fbpx
ಭವಿಷ್ಯ

ಮಕರ ರಾಶಿಯವರ ವ್ಯಕ್ತಿತ್ವ ಹೇಗಿದೆ ಅಂತ ಗೊತ್ತಾ ? ಈ ರಾಶಿಯವರ ವ್ಯಕ್ತಿತ್ವಕ್ಕೂ ರಾಶಿ ನಕ್ಷತ್ರಕ್ಕೂ ಇರುವ ಸಂಬಂಧವೇನು ತಿಳ್ಕೊಳ್ಳಿ..

ಮಕರ ರಾಶಿಯಲ್ಲಿ ಜನಿಸಿದವರ ಸ್ವಭಾವ ಮತ್ತು ವಿಶೇಷತೆಗಳು.

 

ಕಾಲಪುರುಷನ ಕರ್ಮ ರಾಶಿ ಮಕರ ರಾಶಿಯಾಗಿದೆ. ರಾಶಿಗಳಲ್ಲಿ ಇದು ಹತ್ತನೇ ರಾಶಿಯಾಗಿದ್ದು.ಮಕರ ರಾಶಿಯ ಅಧಿಪತಿ ಶನಿ ಗ್ರಹ.ಆದ್ದರಿಂದ  ಶನೈಶ್ಚರ ದೇವನ ಎಲ್ಲಾ ಗುಣಗಳು ಇವರಲ್ಲಿ ಅಡಕವಾಗಿರುತ್ತವೆ.

 

 

ಉತ್ತರಾಷಾಢಾ ನಕ್ಷತ್ರದ ಮೊದಲ ಮೂರು ಪಾದಗಳು, ಶ್ರವಣ ನಕ್ಷತ್ರದ ನಾಲ್ಕೂ ಪಾದಗಳು, ಧನಿಷ್ಠಾ ನಕ್ಷತ್ರದ ಮೊದಲ ಎರಡು ಪಾದಗಳು, ಈ ಮಕರ ರಾಶಿಗೆ ಬಂದು ಸೇರುತ್ತವೆ.

ಈ ಮಕರ ರಾಶಿಯನ್ನು ಪೃಥ್ವಿ ತತ್ವ ಹೊಂದಿದ್ದು ಇದು ಸ್ತ್ರೀ ರಾಶಿಯಾಗಿದ್ದು. ಇದು ತಮೋ ಗುಣದ ರಾಶಿಯಾಗಿದೆ.

ಈ ರಾಶಿಯಲ್ಲಿ ಜನಿಸಿದವರು ಅತಿ ಚತುರರು ಮತ್ತು ಎಲ್ಲ ರಾಶಿಯವರಿಗಿಂತ ಪರಿಶ್ರಮ ಪಡುತ್ತಾರೆ , ಕಷ್ಟಪಟ್ಟು ದುಡಿಯುವವರಾಗಿದ್ದಾರೆ.

ಈ ರಾಶಿಯ ಅಧಿಪತಿ ಶನೈಶ್ಚರ ದೇವನಾಗಿರುವುದರಿಂದ ಅವನಂತೆಯೇ ಈ ರಾಶಿಯವರು  ಜೀವನದಲ್ಲಿ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಾರೆ. ಶನೈಶ್ಚರ ದೇವನ ಗುಣಗಳು ಇವರಲ್ಲಿ ಬಂದಿರುತ್ತವೆ.

ಯಾರ ಪಾಪ ಕರ್ಮದ ಕೊಡ ತುಂಬಿರುವುದು ಅಂಥವರು ಈ ರಾಶಿಯವರ ಜೊತೆಗೆ ಹಗೆತನ, ದ್ವೇಷ ಮತ್ತು ವೈರತ್ವ ಬೆಳೆಸಿಕೊಳ್ಳುತ್ತಾರೆ. ವಿನಾಕಾರಣ ಈ ರಾಶಿಯವರನ್ನು ನಿರ್ಲಕ್ಷಿಸಿ ಲಘುವಾಗಿ ಪರಿಗಣಿಸಲು ಆರಂಭಿಸುವವರು ಕರ್ಮವನ್ನು ತುಂಬಿಕೊಳ್ಳುತ್ತಾರೆ. ಕೊನೆಗೆ ಈ ರಾಶಿಯವರ ಬಲೆಯಲ್ಲಿ ಸಿಲುಕಿ ಪಶ್ಚಾತ್ತಾಪ ಪಡುವ ಸಮಯ ಬರುತ್ತದೆ. ಹೀಗಾಗಿ ವೈರಿಗಳನ್ನು ನಾಶ ಮಾಡುವುದರಲ್ಲಿ ಎತ್ತಿದ ಕೈ ಮಕರ ರಾಶಿಯವರದು.

 

ವಿಷಕಾರಕ ಸರ್ಪಗಳು ಕೂಡ ಈ ಮಕರ ರಾಶಿಯವರು ಇರುವ ಕಡೆ ಹೋಗಲು ಹೆದರುತ್ತವೆ. ಇವರಲ್ಲಿ ಕ್ಷಮಾಗುಣ ಅಧಿಕವಾಗಿದೆ ಇತರರ ಕಷ್ಟಗಳಿಗೆ ಮರುಗುವುದು ಅವರಿಗಾಗಿ ಸಹಾಯವನ್ನು ಮಾಡುವುದು ಇವರ ಮೊದಲ ಗುಣ.

ಇವರು ನಂಬಿಕೆಗೆ ಅರ್ಹರು. ಸ್ನೇಹಿತರು ಮತ್ತು ಜನರು ಇವರನ್ನು ಹೆಚ್ಚಿನದಾಗಿ ನಂಬುತ್ತಾರೆ. ಇವರನ್ನು ನಂಬಿದ ಜನರು ದೇವರನ್ನು ನಂಬುತ್ತಾರೋ ಇಲ್ಲವೋ ಆದರೆ ಇವರನ್ನು ಮಾತ್ರ ಖಂಡಿತವಾಗಿಯೂ ನಂಬುತ್ತಾರೆ.

ದಾನ, ಧರ್ಮವನ್ನು ಮಾಡುವುದರಲ್ಲಿ ಎತ್ತಿದ ಕೈ ಇವರದ್ದು. ಸಮಾಜದ ಸಮಸ್ಯೆಗಳನ್ನು ಸಹ ಗಮನಿಸುತ್ತಾರೆ. ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂದು ಬಯಸುತ್ತಾರೆ.

ಯಾರನ್ನೇ ಆದರೂ ಕೂಡ ಅತೀ ಆಳವಾಗಿ ತುಂಬ ಗಾಢವಾಗಿ ಪ್ರೀತಿಸುತ್ತಾರೆ. ಆದ್ದರಿಂದ ಇವರಲ್ಲಿ ನಿಜ ಪ್ರೀತಿ ಸಿಗುವುದು ಖಂಡಿತ. ನಕಾರಾತ್ಮಕ ಶಕ್ತಿಗಳು ಇವರಿಗೆ ಸಹಾಯ ಮಾಡುತ್ತವೆ.

ಭೂತ , ಪ್ರೇತಾತ್ಮಗಳು ಕೂಡ  ಇವರನ್ನು ಹುಡುಕಿಕೊಂಡು ಬರುತ್ತವೆ ಮತ್ತು ಮಕರ ರಾಶಿಯವರಿಗೆ ಸಹಾಯ ಮಾಡುತ್ತವೆ . ಅವುಗಳಿಗೆ ಮುಕ್ತಿ ಕೂಡ ಈ ರಾಶಿಯವರಿಂದ ದೊರೆಯುತ್ತದೆ.

ಕರ್ಮ ರಾಶಿಯಾಗಿರುವ ಕಾರಣ ಶನಿ ಮತ್ತು ಕೇತು ಇವೆರಡು ಈ ರಾಶಿಯವರನ್ನು ನಿಗ್ರಹಿಸುತ್ತವೆ.

ಚಿಕಿತ್ಸಾ ಗುಣ ಇವರ ಕೈಯಲ್ಲಿ ಅಡಗಿರುತ್ತದೆ. ಇವರು ಹೇಳಿದ ಪರಿಹಾರ ಮತ್ತು ಚಿಕಿತ್ಸೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹಲವಾರು ಪ್ರಭಾವಿ ವ್ಯಕ್ತಿಗಳು ಸಹ ಇವರ ಸಹಾಯವನ್ನು ಬಯಸುತ್ತಾರೆ. ಒಮ್ಮೆಯಾದರೂ ಜೀವನದಲ್ಲಿ ಅಪಘಾತಗಳನ್ನು ಇವರು ಎದುರಿಸಿಯೇ ತೀರುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

3 Comments
Vijianand says:

Super it’s realy realy realy 1000 % correct

Ashwini says:

Right

Jagadish says:

Yes correct 🙂

To Top