fbpx
ದೇವರು

ಈ ಬಾರಿ ದೀಪಾವಳಿಯಲ್ಲಿ ಈ ಆರು ರಾಶಿಯವರಿಗೆ ಧನ ಪ್ರಾಪ್ತಿ ಸಿದ್ಧಿಸುತ್ತದೆ ಆದ್ದರಿಂದ ಅವರು ಕೆಲವು ನಿಯಮಗಳನ್ನು ಮತ್ತು ಮಂತ್ರಗಳನ್ನು ಜಪಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

ಈ ಬಾರಿ ದೀಪಾವಳಿಯಲ್ಲಿ ಈ ಆರು ರಾಶಿಯವರಿಗೆ ಧನ ಪ್ರಾಪ್ತಿ ಸಿದ್ಧಿಸುತ್ತದೆ

ಆದ್ದರಿಂದ ಅವರು ಕೆಲವು ನಿಯಮಗಳನ್ನು ಮತ್ತು ಮಂತ್ರಗಳನ್ನು ಜಪಿಸಿದರೆ

ಎಲ್ಲವೂ ಒಳ್ಳೆಯದಾಗುತ್ತದೆ.

ಎಲ್ಲರೂ ಎದುರು ನೋಡುತ್ತಿರುವ ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಕರ್ನಾಟಕದಲ್ಲಿ ಹಬ್ಬದ ಸಂಭ್ರಮ ಆರಂಭವಾಗಿದೆ. ಅಂತರ್ಜಾಲ ಮಾರುಕಟ್ಟೆಯಲ್ಲಿ  ಕೊಂಡುಕೊಳ್ಳುವ ವಸ್ತುಗಳು, ಶಾಪಿಂಗ್ ಮಳಿಗೆಗಳು, ಎಲ್ಲಾ ಬ್ರ್ಯಾಂಡೆಡ್ ಮೊಬೈಲ್ ಫೋನ್ ಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಆಫರ್ ಗಳೊಂದಿಗೆ ಮುಂದೆ ಬಂದಿದೆ.

ಇನ್ನು ಹಬ್ಬದ ಸಂಗತಿಗೆ ಬಂದರೆ  ದೀಪಾವಳಿಯ ದಿನ ಲಕ್ಷ್ಮೀ  ಮಾತೆಯೇ  ಸ್ವತಃ ಭೂಮಿಗೆ ಇಳಿದು ಬರುತ್ತಾರೆ ಎನ್ನುತ್ತಾರೆ.ಹಾಗಾಗಿ ಆ ದಿನ ಲಕ್ಷ್ಮಿ ದೇವಿಗೆ ಪೂಜೆ ಮಾಡುವುದು ಅನೇಕ ವರ್ಷಗಳಿಂದ ಸಂಪ್ರದಾಯವಾಗಿ ಬಂದಿದೆ. ಈ ವರ್ಷ ದೀಪಾವಳಿಯಲ್ಲಿ ಆರು ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ .

 

 

ಈ ಆರು ರಾಶಿಗಳು ಯಾವುವೆಂದರೆ ಕಟಕ, ತುಲಾ, ಮಕರ, ಕುಂಭ, ಮಿಥುನ ಹಾಗೂ ಮೀನ ರಾಶಿಗಳು. ಇತರರಿಗಿಂತ ಹೆಚ್ಚು ಅದೃಷ್ಟವನ್ನು ಗೆಲುವನ್ನು ದನವನ್ನು ಲಕ್ಷ್ಮೀ ದೇವಿಯೂ ಇವರಿಗೆ ಕೊಂಡು ತರುತ್ತಾರಂತೆ. ಈ ರಾಶಿಯವರು ದೀಪಾವಳಿಯ ದಿನ ಪೂಜೆ ಮಾಡಿ ಕೆಲವು ನಿಯಮಗಳನ್ನು ಪಾಲಿಸಿದರೆ ಮತ್ತು ಕೆಲವು ಮಂತ್ರಗಳನ್ನು ಜಪಿಸಿದರೆ ಮರೆಯಲಾಗದ ದೀಪಾವಳಿ ಈ ವರ್ಷ  ಇವರಿಗಿದು ಎಂದು ಹೇಳುತ್ತಿದ್ದಾರೆ.

 

 

 ಇನ್ನು ದೀಪಾವಳಿಯ ಹಿನ್ನೆಲೆಯಲ್ಲಿ ಲಕ್ಷ್ಮಿ ಕೃಪೆ ಪಡೆಯಬೇಕಾದರೆ ಏನೆಲ್ಲ ಮಾಡಬೇಕು ಗೊತ್ತಾ  ?

ಲಕ್ಷ್ಮೀದೇವಿಗೆ ಸಂಜೆ ಸಮಯದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಪೂಜೆ ಮಾಡಬೇಕು .ಈ ಆರು ರಾಶಿಯವರು ದೀಪಾವಳಿಯ  ದಿನ ತಪ್ಪದೇ ಲಕ್ಷ್ಮೀ  ದೇವಿಗೆ ಪೂಜೆ ಮಾಡಬೇಕು. ಇವರು ಧನಲಕ್ಷ್ಮೀ ದೇವಿಯ ಜೊತೆಗೆ ಕುಬೇರ ದೇವನಿಗೆ ಮತ್ತು ಗಣಪತಿಗೂ ಸಹ ಪೂಜೆ ಮಾಡಬೇಕು.

 

ಲಕ್ಷ್ಮೀ ದೇವಿಯ ಹೊಸ ಫೋಟೋ ಒಂದನ್ನು  ಖರೀದಿಸಿದರೂ ಸಹ ಉತ್ತಮ. ಇದನ್ನು ದೀಪಾವಳಿಯ ದಿನ ಪೂಜಾ ಮಂದಿರದಲ್ಲಿಟ್ಟು ಪೂಜೆ ಮಾಡಬೇಕು. ಕುಬೇರನಿಗೆ ನೀರನ್ನು ಸಮರ್ಪಿಸಬೇಕು.ದೀಪಾವಳಿಯ ದಿನ ತೆಂಗಿನ ಪೊರಕೆಯೊಂದನ್ನು ಕೊಂಡುಕೊಂಡು ಬಂದು ಅದರಿಂದ ಮನೆಯನ್ನು ಸ್ವಚ್ಛ ಮಾಡಿದರೆ ಉತ್ತಮ.

ಮನೆಯಲ್ಲಿ ಎಲ್ಲ ಕಡೆಯೂ ಬೆಳಕು ಬರುವಂತೆ ದೀಪಗಳನ್ನು ಬೆಳಗಿಸಬೇಕು . ಶ್ರೀ ಮಹಾಲಕ್ಷ್ಮಿ ದೇವಿಗೆ ಬೆಳಕೆಂದರೆ ಇಷ್ಟ. ಹಾಗೆ ಮನೆಯಲ್ಲಿ ಹನ್ನೊಂದು ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿಸಬೇಕು. ಅದೇ ರೀತಿ ಒಂದು ಚತುರ್ಮುಖ ದೀಪವನ್ನು ಬೆಳಗಬೇಕು. ಅಂದರೆ ನಾಲ್ಕು ದಿಕ್ಕುಗಳಲ್ಲಿಯೂ ಸಹ ದೀಪವು ಪ್ರಕಾಶಮಾನವಾಗಿ ಒಂದೇ ದೀಪದಲ್ಲಿ ಉರಿಯುತ್ತಿರಬೇಕು.

 

 

ಇದರ ಜೊತೆಗೆ ಈ ಆರು ರಾಶಿಯವರು ದೀಪಾವಳಿಯ ದಿನ ಈ ಮಂತ್ರಗಳನ್ನು ಜಪಿಸಿದರೆ ನಿಮ್ಮ ಕಷ್ಟಗಳು ಪರಿಹಾರವಾಗಿ ನಿಮಗೆ ನಿಮ್ಮ ಆಸೆಗಳು ಸರಾಗವಾಗಿ ಈಡೇರಲು ಸಹಾಯವಾಗುತ್ತದೆ.

ಲಕ್ಷ್ಮೀ ದೇವಿಯ ಮಂತ್ರವನ್ನು ಕಲಿಯುವುದು ಬಹಳ ಸುಲಭ ಇವುಗಳನ್ನು ಪಠಿಸುವುದರಿಂದ ಶೀಘ್ರದಲ್ಲಿಯೇ ಫಲಿತಾಂಶ ದೊರೆಯುತ್ತದೆ. ಮಂತ್ರವನ್ನು ಹೇಳುವಾಗ ಆರಾಮವಾಗಿ ಕುಳಿತುಕೊಂಡು ಸ್ಪಷ್ಟವಾಗಿ ಮಂತ್ರಗಳನ್ನು ಉಚ್ಚರಿಸಬೇಕು ಮತ್ತು ಪುನರಾವರ್ತಿಸಬೇಕು. ಸಾಮಾನ್ಯವಾಗಿ ನೂರಾ ಎಂಟು ಬಾರಿ ಮಂತ್ರಗಳನ್ನು ಹೇಳಲಾಗುತ್ತದೆ. ನೀವು ಮಂತ್ರವನ್ನು ಜೋರಾಗಿ ಪಿಸು ಗುಟ್ಟುಬಹುದು ಅಥವಾ ಮೌನವಾಗಿ ಮನಸ್ಸಿನಲ್ಲಿಯೂ ಸಹ ಹೇಳಬಹುದು. ಅದು ನಿಮ್ಮ ಹೃದಯ ಪೂರ್ವಕವಾಗಿ ಇರಬೇಕು. ಭಕ್ತಿ ಶ್ರದ್ಧೆಯಿಂದ ಕೂಡಿರಬೇಕು ಅಷ್ಟೇ .

ಆರ್ಥಿಕ ಸ್ಥಿತಿ ಸುಧಾರಣೆಗೆ ದೀಪಾವಳಿ ಹಬ್ಬದ ದಿನ ಲಕ್ಷ್ಮೀ ಪೂಜೆ ಮಾಡುವಾಗ ಈ ಮಂತ್ರವನ್ನು  ಜಪಿಸಬೇಕು “ಓಂ ಶ್ರೀ ಮಹಾಲಕ್ಷ್ಮೀ ದೇವಿಯ ನಮಃ” ಎನ್ನುವ ಮಂತ್ರವನ್ನು ಜಪಿಸಬೇಕು.

 

 

 ನಿಮ್ಮ ಸಮೃದ್ಧಿಗಾಗಿ “ಓಂ ಹ್ರೀಂ ಶ್ರೀಂ ಕ್ಲೀ೦ ಮಹಾಲಕ್ಷ್ಮೀ ದೇವಿಯೇ ನಮಃ”.

ಜೀವನದಲ್ಲಿ ಹೆಚ್ಚು ಸಂತೋಷವಾಗಿರಬೇಕು ಎಂದು ಬಯಸಿದರೆ “ ಓಂ ಶ್ರೀ ಶ್ರೀ ಆಯಾ ನಮಃ” ಎಂಬ ಮಂತ್ರವನ್ನು ಜಪಿಸಬೇಕು .

ಆಧ್ಯಾತ್ಮಿಕ ಶಕ್ತಿ ವೃದ್ಧಿಗಾಗಿ ಗಾಯತ್ರಿ ಮಂತ್ರವನ್ನು ಜಪಿಸಬೇಕು ಅದು  “ಓಂ ಮಹಾದೇವಿಚ ವಿದ್ಮಹೇ, ವಿಷ್ಣು ಪತ್ನಿಚ ಧೀಮಹೀ, ತನ್ನೋ ಲಕ್ಷ್ಮಿ ಪ್ರಚೋದಯಾತ್” ಈ ಮಂತ್ರವನ್ನು ಜಪಿಸಬೇಕು.

ದೀಪಾವಳಿ ಹಬ್ಬದ ದಿನ ಲಕ್ಷ್ಮೀ ದೇವಿಗೆ ಇರುವ ನೂರಾ ಎಂಟು ವಿಶೇಷವಾದ ಹೆಸರನ್ನು ಇಪ್ಪತ್ತೊಂದು ಬಾರಿ ಹೇಳಬೇಕು. ಇದು ಹಬ್ಬದ ವಿಶೇಷವಾದ ಸಂದರ್ಭದಲ್ಲಿ ಹೇಳಿದರೆ ಶುಭಫಲ ಪ್ರಾಪ್ತಿಯಾಗುವುದು.

 

 

ಇದರ ಜೊತೆಗೆ ಸಂಪತ್ತು, ಲಾಭ ,ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ರೋಗ ಮತ್ತು ಚಿಂತೆಗಳಿಂದ ಮುಕ್ತಿ. ಸುಂದರವಾದ ಬಾಳ ಸಂಗಾತಿ ಹಾಗೂ ಉತ್ತಮ ವೈವಾಹಿಕ ಜೀವನಕ್ಕಾಗಿ “ ಶ್ರಿಂ” ಎಂಬ ಮಂತ್ರವನ್ನು ಜಪಿಸಬೇಕು.

ಈ ರೀತಿ ಈ ಆರು ರಾಶಿಯವರು ಈ ನಿಯಮಗಳನ್ನು ಪಾಲಿಸಿದರೆ ಎಲ್ಲ ರೀತಿಯಲ್ಲೂ ಸಕಲವಾಗಿ ಒಳ್ಳೆಯದೇ ಆಗುವುದು.  ಕಡ್ಡಾಯವಾಗಿ ಈ ರೀತಿ ಮಾಡಿದರೆ ಜೀವನಪರ್ಯಂತ ಸುಖ ಸಂತೋಷದಿಂದ ಇರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top