fbpx
ಸಮಾಚಾರ

ಮಗನ ಶಿಕ್ಷಣಕ್ಕಾಗಿ ಬೀದಿಯಲ್ಲಿ ಕ್ಯಾಂಟೀನ್ ಓಪನ್ ಮಾಡಿರುವ ಸಿನಿಮಾ,ಸೀರಿಯಲ್ ನಟಿ..! ಯಾರು ಗೊತ್ತಾ..?

ಮಗನ ಶಿಕ್ಷಣಕ್ಕಾಗಿ ಬೀದಿಯಲ್ಲಿ ಕ್ಯಾಂಟೀನ್ ಓಪನ್ ಮಾಡಿರುವ ಸಿನಿಮಾ,ಸೀರಿಯಲ್ ನಟಿ..! ಯಾರು ಗೊತ್ತಾ..?

 

 

ಸಿನಿಮಾ, ಧಾರಾವಾಹಿ ನಟ-ನಟಿಯರು ಎಂದರೇ ಸಾಕು ವೈಭವಯುತ, ಅಡಂಬರದ ಅದ್ದೂರಿ ಜೀವನ ನಡೆಸುತ್ತಾರೆ ಎನ್ನುವ ಅಭಿಪ್ರಾಯ ಜನರಲ್ಲಿ ಸಾಮಾನ್ಯವಾಗಿದೆ. ಮಲಯಾಳಂನ ಪೋಷಕ ತಾರೆ,ಕಿರುತೆರೆ ನಟಿಯೊಬ್ಬರು ತಮ್ಮ ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಹಗಲಲ್ಲಿ ಚಿತ್ರಗಳಲ್ಲಿ ನಟಿಯಾಗಿ ನಟಿಸುವ ಇವರು ರಾತ್ರಿಯಲ್ಲಿ ರಸ್ತೆಬದಿಯಲ್ಲಿ ಕ್ಯಾಂಟೀನ್ ವ್ಯಾಪಾರಿಯಾಗುತ್ತಾರೆ..

 

 

13 ವರ್ಷಗಳ ಹಿಂದೆಯೇ ಗಂಡನಿಂದ ವಿಚ್ಛೇದನ ನೀಡಿದ್ದ ಕವಿತಾ ಲಕ್ಷ್ಮೀ ಅವರು ತಮ್ಮ ಇಬ್ಬರು ಮಕ್ಕಳ ಹೊಣೆಯನ್ನು ವಹಿಸಿಕೊಂಡಿದ್ದಾರೆ..ಆರ್ಥಿಕ ಸಂಕಷ್ಟ ಎದುರಾಗಿದ್ದು ಈ ಪರಿಸ್ಥಿಯನ್ನು ಮೆಟ್ಟಿನಿಲ್ಲಲು ಹೈವೇ ಪಕ್ಕದಲ್ಲಿ ಕ್ಯಾಂಟಿನ್ ಆರಂಭಿಸಿ ದೋಸೆ, ಪಕೋಡ ಮುತಾಂದ ತಿಂಡಿಗಳನ್ನು ತಯಾರಿಸಿ ಮಾರುತ್ತಾರೆ..ತಮ್ಮ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸುವ ಸಲುವಾಗಿ ಅವರು ಸ್ಟ್ರೀಟ್ ಕ್ಯಾಂಟಿನ್ ಕವಿತಾರವರು ಸಾಲಮಾಡಿದ್ದು ಆ ಸಾಲವನ್ನು ತೀರಿಸುವುದಕ್ಕಾಗಿ ಎರಡನೇ ಕೆಲಸ ಕಂಡುಕೊಂಡಿದ್ದಾರೆ..

 

 

ತಮ್ಮ ಆರ್ಥಿಕ ಸಂಕಷ್ಟಗಳನ್ನು ಎದುರಿಸಲು ತಿರುವನಂತಪುರಂ ನ ರಸ್ತೆ ಬದಿಯಲ್ಲಿ ಕ್ಯಾಂಟೀನ್ ಓಪನ್ ಮಾಡಿರುವ ಕವಿತಾ ಲಕ್ಷ್ಮಿ ತಮ್ಮ ಕ್ಯಾಂಟೀನ್ ನಲ್ಲಿ ದೋಸೆ ಹಾಕುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ..ನಟಿ ಕವಿತಾ ಲಕ್ಷ್ಮೀ ಬಸವಣ್ಣವರ ಕಾಯಕವೇ ಕೈಲಾಸ ಎಂಬ ಮಾತನ್ನು ನೆನಪಿಸುತ್ತದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top