fbpx
ಮನೋರಂಜನೆ

ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್..?ಏನಿದು ಹೊಸ ವಿವಾದ.

ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್..?ಏನಿದು ಹೊಸ ವಿವಾದ.

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ, ಕೆಲವು ದಿನಗಳ ಹಿಂದೆ ವಿವಾದ ಸೃಷ್ಟಿಸಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಟ ದರ್ಶನ್ ಮನೆ ವಿವಾದ ಮತ್ತೆ ಸುದ್ದಿಯಲ್ಲಿದೆ. ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿರುವ ಆರೋಪದ ಮೇಲೆ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದುಬಂದಿದೆ… ಅಕ್ರಮ ಜಾಗದಲ್ಲಿರುವ ದರ್ಶನ್ ಮನೆ, ಎಸ್ ಎಸ್ ಆಸ್ಪತ್ರೆ ಸೇರಿದಂತೆ ಒಟ್ಟು 69 ನಿವೇಶನಗಳನ್ನು ತೆರವುಗೊಳಿಸಲಾಗುತ್ತಿದೆ. ಮುಂದೆ ಓದಿ..

 

 

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಜಿಲ್ಲಾಧಿಕಾರಿ ವಿ ಶಂಕರ್ ಅವರು “ನಟ ದರ್ಶನ್ ಮನೆ ಹಾಗೂ ಎಸ್. ಎಸ್ ಆಸ್ಪತ್ರೆ ಸರ್ಕಾರದ ಬಿ ಖರಾಬು ಭೂಮಿಯಲ್ಲಿ ಬರುತ್ತದೆ..ಬಿ ಖರಾಬು ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅವಕಾಶವಿಲ್ಲ ಆದರೂ ಬಿ ಖರಾಬು ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ ಹೀಗಾಗಿ ಒತ್ತುವರಿ ತೆರವು ಖರ್ಚು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ದರ್ಶನ್ ಮನೆ ಹಾಗೂ ಎಸ್.ಎಸ್ ಆಸ್ಪತ್ರೆಯನ್ನು ಸರ್ಕಾರಿ ಭೂಮಿ ಎಂದು ಘೋಷಿಸಿ ಮುಂದೆ ಇದೇ ಕಟ್ಟಡಗಳನ್ನ ಸರ್ಕಾರಿ ಕಚೇರಿಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ” ಎಂದು ತಿಳಿಸಿದರು.

 

 

ದರ್ಶನ್ ಮನೆ ಹಾಗೂ ಎಸ್. ಎಸ್ ಆಸ್ಪತ್ರೆ ವಿಚಾರವಾಗಿ ಎರಡು ಬಾರಿ ಸರ್ವೆ ನಡೆಸಿ ಒತ್ತುವರಿದಾರರ ಹೆಸರು ಸಹಿತ ವರದಿ ನೀಡಿದ್ದೇವೆ. ಈ ಸರ್ವೆಯಲ್ಲಿ ದರ್ಶನ್‌ ಅವರ ಮನೆ, ಎಸ್‌.ಎಸ್‌. ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ. ಹಾಗಾಗಿ ಅಕ್ರಮ ಜಾಗದಲ್ಲಿರುವ ದರ್ಶನ್ ಮನೆ, ಎಸ್ ಎಸ್ ಆಸ್ಪತ್ರೆ ಸೇರಿದಂತೆ ಒಟ್ಟು 69 ನಿವೇಶನಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ವಿ ಶಂಕರ್ ತಿಳಿಸಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top