fbpx
ಮನೋರಂಜನೆ

ಬಿಗ್ ಬಾಸ್ ಮುಗಿದ ಮೇಲೆ ಸಿನಿಮಾದಲ್ಲಿ ನಟಿಸಲು ಆಫರ್ ಬಂದ್ರೆ ನಿವೇದಿತಾ ಗೌಡ ಮಾಡಲ್ವಂತೆ..ಯಾಕೆ ಗೊತ್ತಾ..?

ಬಿಗ್ ಬಾಸ್ ಮುಗಿದ ಮೇಲೆ ಸಿನಿಮಾದಲ್ಲಿ ನಟಿಸಲು ಆಫರ್ ಬಂದ್ರೆ ನಿವೇದಿತಾ ಗೌಡ ಮಾಡಲ್ವಂತೆ..ಯಾಕೆ ಗೊತ್ತಾ..?

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

‘ಬಿಗ್ ಬಾಸ್’ ಮನೆಯನ್ನು ಪ್ರವೇಶ ಪಡೆದಿರುವ ಆರು ಜನ ಸಾಮಾನ್ಯ ವ್ಯಕ್ತಿಗಳ ಪೈಕಿ ಮೈಸೂರಿನ ಹುಡುಗಿ ನಿವೇದಿತಾ ಗೌಡ ಕೂಡ ಒಬ್ಬರು..ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಾಟ್ ಟಾಪಿಕ್..ಮುಂದೆ ಓದಿ.

 

 

ಬಿಗ್ ಬಾಸ್ ಮನೆಯ ಬಾರ್ಬಿ ಗರ್ಲ್ ನಿವೇದಿತಾ ಗೌಡ ಗೆ ಬಿಗ್ ಬಾಸ್ ಮುಗಿದ ಮೇಲೆ ಸಿನಿಮಾದಲ್ಲಿ ನಟಿಸಲು ಆಫರ್ ಬಂದ್ರೆ ಒಪ್ಕೋಳ್ಳೋದಿಲ್ಲವಂತೆ ಹಾಗಂತ ಸ್ವತಃ ನಿವೇದಿತಾ ಗೌಡ ಅವ್ರೆ ಬಿಗ್ ಬಾಸ್ ಅನ್’ಸೀನ್ ಎಪಿಸೋಡ್ ನಲ್ಲಿ ಹೇಳಿಕೊಂಡಿದ್ದಾರೆ. ನಿರ್ದೇಶಕ ದಯಾಳ್ ಅವರು ” ನಾವೆಲ್ಲಾ ಬಿಗ್ ಬಾಸ್ ನಿಂದ ಹೊರ ಹೋದಮೇಲೆ ಕಾರ್ಯಕ್ರಮದಲ್ಲಿನ ಸ್ಪರ್ಧಿಗಳನ್ನೆಲ್ಲಾ ಸೇರಿಸಿ ಒಂದು ಸಿನಿಮಾ ಮಾಡಿದರೆ ನೀನು ಆಕ್ಟ್ ಮಾಡ್ತಿಯಾ ” ಅಂತ ಕೇಳಿದಾಗ “ಮಾಡಲ್ಲ ಏಕೆಂದರೆ ನನಗೆ ಸಿನಿಮಾದಲ್ಲಿ ನಟಿಸುವುದು ಇಷ್ಟವಿಲ್ಲ ಆಗಲೇ ನನಗೆ ಸಿನಿಮಾದ ಆಫರ್ ಬಡಿದ್ರೂ ಒಪಿಕೊಂಡಿಲ್ಲಾ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top