fbpx
ಮನೋರಂಜನೆ

ಆಶಿತಾರವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಡಲು ಅವರ ತಂದೆ ವೇದಿಕೆಗೆ ಬರಲಿಲ್ಲ ಯಾಕೆ..?ಆಶಿತಾ ಕಣ್ಣೀರಿನ ಕತೆಯನ್ನು ಕೇಳಿ..

ಆಶಿತಾರವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಡಲು ಅವರ ತಂದೆ ವೇದಿಕೆಗೆ ಬರಲಿಲ್ಲ ಯಾಕೆ..?ಆಶಿತಾ ಕಣ್ಣೀರಿನ ಕತೆಯನ್ನು ಕೇಳಿ..

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲೆ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದು ನಾಲ್ಕು ದಿನಗಳು ಕಳೆದಿದೆ..

 

 

ನೀವು ಬಿಗ್ ಬಾಸ್ ಕಾರ್ಯಕ್ರಮದ ವೀಕ್ಷಕರಾಗಿದ್ದರೆ ಒಂದು ವಿಷಯವನ್ನು ಗಮನಿಸಿರಬೇಕು ಅದೇನೆಂದರೆ 11 ಜನ ಸೆಲೆಬ್ರಿಟಿಗಳ ಪೈಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿರುವ ಆಶಿತಾ ಅವರು ಬಿಗ್’ಬಾಸ್ ಮನೆಗೆ ಮನೆಗೆ ಹೋಗುವ ಮುನ್ನ ಅವನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಡಲು ವೇದಿಕೆಯ ಬಳಿ ಅವರ ಪೋಷಕರಾಗಲಿ ಸ್ನೇಹಿತರಾಗಲಿ ಯಾರೂ ಕೂಡ ಬಂದಿರಲಿಲ್ಲ..ಮುಖ್ಯವಾಗಿ ಅವರ ಪೋಷಕರು ಬಂದಿರಲಿಲ್ಲ..ಯಾಕೆ ಗೊತ್ತಾ? ಮುಂದೆ ಓದಿ..

 

 

ನೀಲಿ, ಜೊತೆ ಜೊತೆಯಲಿ,ಸುಂದರಿ ಎಂಬ ಧಾರಾವಾಹಿಗಳಲ್ಲಿ ನಟಿಸಿರುವ ಆಶಿತಾ ರವರ ಜೀವನದಲ್ಲಿ ಏನೂ ಕೊರತೆಯಿಲ್ಲದ ಹಾಗೆ ಬೆಳೆದಿದ್ದರು..ಆಶಿತಾ ತಂದೆ ಅವರನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ರು, ಅವರನ್ನು ಎಲ್ಲೂ ಕಳುಹಿಸುತ್ತಿರಲಿಲ್ಲ, ಆಚೆ ಹೋಗುವುದಕ್ಕೂ ಬಿಡ್ತಿರಲಿಲ್ಲ.. ಆಶಿತಾ ಗೆ ಸಿನಿ ರಂಗದಲ್ಲಿ ನಟನೆಯ ಅವಕಾಶಗಳು ಬಹಳ ಬಂದಿದ್ದವು ಆದರೆ ಅವರ ತಂದೆ ಅವರನ್ನು ಹೊರಗಡೆ ಅವರ ತಂದೆ ಚಿತ್ರರಂಗವನ್ನು ಬಹಳ ಅರಿತಿದ್ದರಿಂದ ಅವರನ್ನು ಸಿನಿ ರಂಗಕ್ಕೆ ಎಂಟ್ರಿ ಕೊಡಲು ಒಪ್ಪಿಗೆ ಕೊಡಲಿಲ್ಲವಂತೆ.. ಆಗ ತನ್ನ ತಂದೆಯ ಮಾತಿಗೆ ವಿರುದ್ಧವಾಗಿ ಅವರಿಂದ ದೂರವಾಗಿ ಧಾರಾವಾಹಿಗಳಲ್ಲಿ ನಟಿಸಲು ಆಶಿತಾ ಆರಂಭಿಸಿದ್ದರು…ಆದರೆ ಆ ಪ್ರಾಜೆಕ್ಟ್ ನಲ್ಲೂ ಕೂಡ ಆಶಿತಾರವರಿಗೆ ಮೋಸವಾಗಿ ಅವರನ್ನು ಅರ್ಧದಿಂದಲೇ ಕೈಬಿಡಲಾಗಿತ್ತು.

 

 

ಹಲವು ನೋವುಗಳ ನಡುವೆಯೂ ಬಿಗ್ ಬಾಸ್ ಮನೆಗೆ ಹೋಗುವಾಗ ಬಿಗ್ ಬಾಸ್ ಮನೆಗೆ ನನ್ನನ್ನು ಕಳುಹಿಸಲು ವೇದಿಕೆಯ ಬಳಿ ಬನ್ನಿ ಎಂದು ಆಶಿತಾ ತನ್ನ ತಂದೆಯನ್ನು ಕರೆದಿರಲಿಲ್ಲವಂತೆ.,”ನನಗಿರೋದು ಒಂದೇ ಒಂದ್ ಆಸೆ,, ಅವರಾಗಿ ಅವರೇ ಯಾವುದಾದರು ವೇದಿಕೆಯ ಮೇಲೆ ನನ್ನನ್ನ ತಬ್ಬಿಕೊಂಡು ಪರವಾಗಿಲ್ಲ ನೀನು ಸಿನಿರಂಗದಲ್ಲಿ ಸಾಧನೆ ಮಾಡಿದ್ದಿಯ ಅಂತ ಹೊಗಳುವಂತೆ ಮಾಡಬೇಕು” ಎಂದು ಆಶಿಕಾ ತಮ್ಮ ನೋವನ್ನು ಬಿಗ್ ಬಾಸ್ ಮನೆಯಲ್ಲಿ ತೋಡಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top