fbpx
ದೇವರು

ಕನಸಿನಲ್ಲಿ ಶಿವನ ಬಗೆಗಿನ ಈ ವಿಷಯಗಳು ಕಂಡು ಬಂದ್ರೆ ಅದನ್ನು ತೆಗೆದು ಹಾಕಬಾರದು ಪ್ರತಿಯೊಂದಕ್ಕೂ ಸೂಚನೆಗಳು ಇವೆ ಏನು ಅಂತ ತಿಳ್ಕೊಬೇಕಾದ್ರೆ ಮುಂದೆ ಓದಿ

ಕನಸಿನಲ್ಲಿ ಶಿವನನ್ನು ಕಂಡರೆ ಅದು ಏನನ್ನು ಸೂಚಿಸುತ್ತದೆ ?

 

ನಾವೆಲ್ಲರೂ ಕನಸುಗಳನ್ನು ಕಾಣುತ್ತೇವೆ.ಇಲ್ಲಿ ಪ್ರಸ್ತಾಪಿಸಿರುವ ಕನಸು ಎಂದರೆ ಹಗಲುಗನಸು ಅಥವಾ ದೂರದ ದೃಷ್ಟಿಯ ಕನಸಲ್ಲ,ರಾತ್ರಿ ಮಲಗಿದ ಬಳಿಕ ನಿದ್ದೆಯಲ್ಲಿ ಕಾಣುವ ಕನಸುಗಳು.ಪ್ರತಿಬಾರಿ ಮಲಗಿ ನಿದ್ದೆ ಹತ್ತಿದಾಗಲು ನಾವೆಲ್ಲರೂ ಕನಸುಗಳನ್ನು ಕಾಣುತ್ತೇವಾದರೂ ಅವುಗಳಲ್ಲಿ ಬಹುತೇಕ ಮುಂಜಾನೆ ಎದ್ದ ಬಳಿಕ ನೆನಪಿರುವುದಿಲ್ಲ.ಅಸ್ಪಷ್ಟವಾಗಿ ನೆನಪಿದ್ದರೂ ಯಾವುದೇ ತರ್ಕಕ್ಕೆ ಒಳಪಡದ ಕಾರಣ ಇವುಗಳ ಬಗ್ಗೆ ತಲೆ ಕೆಡಿಸಿ ಕೊಳ್ಳಬೇಕಾದ ಅಗತ್ಯವೂ ಇಲ್ಲ.

 

 

ಆದರೆ ಕೆಲವು ಕನಸುಗಳು ಮಾತ್ರ ಎಚ್ಚರವಾದ ಬಳಿಕ ಸ್ಪಷ್ಟವಾಗಿ ಎಚ್ಚರಿದ್ದು ಇದರಲ್ಲಿ ಕಂಡು ಬಂದ ವಿಷಯಗಳನ್ನು ಮನನ ಮಾಡಿಕೊಳ್ಳಲು ಹಲವಾರು ದಿನಗಳವರೆಗೆ ನೆನಪಿರುತ್ತವೆ.ಅಷ್ಟೇ ಏಕೆ ನಮ್ಮ ನಿತ್ಯದ ತಲೆ ಬಿಸಿಗಳಿಗೂ ಕನಸುಗಳ ಮೂಲಕ ಹಲವು ಪರಿಹಾರ ದೊರಕುತ್ತವೆ.

ಕನಸುಗಳಲ್ಲಿ ಧಾರ್ಮಿಕತೆ.

 

 

ಕನಸುಗಳು  ನೀವು ನಂಬುವ ಧರ್ಮದ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳು ಕಂಡು ಬಂದರೆ ಇದು ನೀವು ಸುತ್ತ ಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸೌಹಾರ್ದತೆ ಹೊಂದಿರುವ ಸಂಕೇತವಾಗಿದೆ. ಸಾಮಾನ್ಯವಾಗಿ ಭಕ್ತರು ತಮ್ಮ ಇಷ್ಟ ದೇವರ  ಮುಖಕ್ಕಿಂತ ಹೆಚ್ಚಾಗಿ ದೇವರ ಶಕ್ತಿ ಪರಾಕ್ರಮ ಅಥವಾ ಅವರು ಬಳಸುವ ಆಯುಧ ಮತ್ತು ಶಕ್ತಿಗಳನ್ನೇ ಹೆಚ್ಚಾಗಿ ಕಾಣುತ್ತಾರೆ.

ಕನಸಿನಲ್ಲಿ ಶಿವಲಿಂಗವನ್ನು ಕಾಣುವುದು.

 

 

ಈ ಕನಸಿನ ಮೂಲಕ ನಿಮಗೆ ನಿತ್ಯವೂ ತಪಸ್ಸಿನ ಅಥವಾ ಧ್ಯಾನದ ಅಗತ್ಯವಿದೆ ಎಂದು ತಿಳಿಸುತ್ತದೆ. ಏಕೆಂದರೆ ಶಿವಲಿಂಗವನ್ನು ಕನಸಿನಲ್ಲಿ ಕಾಣುವುದು ದೇವರನ್ನು ನೋಡುವ ಅತೀವ ಹಂಬಲವಾದ ಸಾಕಾರವಾಗಿದೆ.ಶಿವನನ್ನು ಧ್ಯಾನಿಸಿದರೆ ಖಂಡಿತ ಮನದಲ್ಲಿ ಪ್ರಕಟಗೊಳ್ಳುತ್ತಾನೆ.

ಶಿವಲಿಂಗ ಕನಸಿನಲ್ಲಿ ಕಂಡು ಬಂದರೆ ಇದು ನಿಮ್ಮ ವಿಜಯ. ನಿಮ್ಮ ತೊಂದರೆಗಳಿಗೆ ಕೊನೆ ಮತ್ತು ಜೀವನ ಸಾರ್ಥಕಗೊಂಡ ಭಾವವನ್ನು ತೋರಿಸುತ್ತದೆ.

 

ಕನಸಿನಲ್ಲಿ ಶಿವ ಪಾರ್ವತಿಯನ್ನು ಕಾಣುವುದು.

 

 

ಒಂದು ವೇಳೆ ಪಾರ್ವತಿ ಪರಮೇಶ್ವರರು ಕನಸಿನಲ್ಲಿ ಕಂಡು ಬಂದರೆ. ಇದು ನಿಮ್ಮ ಮನೆ ಬಾಗಿಲಿಗೆ ಆಗಮಿಸಿರವ ಅವಕಾಶಗಳ ಸಂಕೇತವಾಗಿದೆ.  ಶೀಘ್ರವೇ ನಿಮಗೆ ಶುಭಸುದ್ದಿ ಬರಲಿದೆ.ಇದು ಆರ್ಥಿಕ ಲಾಭ,ಪ್ರಯಾಣದ ಅವಕಾಶ,ಮನೆಗೆ ಧಾನ್ಯ ಅಥವಾ ಆಹಾರದ ಆಗಮನ, ಸಮೃದ್ಧಿ ಆರೋಗ್ಯ,ಉದ್ಯೋಗ,ಸಂತಾನ ಮೊದಲಾದ ಯಾವುದೇ ವಿಷಯವಾಗಿರಬಹುದು.

 

ಶಿವನ ತಾಂಡವ ನೃತ್ಯವನ್ನು ಕಾಣುವುದು.

 

 

ಶಿವನ ತಾಂಡವ ನೃತ್ಯ ಭಾವೋದ್ವೇಗದ ಪ್ರತೀಕವಾಗಿದೆ.ನಾಟ್ಯ ದೇವರಾದ ನಟರಾಜನನ್ನು ಕನಸಿನಲ್ಲಿ ಕಂಡರೆ ಇದು ನಿಮ್ಮ ತೊಂದರೆಗಳು ಶೀಘ್ರದಲ್ಲಿಯೇ ನಿವಾರಣೆಯಾಗಲಿವೆ ಎಂಬ ಸಂಕೇತವಾಗಿದೆ. ಅಲ್ಲದೇ ನಿಮ್ಮ ಪ್ರಯತ್ನಗಳಿಗೆ ಶೀಘ್ರವೇ ಫಲ ಸಿಗಲಿದೆ. ಆದರೆ ಇದಕ್ಕೆ ಇನಷ್ಟು ಹೆಚ್ಚಿನ ಪ್ರಯತ್ನ ಅಗತ್ಯವಿದೆ ಎಂದು ಶಿವನು ತನ್ನ ನೃತ್ಯದ ಮೂಲಕ ನಿಮಗೆ ತಿಳಿಸುತ್ತಿದ್ದಾನೆ.

 

ಶಿವನ ಮಂದಿರವನ್ನು ಕಾಣುವುದು.

 

 

ಸಾಮಾನ್ಯವಾಗಿ ಮಂದಿರಗಳು,ಗೋಪುರಗಳು ಎತ್ತರವಾಗಿದ್ದು ಬಹಳ ದೂರದಿಂದಲೇ ಭಕ್ತರನ್ನು ದೇವರೆಡೆಗೆ ಬರಲು ದಾರಿ ತೋರುತ್ತದೆ. ಆದರೆ ಕನಸಿನಲ್ಲಿ ಶಿವನ ಮಂದಿರವನ್ನು ಮತ್ತು ಮಂದಿರದ ಗೋಪುರವನ್ನು ಕಂಡರೆ.ಇದು ನಿಮಗೆ ದ್ವಿಪುತ್ರರರನ್ನು ಹೊಂದುವ ಸಂಭವವನ್ನು ಸೂಚಿಸುತ್ತದೆ.ಅಲ್ಲದೇ ಒಂದು ವೇಳೆ ಬಹಳ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಕನಸಿನಲ್ಲಿ ಶಿವ ಮಂದಿರವನ್ನು ಕಂಡರೆ ಈ ಬೇನೆ ಅಥವಾ ಯಾತನೆ  ಬೇಗನೆ ಕಡಿಮೆಯಾಗುವ ಸೂಚನೆಯಾಗಿದೆ.

 

ಕನಸಿನಲ್ಲಿ ತ್ರಿಶೂಲವನ್ನು ಕಾಣುವುದು.

 

 

ಶಿವನ ತ್ರಿಶೂಲದ ಮೂರು ಮೊನೆಗಳು ಮನುಷ್ಯನ ಮೂರು ಸ್ಥಿತಿಗಳಾದ ಎಚ್ಚರ, ನಿದ್ದೆ ಮತ್ತು ಕನಸು. ಕನಸಿನಲ್ಲಿ ತ್ರಿಶೂಲವನ್ನು ಕಂಡರೆ ಇದು ನಿಮ್ಮ ಹಿಂದಿನ, ಇಂದಿನ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ್ದು. ಈ ಬಗ್ಗೆ  ಎಚ್ಚರದಿಂದಿರಲು ಸೂಚಿಸುತ್ತದೆ.

 

ಡಮರುಗವನ್ನು ಕನಸಿನಲ್ಲಿ ಕಾಣುವುದು.

 

 

ಡಮರುಗ ಸದಾ ವಿಸ್ತರಿಸುತ್ತಿರುವ ವಿಶ್ವ ಅಥವಾ ಬ್ರಹ್ಮಾಂಡದ ಪ್ರತೀಕವಾಗಿದೆ.ಅಲ್ಲದೇ ಡಮರುಗ ಶ್ರವಣ ಶಕ್ತಿಯ ಸಂಕೇತವೂ ಆಗಿದೆ.ಡಮರುಗವನ್ನು ಕನಸಿನಲ್ಲಿ ಕಾಣುವುದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಧನಾತ್ಮಕ ಶಕ್ತಿಯ ಹರಿಯುವಿಕೆ ಹಾಗೂ ತನ್ಮೂಲಕ ಎರಡೂ ಕಡೆ ಉನ್ನತಿಯನ್ನು ಪಡೆಯುವ ಸಂಕೇತವಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top