ಮಾಹಿತಿ

ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ- ಆರ್.ಬಿ.ಐ

ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ- ಆರ್.ಬಿ.ಐ

 

 

ಬ್ಯಾಂಕ್ ಅಕೌಂಟ್ ಅನ್ನು ಆಧಾರ್ ಜೊತೆ ಲಿಂಕ್ ಮಾಡದೆ ಇದ್ದಲ್ಲಿ ನಿಮ್ಮ ಖಾತೆಗಳನ್ನು ಮುಚ್ಚಲಾಗುವುದು ಎಂದು sms ಮೂಲಕ ನಮ್ಮ ಬ್ಯಾಂಕುಗಳು ನಮಗೆ ತಿಳಿಸುತ್ತಿವೆ. ಮತ್ತು ನಮ್ಮಲ್ಲಿ ಅನೇಕರು ಈಗಾಗಲೇ ನಮ್ಮ ಪ್ಯಾನ್ ಕಾರ್ಡ್ ಅನ್ನು ಅನ್ನು 12-ಅಂಕಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ್ದೇವೆ. ಈ ನಡುವೆ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ಇದುವರೆಗೂ ಯಾವುದೇ ಸೂಚನೆ ನೀಡಿಲ್ಲ ಎಂದು ಆರ್.ಬಿ.ಐ ಗುರುವಾರ ಸ್ಪಷ್ಟಪಡಿಸಿದೆ.

 

 

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಕ್ಕೆ ಸಂಬಂಧಿಸಿದಂತೆ moneylife.in ನ ಯೋಗೇಶ್ ಸಪ್ಕಳೆ ಎನ್ನುವವರು ಸಲ್ಲಿಸಿದ್ದ RTI ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಕ್ ಉತ್ತರ ನೀಡಿ ಈ ಸಂಬಂಧ ಕೇಂದ್ರೀಯ ಬ್ಯಾಂಕ್ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಈ ಮಾಹಿತಿ ನೀಡಿದೆ..

 

 

ಜೂನ್ 1, 2017ರಿಂದ ಬ್ಯಾಂಕ್ ಖಾತೆ ತೆರೆಯಲು ಮತ್ತು ಪಾನ್ ಕಾರ್ಡ್ ಹೊಂದಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು..ಬ್ಯಾಂಕ್ ಅಕೌಂಟ್ ಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸುವ ವಿಚಾರ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದ್ದು, ಈ ವಿಚಾರದಲ್ಲಿ RBI ನ ಯಾವುದೇ ಪಾತ್ರವಿಲ್ಲ ಎಂದು RBI moneylife.in ನ ಯೋಗೇಶ್ ಸಪ್ಕಳೆ ಎನ್ನುವವರು ಸಲ್ಲಿಸಿದ್ದ RTI ಅರ್ಜಿಗೆ ಉತ್ತರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top