fbpx
ಕನ್ನಡ

ಸುಳ್ಳಾಯ್ತಾ “ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ” ಎಂಬ ಮಾತು..ತಮಿಳು ಅಭಿಮಾನಿಗಳಿಂದ ಕನ್ನಡಿಗರಿಗೆ ಹಿಗ್ಗಾ ಮುಗ್ಗ ಥಳಿತ..

ಸುಳ್ಳಾಯ್ತಾ “ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ” ಎಂಬ ಮಾತು..ತಮಿಳು ಅಭಿಮಾನಿಗಳಿಂದ ಕನ್ನಡಿಗರಿಗೆ ಹಿಗ್ಗಾ ಮುಗ್ಗ ಥಳಿತ..

 

 

ಕನ್ನಡಿಗರ ಮೇಲೆ ತಮಿಳು ನಟ ವಿಜಯ್ ಅಭಿಮಾನಿಗಳು ದರ್ಪತೋರಿದ್ದಾರೆ…ಕರ್ನಾಟಕದಲ್ಲೇ ಕನ್ನಡಿಗರ ಮೇಲೆ ಅನ್ಯಭಾಷಿಕರು ಈ ರೀತಿ ದೌರ್ಜನ್ಯ ಮಾಡುತ್ತಿರುವ ಕರ್ನಾಟಕದಲ್ಲೇ ಕನ್ನಡಿಗರಿಗೆ ರಕ್ಷಣೆ ಇಲ್ಲದ ಹೀನಾಯ ಸ್ಥಿತಿಗೆ ಬೆಂಗಳೂರು ಬಂದು ತಲುಪಿದೆ..ಕೇವಲ ಒಂದು ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲಿ ಹೋಗುತ್ತಿದ್ದ ಕನ್ನಡಿಗರ ಮೇಲೆ ತಮಿಳು ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ..

 

 

ತಮಿಳು ನಟ ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರವೂ ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ತೆರೆಕಂಡಿದ್ದು ಬೆಂಗಳೂರಿನ ಸಂಪಿಗೆ ಚಿತ್ರಮಂದಿರದಲ್ಲೂ ಕೂಡ ‘ಮೆರ್ಸಲ್’ ಚಿತ್ರ ಬಿಡುಗಡೆಯಾಗಿದೆ..ಥಿಯೇಟರ್ ಮುಂದೆ ನಿಲ್ಲಿಸಲಾಗಿರುವ ದೊಡ್ಡ ಕಟೌಟ್ ಗಳನ್ನ ಥಿಯೇಟರ್ ಮುಂದೆ ಹೋಗುತ್ತಿದ್ದ ಕನ್ನಡಿಗರು ನೋಡಿದ್ದಕ್ಕೆ ಅಲ್ಲಿದ್ದ ತಮಿಳು ವಿಜಯ್ ಅಭಿಮಾನಿಗಳು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ..

 

 

“ನಮ್ ಬಾಸ್ ಕಟೌಟ್ ಅನ್ನು ತಲೆ ಎತ್ತಿ ನೋಡ್ತೀಯಾ” ಎಂದು ತಮಿಳು ಅಭಿಮಾನಿಗಳು ನಡು ಬೀದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಟ್ಟಾಡಿಸಿಕೊಂಡು ಕನ್ನಡಿಗನಿಗೆ ಹೊಂದಿದ್ದಾರೆ..ಟ್ರಾಫಿಕ್ ಜಾಮ್ ಆಗಿದ್ದನ್ನು ಲೆಕ್ಕಿಸದೆ ಕನ್ನಡಿಗನ ಮೇಲೆ ಹೀನ ಮಾನವಾಗಿ ಹೊಡೆದಿದ್ದಾರೆ..ಈ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕನ್ನಡಿಗರು ತೀವ್ರವಾಗಿ ಖಂಡಿಸುತ್ತಿದ್ದು ಹಲ್ಲೆ ಮಾಡಿದವರನ್ನ ಬಂಧಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top