fbpx
ದೇವರು

ದೀಪಾವಳಿಯ ದಿನ ಪಾಲಿಸಬೇಕಾದ ಸಣ್ಣಪುಟ್ಟ ನಿಯಮಗಳು ಇದರಿಂದ ಸಂಪತ್ತು , ದುಡ್ಡುಕಾಸು ಪ್ರಾಪ್ತಿಯಾಗುವುದು

ಕಾರ್ತಿಕ ಮಾಸದಲ್ಲಿ ಮತ್ತು

ದೀಪಾವಳಿಯ ಹಬ್ಬದ ದಿನ

ದೀಪವನ್ನು ಹಚ್ಚುವಾಗ

ಪಾಲಿಸಬೇಕಾದ ಕೆಲವು

ನಿಯಮಗಳು. ಮತ್ತು ಕಾರ್ತಿಕ

ಮಾಸದಲ್ಲಿ  ದೀಪಗಳ  ಮಹತ್ವ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ ದೀಪಾವಳಿ ಹಬ್ಬದಲ್ಲಿಯೂ ಕೂಡ ದೀಪಗಳಿಗೆ ವಿಶೇಷವಾದ ಮಹತ್ವವಿದೆ .ಇದರಲ್ಲಿ ಚಿಕ್ಕವರು, ದೊಡ್ಡವರು, ಮಹಿಳೆಯರು, ಪುರುಷರು ಎಂಬ ಭೇದ ಭಾವವಿಲ್ಲ.

 

 

ಯಾವ ವಯಸ್ಸಿನವರಾದರೂ ಸಹ ಇಷ್ಟಪಟ್ಟು ಈ ಬೆಳಕಿನ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ .

ಕಾರ್ತಿಕ ಮಾಸದಲ್ಲಿ ಸೂರ್ಯನು ದುರ್ಬಲ ನಾಗಿರುತ್ತಾನೆ. ಹಾಗಾಗಿ ಈ ಮಾಸದ ದಿನಗಳಲ್ಲಿ ಶಕ್ತಿ ಹಾಗೂ ಬೆಳಕು ಎರಡೂ ಸಹ ದುರ್ಬಲವಾಗುತ್ತವೆ.

ಈ ಸಮಯದಲ್ಲಿ ದೀಪ ಬೆಳಗಿ ಈಶ್ವರ ,ಶಕ್ತಿ ಹಾಗೂ ಬೆಳಕಿನ ನಡುವೆ ಸಂಬಂಧ ಸ್ಥಾಪನೆ ಮೂಡುತ್ತವೆ. ದೀಪ ಬೆಳಗುವುದರಿಂದ ಈಶ್ವರನ ಕೃಪೆ, ಶಕ್ತಿ ಹಾಗೂ ಸಮೃದ್ಧಿ ಎಲ್ಲವೂ ಪ್ರಾಪ್ತಿಯಾಗುತ್ತದೆ.

 

 

ಕಾರ್ತಿಕ ಮಾಸದಲ್ಲಿ ಬೆಳಗಿದ ದೀಪ ಎಂದಿಗೂ ಕೂಡ ವಿಫಲವಾಗುವುದಿಲ್ಲ. ಈ ಕಾರ್ತಿಕ ಮಾಸದಲ್ಲಿ ಬೇರೆ ಬೇರೆ ಪ್ರಾರ್ಥನೆಗಳಿಗೆ ಬೇರೆ ಬೇರೆ ದೀಪಗಳನ್ನು ಬೆಳಗಲಾಗುತ್ತದೆ.

ದೀಪವನ್ನು ಹಚ್ಚುವಾಗ ಪಾಲಿಸಬೇಕಾದ

ನಿಯಮಗಳು ….

ದೀಪಾವಳಿಯ ಹಬ್ಬದ ದಿನ ಮಣ್ಣಿನಿಂದ ಮಾಡಿದ ದೀಪಗಳನ್ನು ಮಾತ್ರವೇ ಹಚ್ಚಬೇಕು ಯಾವುದೇ ಕಾರಣಕ್ಕೂ ಮೇಣದ ಬತ್ತಿಯನ್ನು ಉಪಯೋಗಿಸಿ ದೀಪವನ್ನು ಹಚ್ಚಬೇಡಿ.ಬದಲಾಗಿ ದೀಪದಿಂದ ದೀಪವನ್ನು ಬೆಳಗಿಸಿ.

 

ದೀಪ ಬೆಳಗುವ ವೇಳೆ ತಲೆಯನ್ನು ಯಾವುದೇ ಕಾರಣಕ್ಕೂ ತಗ್ಗಿಸಬೇಡಿ.

ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪವನ್ನು ಹಚ್ಚಿ.

ಈ ಕಾರ್ತಿಕ ಮಾಸದಲ್ಲಿ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಡಿ. ಎಳ್ಳಿನ ಎಣ್ಣೆ ಅಥವಾ ಶುದ್ಧ ಹಸುವಿನ ತುಪ್ಪದಲ್ಲಿ ದೀಪವನ್ನು ಹಚ್ಚಬೇಕು.

 

ದೀಪವನ್ನು ಹಾರಿಸುವಾಗ ಬಾಯಿಯ ಮೂಲಕ ಗಾಳಿಯನ್ನು ಊದಿ ಎಂದಿಗೂ ಆರಿಸಬೇಡಿ. ಕೈಯಲ್ಲಿ ಗಾಳಿ ಬೀಸಿ ಅಥವಾ ಒಂದು ಬಟ್ಟೆಯ ಮೂಲಕ ಗಾಳಿ ಬೀಸಿ ಆರಿಸಿ.

ದೀಪಾವಳಿಯ ದಿನ ಪಾಲಿಸಬೇಕಾದ

ಸಣ್ಣಪುಟ್ಟ ನಿಯಮಗಳು ಇದರಿಂದ ಧನ

ಪ್ರಾಪ್ತಿಯಾಗುವುದು ….

ದೀಪಾವಳಿ ಹಬ್ಬದ ದಿನ ಬೆಳಗಿನ ಜಾವ ಬೇಗ ಎದ್ದು ಶುಚಿರ್ಭೂತರಾಗಿ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದೇವಿಗೆ ಹೊಸ ವಸ್ತ್ರವನ್ನು ಸಮರ್ಪಿಸಿದರೆ ಒಳ್ಳೆಯದು ಲಕ್ಷ್ಮೀ ಪ್ರಸನ್ನಳಾಗುವಳು.

 

 

ಈ ದಿನ ಸುಗಂಧ ದ್ರವ್ಯದಿಂದ ಕೂಡಿದ ಊದುಬತ್ತಿಯನ್ನು ಹೆಚ್ಚಾಗಿ ಮನೆಯಲ್ಲಿ ಹಚ್ಚುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ .

ದೀಪಾವಳಿ ಹಬ್ಬದಲ್ಲಿ ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅರಿಶಿನ ಹಾಕಿ ದೇವರ ಮನೆಯಲ್ಲಿ ಇಡಬೇಕು ಪೂಜೆ ಪ್ರಾರ್ಥನೆ ಆರತಿ ಎಲ್ಲವೂ ಮುಗಿದ ನಂತರ ಒಂದು ಹೂವಿನಿಂದ ಆ ನೀರನ್ನು ಮನೆಯಲ್ಲಿ ಸಿಂಪಡಿಸಬೇಕು.

 

 

ಮಿಕ್ಕ ನೀರನ್ನು ಯಾವುದಾದರೂ ಒಂದು ಹೂವಿನ ಗಿಡಕ್ಕೆ ಅಥವಾ ಅರಳಿ ಮರಕ್ಕೆ ಹಾಕಿದರೆ ದೇವಿ ಸ್ಥಿರವಾಗಿ ಮನೆಯಲ್ಲಿ ನೆಲೆಸಿರುತ್ತಾಳೆ.

ಕಡಲೆ ಬೆಳೆಯನ್ನು ಪೂಜೆಯ ಸಮಯದಲ್ಲಿ ಅಕ್ಷತೆಯಾಗಿ ದೀಪಾವಳಿಯ ದಿನ ವಿಶೇಷವಾಗಿ ಉಪಯೋಗಿಸಬೇಕು. ಪುಜೆಯು ಮುಗಿದ  ನಂತರ ಅದನ್ನು ಶೇಖರಣೆ ಮಾಡಿ ಅರಳಿ ಮರದ ಕೆಳಗೆ ಹಾಕಬೇಕು.

ಕಾರ್ತಿಕ ಮಾಸದಲ್ಲಿ  ವಾತಾವರಣದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳು ಆಗುತ್ತವೆ.

 

ಶುರುವಾಗುವುದರಿಂದ ಆಹಾರದಲ್ಲಿ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಮಸಾಲೆ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top