಯಾಗುವುದು. ಅದರಿಂದ ಮಹಾಲಕ್ಷ್ಮೀಯ ಕೃಪೆ ನಿಮ್ಮ ಮೇಲೆ  ಸದಾ ಕಾಲ ಇರುವುದು. ಇದರ ಜೊತೆಗೆ ಹಣದ ಅಭಾವವೂ ಸಹ ನಿಮಗೆ ಉಂಟಾಗುವುದಿಲ್ಲ.

ಇದೇ ದೀಪಾವಳಿಯ ದಿನವೇ ಖರೀದಿ ಮಾಡಲೆಂದೇ ಅನೇಕ ಜನರು ಕಾದುಕೊಂಡಿರುತ್ತಾರೆ. ಇಪ್ಪತ್ತೇಳು ವರ್ಷಗಳ ನಂತರ ಗುರು ಗ್ರಹವು  ಚಿತ್ರಾ ನಕ್ಷತ್ರದಲ್ಲಿ ಸ್ಥಿತನಿದ್ದು.ಈ ಮಹಾ ಸಂಯೋಗದಲ್ಲಿ ಮಹಾಲಕ್ಷ್ಮೀಯ ಪೂಜೆ ಮಾಡುವುದರಿಂದ ವಿಶೇಷ ಲಾಭವೂ ಉಂಟಾಗುವುದು ಹಾಗೂ ಈ ಮಹಾ ಸಂಯೋಗ ಮತ್ತೆ ಬರುವುದು ನಾಲ್ಕು ವರ್ಷಗಳ ನಂತರ ಅಂದರೆ ಎರಡು ಸಾವಿರದ ಇಪ್ಪತ್ತರಲ್ಲಿ ಬರುವುದು.

 

 

ಹತ್ತೊಂಬತ್ತನೇ  ತಾರೀಖಿನಂದು  ಬೆಳಗ್ಗೆ ಗುರುವಾರ  ಏಳು ಗಂಟೆಯವರೆಗೆ ಹಸ್ತಾ ನಕ್ಷತ್ರವಿದ್ದು ನಂತರ ಚಿತ್ರಾ ನಕ್ಷತ್ರ ಬರುವುದು. ಇದರ ಜೊತೆಗೆ ಗುರು ಗ್ರಹ ಮತ್ತು ಚಿತ್ರಾ ನಕ್ಷತ್ರದ ವಿಶೇಷ ಸಂಯೋಗವು ಕೂಡ ಉಂಟಾಗುವುದು.

ತುಂಬಾ ಜನರು ದೀಪಾವಳಿಯ ಅಮಾವಾಸ್ಯೆಯ ದಿನ ಅಂದರೆ ಅಕ್ಟೋಬರ್ ಹತ್ತೊಂಬತ್ತನೇ ತಾರೀಖು  ಸಂಜೆಯ ಗೋಧೂಳಿ ಸಮಯದಲ್ಲಿ ಅಥವಾ ಪ್ರದೋಷ ಕಾಲದಲ್ಲಿ ಲಕ್ಷ್ಮೀಯ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡುತ್ತಾರೆ.

ಆದರೆ ಈ ಬಾರಿ ದೀಪಾವಳಿಯ ದಿನ ಸಂಜೆ ಐದು ಗಂಟೆ ಐದು ನಿಮಿಷಕ್ಕೆ ಪ್ರಾರಂಭವಾಗಿ  ರಾತ್ರಿ ಎಂಟು ಗಂಟೆ ಇಪ್ಪತ್ತು ನಿಮಿಷಗಳವರೆಗೆ ಅಂದರೆ ಎರಡು ಗಂಟೆ ಇಪ್ಪತ್ತು ನಿಮಿಷಗಳವರೆಗೆ ಪ್ರದೋಷ ಕಾಲ ಇರುವುದರಿಂದ ಈ ಸಮಯದಲ್ಲಿ ನೀವು ಯಾವಾಗ ಬೇಕಾದರೂ ಲಕ್ಷ್ಮೀ ಪೂಜೆಯನ್ನು ಮಾಡಬಹುದು.

 

 

ಈ ಬಾರಿಯ ದೀಪಾವಳಿಯ ದಿನದ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ  ದೀಪಾವಳಿ ಹಬ್ಬದ ದಿನ  ಹನ್ನೆರಡು ವರ್ಷಗಳ ನಂತರ ಚತುರಗ್ರಹ ಯೋಗವು ರಾತ್ರಿ ಎಂಟು ಗಂಟೆಯ ನಂತರ ಶುರುವಾಗಲಿದೆ.

ಚತುರಗ್ರಹ ಯೋಗ ಎಂದರೆ ಸೂರ್ಯ ಗ್ರಹದ  ಜೊತೆಗೆ ಬುಧ, ಚಂದ್ರ ,ಗುರು ಈ ಎಲ್ಲ ಗ್ರಹಗಳು ತುಲಾ ರಾಶಿಯಲ್ಲಿ ಬಂದು ಸೇರುತ್ತವೆ. ಇದಕ್ಕೆ ಚತುರಗ್ರಹ ಸಂಯೋಗ ಎಂದು ಕರೆಯಲಾಗುತ್ತದೆ.

ಆದ್ದರಿಂದ ಈ ವರ್ಷದ ದೀಪಾವಳಿಯ ತುಂಬಾ ವಿಶೇಷವಾಗಿದೆ ಇದು ಅತ್ಯಂತ ಶುಭಕಾರಿಯಾಗಿದ್ದು ಈ ದಿನ ಬೆಳಗ್ಗೆಯಿಂದ ರಾತ್ರಿಯವರೆಗೂ ಖರೀದಿ ಮಾಡುವುದಕ್ಕೆ ಉತ್ತಮ ಶುಭ ಸಂಕೇತ ಮತ್ತು ಶುಭ ಸೂಚಕವಾಗಿದೆ.ಹಾಗೆ  ಗಣೇಶ ಮತ್ತು ಕುಬೇರನ ಪೂಜೆಗೂ ಕೂಡ ಇದು ಉತ್ತಮ ಸಂಯೋಗವಾಗಿದೆ.

 

 

ಗುರುವಾರ ಚಿತ್ರಾ ನಕ್ಷತ್ರದಲ್ಲಿ ಅಮಾವಾಸ್ಯೆಯ ದಿನ ಅಂದರೆ ದೀಪಾವಳಿ ಹಬ್ಬದ ದಿನವೇ ಈ ಸಂಯೋಗ ಉಂಟಾಗುತ್ತಿರುವುದು ಜ್ಯೋತಿಷ್ಯಾಸ್ತ್ರದಲ್ಲಿ ತುಂಬಾ ಕಡಿಮೆ.

ಗುರು ಗ್ರಹವು ಚಿನ್ನ ಭೂಮಿ ಇನ್ನೂ ಮುಂತಾದವುಗಳ  ಕಾರಕ ಗ್ರಹನಾಗಿದ್ದರೆ.  ಚಿತ್ರಾ ನಕ್ಷತ್ರವು ಬೆಳ್ಳಿ, ಬಟ್ಟೆ, ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಹನಗಳನ್ನು  ಖರೀದಿಸಲು ಒಳ್ಳೆಯ ಸಮಯವಾಗಿದೆ.

ಈ ದಿನ ಲಕ್ಷ್ಮೀ  ದೇವಿಯ ಮುಂದೆ ಪೂಜಾ ಕೋಣೆಯಲ್ಲಿ ಒಂದು ತುಪ್ಪದ ದೀಪವನ್ನು ನಿಮ್ಮ ಮನೆಯಲ್ಲಿ ಬೆಳಗಿಸಿ ಪೂಜೆ ಮಾಡುವುದರಿಂದ ಲಕ್ಷ್ಮೀ ದೇವಿಯ  ಕೃಪಾ ಕಟಾಕ್ಷಕ್ಕೆ ನೀವು  ಸಹ ಪಾತ್ರರಾಗುವಿರಿ.

 

 

ದೀಪಾವಳಿ ಎಂದರೆ ಬೆಳಕಿನ ಹಬ್ಬ ಅಂದರೆ ದೀಪಗಳ ಹಬ್ಬ ಎಂದರ್ಥ.ಲಕ್ಷ್ಮೀ ದೇವಿಯನ್ನು ಆ ದಿನ ನೀವೆಲ್ಲರೂ ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ  ಲಕ್ಷ್ಮೀಯು ಸುಖ, ಸೌಭಾಗ್ಯ,ದನ, ಸಿರಿ, ಸಂಪತ್ತನ್ನು ಸಾಮಾನ್ಯ ಜನರಿಗೂ ಸಹ ಕರುಣಿಸುವಳು.

ಒಂದು ತುಪ್ಪದ ದೀಪವನ್ನು ಈ ಸ್ಥಳದಲ್ಲಿ ತಾಜಾ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ   ನಂತರ ಲಕ್ಷ್ಮಿ ದೇವಿಯ ಮುಂದೆ ಕುಳಿತು ನೂರಾ ಎಂಟು ಬಾರಿ ಈ ಮಂತ್ರವನ್ನು ಜಪಿಸಿ. “ಓo ಮಹಾಲಕ್ಷ್ಮೀ ದೇವಿಯೇ  ನಮಃ”

 

 

ನಂತರ ಆ ದೀಪವನ್ನು ನಿಮ್ಮ  ಮನೆಯಲ್ಲಿ ನೀವು ಹಣವನ್ನು ಇಡುವ ಸ್ಥಳದಲ್ಲಿ ಆ ದೀಪವನ್ನು ಇಟ್ಟರೆ ಉತ್ತಮ.  ಆ ದೀಪವು ರಾತ್ರಿ ಪೂರ್ತಿ ಉರಿಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಅಭಾವ ಉಂಟಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top