fbpx
ಆರೋಗ್ಯ

ವಾತಾವರಣದಲ್ಲಿ ಬಿಸಿ ಇಲ್ದಿದ್ರೂ ಕಾಲಿನ ಪಾದಗಳು ಯಾವಾಗ್ಲೂ ಉರಿ ಅನ್ಸುತ್ತೆ ಅನ್ನೋರು ಈ ಪರಿಹಾರಗಳು ಮಾಡ್ಕೊಂಡು ಹಾಯಾಗಿರಿ

ವಾತಾವರಣದಲ್ಲಿ ಬಿಸಿ ಇಲ್ದಿದ್ರೂ ಕಾಲಿನ ಪಾದಗಳು ಯಾವಾಗ್ಲೂ ಉರಿ ಅನ್ಸುತ್ತೆ

ಅನ್ನೋರು ಈ ಪರಿಹಾರಗಳು ಮಾಡ್ಕೊಂಡು ಹಾಯಾಗಿರಿ

 

ಕಾಲಿನ ಉರಿ ಸಮಸ್ಯೆಯು ಕಾಲಿನ ಪಾದಗಳ ‘ಸಿ ಫೈಬರ್’ ಎಂಬುವ ಫೈಬರ್ ನಾಶವಾಗುವುದರಿಂದ ಉಂಟಾಗುತ್ತದೆ ಸಾಮಾನ್ಯವಾಗಿ ಕಾಲಿನ ಪಾದಗಳು ಬಹಳ ಸೂಕ್ಷ್ಮವಾಗಿದ್ದು ಒಂದು ವೇಳೆ ಈ ‘ಸಿ ಫೈಬರ್’ ನಾಶವಾಗಿದ್ದರೆ ಮೆದುಳಿಗೆ ಸಾಮಾನ್ಯ ಉಷ್ಣಅಂಶಕ್ಕಿಂತ ಹೆಚ್ಚು ಬಿಸಿಯಾದಂತ ಸಂವೇದನೆಯನ್ನು ಮೆದುಳಿಗೆ ರವಾನೆ ಮಾಡುತ್ತದೆ ಇದರಿಂದ ಅಂಗಾಲ ಶಾಖ ಹೆಚ್ಚಿಗೆ ಇದ್ದಂತೆ ಭಾಸವಾಗಿ ಪಾದಗಳ ಉರಿ ಕಾಣಿಸಿಕೊಳ್ಳುತ್ತದೆ .

 

 

ಸಾಮಾನ್ಯವಾಗಿ ಕಾಲುಗಳಲ್ಲಿ ಸಂವೇದನೆಗಳನ್ನು ನರಗಳ ವ್ಯವಸ್ಥೆ ಗುರುತಿಸುತ್ತದೆ ಈ ನರಗಳ ಹಾನಿ ಅಥವಾ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ
ಈ ಸಮಸ್ಯೆಯು ಕೆಲವೊಮ್ಮೆ ಮಧುಮೇಹ , ಮಧ್ಯಪಾನ , ಕೆಲವು ವಿಷಾಣುಗಳ ಸೇವನೆ ಕಾರಣವಾಗುತ್ತದೆ .

ಬಿ ಜೀವಸತ್ವಗಳು, ಫೋಲಿಕ್ ಆಮ್ಲ, ಥಯಾಮಿನ್ ಅಥವಾ ಕ್ಯಾಲ್ಸಿಯಂನ ಕೊರತೆಗಳು ಸಹ ಕಾರಣವಾಗುತ್ತದೆ .

ಈ ಸಮಸ್ಯೆಗೆ ಮನೆಮದ್ದುಗಳು .

 

ತಣ್ಣೀರಿನ ಚಿಕಿತ್ಸೆ :

 

 

ಒಂದು ದೊಡ್ಡ ಬಟ್ಟಲು ತಣ್ಣಗಿನ ನೀರನ್ನು ತೆಗೆದುಕೊಂಡು ಪಾದಗಳನ್ನು ಆ ನೀರಿನಲ್ಲಿ ಇರಿಸಿ ಹತ್ತು ನಿಮಿಷಗಳ ತರುವಾಯ , ಟವೆಲ್ ನಲ್ಲಿ ಕಾಲುಗಳನ್ನು ಒರೆಸಿಕೊಳ್ಳಿ , ಹೀಗೆ ಮಾಡಿದರೆ ಕಾಲುಗಳಿಗೆ ಆರಾಮ ಎನಿಸುತ್ತದೆ ಅಷ್ಟೇ ಅಲ್ಲದೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ಕ್ರಿಯೆ ಮುಂದುವರಿಸಿ .

ಆಪಲ್ ಸೈಡರ್ ವಿನೆಗರ್ :

 

 

ಆಪಲ್ ಸೈಡರ್ ವಿನೆಗರ್ ಸಹ ನಿಮ್ಮ ಪಾದಗಳಲ್ಲಿ ಉರಿ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ಕಾಲು ಊತ ಕಡಿಮೆಯಾಗುತ್ತದೆ .

ಒಂದು ಬಟ್ಟಲು ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಟವಲ್ ಅನ್ನು ಅದ್ದಿ 10 ನಿಮಿಷಗಳ ಕಾಲ ಕಾಲಿನ ಸುತ್ತ ಸುತ್ತಿಕೊಳ್ಳಿ ಅಥವಾ ಒಂದು ಲೋಟ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ.

ಎಪ್ಸಮ್ ಸಾಲ್ಟ್ :

 

 

ಎಪ್ಸಮ್ ಉಪ್ಪು ½ ಕಪ್ ನೀರಿನ ಟಬ್ ಗೆ ಮಿಶ್ರಣ ಮಾಡಿ 10 ರಿಂದ 15 ನಿಮಿಷಗಳ ಕಾಲ ಪಾದವನ್ನು ಇರಿಸಿಕೊಳ್ಳುವುದು ವಾರದಲ್ಲಿ 3 ಬಾರಿ ಪುನರಾವರ್ತಿಸಿದರೆ ಪಾದಗಳಲ್ಲಿ ಉರಿ ಸಮಸ್ಯೆ ಕಡಿಮೆಯಾಗುತ್ತದೆ.

ಅರಿಶಿನ :

 

ಒಂದು ಲೋಟ ನೀರಿಗೆ ಒಂದು ಟೀ ಚಮಚ ಅರಿಶಿನವನ್ನು ಮಿಶ್ರಣ ಮಾಡಿ ದಿನಾ ಬೆಳಗ್ಗೆ ಕುಡಿಯಿರಿ , ಮತ್ತು ಅರಿಶಿನವನ್ನು ಪೇಸ್ಟ್ ರೀತಿ ಮಾಡಿಕೊಂಡು ಅಂಗಾಲುಗಳಿಗೆ ಹಚ್ಚಿಕೊಳ್ಳಿ .

ಶುಂಠಿ ರಸ :

ಎರಡು ಟೀ ಚಮಚ ಬೆಚ್ಚಗಿನ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಗೆ ಒಂದು ಟೀ ಚಮಚ ಶುಂಠಿ ರಸವನ್ನು ಮಿಶ್ರಣ ಮಾಡಿ ದಿನಕ್ಕೆ ಒಮ್ಮೆ 10 ರಿಂದ 15 ನಿಮಿಷಗಳ ಕಾಲ ಅಂಗಾಲುಗಳಿಗೆ ಹಚ್ಚಿ , ದಿನಕ್ಕೆ ಎರಡರಿಂದ ಮೂರು ಕಪ್ ಶುಂಠಿ ಚಹಾವನ್ನು ಕುಡಿಯಬಹುದು

ಹಾಗಲ ಕಾಯಿ ಗಿಡದ ಎಲೆಗಳು :

ಒಂದು ಹಿಡಿಯಷ್ಟು ಹಾಗಲ ಕಾಯಿ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ , ಆನಂತರ ದೊರೆಯುವ ಪೇಸ್ಟ್ ಅನ್ನು ಅಂಗಾಲುಗಳಿಗೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ .

ವಾಕಿಂಗ್ ಜಾಗಿಂಗ್ :

 

 

ಊತವನ್ನು ಕಡಿಮೆ ಮಾಡಲು ಮತ್ತು ಉರಿಯೂತ ಮತ್ತು ನೋವನ್ನು ನಿವಾರಿಸಲು ನೀವು ಮಾಡಬಹುದಾದ ಅತ್ಯುತ್ತಮ ವ್ಯಾಯಾಮಗಳಲ್ಲಿ ಈಜು ಕೂಡ ಒಂದು ವಾರದಲ್ಲಿ ಕನಿಷ್ಠ 5 ದಿನಗಳು ವಾಕಿಂಗ್ ಜಾಗಿಂಗ್ 30 ನಿಮಿಷಗಳ ಕಾಲ ಮಾಡಿ .

ಅಂಗಮರ್ದನ (ಮಸಾಜ್) :

 

 

ಬೆಚ್ಚಗಿನ ಸಾಸಿವೆ ಎಣ್ಣೆ ,ಆಲಿವ್ ತೈಲ ಅಥವಾ ಹರಳೆಣ್ಣೆ ಹಚ್ಚಿ 5 ನಿಮಿಷ ಮಸಾಜ್ ಮಾಡಿಕೊಂಡರೆ ಆರಾಮ ನೀಡುತ್ತದೆ.

ವಿಟಮಿನ್ ಬಿ6 :

 

 

ವಿಟಮಿನ್ ಬಿ೩ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿ ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top