fbpx
ಮನೋರಂಜನೆ

ತಮ್ಮ ಭಾವಿ ಗಂಡ ಚಿರು ಬರ್ತ್ ಡೇಗೆ ಮೇಘನಾ ರಾಜ್ ವಿಶ್ ಮಾಡಿದ್ದು ಹೇಗೆ ಗೊತ್ತಾ?

ತಮ್ಮ ಭಾವಿ ಗಂಡ ಚಿರು ಬರ್ತ್ ಡೇಗೆ ಮೇಘನಾ ರಾಜ್ ವಿಶ್ ಮಾಡಿದ್ದು ಹೇಗೆ ಗೊತ್ತಾ?

 

 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ರವರು ಮದುವೆ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿದೆ. ಖಾಸಗಿ ಸಮಾರಂಭಗಳಲ್ಲಿ ಈ ಇಬ್ಬರು ಒಟ್ಟೊಟ್ಟಾಗಿ ಭಾಗವಹಿಸಿದ್ದರಿಂದ ಇವರಿಬ್ಬರ ಮಧ್ಯೆ ಪ್ರೀತಿ ಆಗಿದ್ದು ಈಗ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಕ್ಷಿತ್ ರಶ್ಮಿಕಾ ಬಳಿಕ ಮತ್ತೊಂದು ತಾರಾ ಜೋಡಿ ಹಸೆಮಣೆಯೇರಲು ಸಜ್ಜಾಗಿದ್ದಾರೆ…

 

 

ಚಿರಂಜಾವಿ ಸರ್ಜಾ ಅವರಿಗೆ ನೆನ್ನೆ ಹುಟ್ಟುಹಬ್ಬದ ಸಂಭ್ರಮ..ಚಿತ್ರರಂಗದ ಸ್ನೇಹಿತರೂ ಸೇರಿ ಅನೇಕರು ಚಿರು ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ವಿಶೇಷವೆಂದರೆ ಚಿರು ರ ಭಾವಿ ಪತ್ನಿ ಮೇಘನಾ ರಾಜ್ ಕೂಡ ತಮ್ಮ ಭಾವಿ ಪತಿಗೆ ವಿಶ್ ಮಾಡಿದ್ದಾರೆ.. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿರು ಸರ್ಜಾ ಜೊತೆ ತಾವಿರುವ ಒಂದು ಫೋಟೋವನ್ನು ಹಾಕಿ “Happy Birthday Prince Charming ” ಎಂದು ಬರೆದುಕೊಂಡಿದ್ದಾರೆ..

 

 

ಮೇಘನಾ ರಾಜ್ ವಿಶ್ ಮಾಡಿದ್ದಕ್ಕೆ ಪ್ರತಿಯಾಗಿ ಚಿರು ಸರ್ಜಾ ಟ್ವೀಟ್ ಮಾಡಿದ್ದು “thank you my princess” ಎಂದು ಟ್ವೀಟ್ ಮಾಡಿದ್ದಾರೆ.. ಇನ್ನು ಅಕ್ಟೊಬರ್ 22 ರಂದು ಚಿರು ಮತ್ತು ಮೇಘನಾ ರಾಜ್ ರವರ ನಿಶ್ಚಿತಾರ್ಥ ಬೆಂಗಳೂರಿನ ಅವರ ಮನೆಯಲ್ಲಿ ಸಾಂಪ್ರದಾಯಕವಾಗಿ ನಡೆಯಲಿದೆ. ಡಿಸೇಂಬರ್ ಎರಡನೇ ವಾರದಲ್ಲಿ ಮಾಡುವೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top