fbpx
ಮನೋರಂಜನೆ

ಬ್ರಿಟನ್ ನಲ್ಲಿ ದರ್ಶನ್ ಗೆ ಕೊಟ್ಟ ಪ್ರಶಸ್ತಿಯ ಬಗ್ಗೆ ಬ್ರಿಟನ್ ಸಂಸದ ವೀರೇಂದ್ರ ಶರ್ಮ ಕೊಟ್ಟ ಸ್ಪಷ್ಟನೆ ಏನು ಗೊತ್ತಾ..?

ಬ್ರಿಟನ್ ನಲ್ಲಿ ದರ್ಶನ್ ಗೆ ಕೊಟ್ಟ ಪ್ರಶಸ್ತಿಯ ಬಗ್ಗೆ ಬ್ರಿಟನ್ ಸಂಸದ ವೀರೇಂದ್ರ ಶರ್ಮ ಕೊಟ್ಟ ಸ್ಪಷ್ಟನೆ ಏನು ಗೊತ್ತಾ..?

 

 

ಕಳೆದ ಎರಡು ಮೂರು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ಕನ್ನಡ ನಟ ದರ್ಶನ್ ಗೆ ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿರುವ ಬಗ್ಗೆ ಬ್ರಿಟಿಷ್ ಲೇಬರ್ ಪಕ್ಷದ ಸಂಸದ ವೀರೇಂದ್ರ ಶರ್ಮಾ ಅವರು ಸ್ಪಷ್ಟನೆ ನೀಡಿದ್ದಾರೆ..

 

 

ಕರ್ನಾಟಕದ ಮಾಧ್ಯಮಗಳಲ್ಲಿ ಬ್ರಿಟಿಷ್ ಪಾರ್ಲಿಮೆಂಟ್ ದರ್ಶನ್ ರನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ ಆದರೆ ದರ್ಶನ್ ಅವರನ್ನು ಬ್ರಿಟಿಷ್ ಸರ್ಕಾರ ಆಗಲಿ ಪಾರ್ಲಿಮೆಂಟ್ ಆಗಲಿ ಆಹ್ವಾನಿಸಿಲ್ಲ ಎಂಬ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ..

 

 

ಇದೆ ವೇಳೆ “ದರ್ಶನ್ ರನ್ನು ಬ್ರಿಟನ್ ಪಾರ್ಲಿಮೆಂಟ್ ನ ಒಂದು ಖಾಸಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಗಿದೆ.. ದರ್ಶನ್ ರನ್ನು ಬ್ರಿಟನ್ ಪಾರ್ಲಿಮೆಂಟ್ ಆಹ್ವಾನಿಸಿದೆ ಎಂದು ತಪ್ಪಾಗಿ ಮಾಧ್ಯಮಗಳು ಬಿಂಬಿಸಬಾರದು. ದರ್ಶನ್ ಗೆ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ನೀಡಿಲ್ಲ ಅವರಿಗೆ ನೀಡಿರುವುದು ಬೇರೆ ಖಾಸಗಿ ಅವಾರ್ಡ್ ಈ ಖಾಸಗಿ ಕಾರ್ಯಕ್ರಮದಲ್ಲಿ ಬ್ರಿಟನ್ ಪಾರ್ಲಿಮೆಂಟ್ ನ ಯಾವುದೇ ಪಾತ್ರವಿಲ್ಲ ” ಎಂದು ಸ್ಪಷ್ಟನೆ ನೀಡಿದ್ದಾರೆ.

 

 

ಬ್ರಿಟನ್ ನಲ್ಲಿ ದರ್ಶನ್ ಗೆ ಕೊಟ್ಟ ಪ್ರಶಸ್ತಿಯ ಬಗ್ಗೆ ಬ್ರಿಟನ್ ಸಂಸದ ವೀರೇಂದ್ರ ಶರ್ಮ ಕೊಟ್ಟ ಸ್ಪಷ್ಟನೆ ಬಗ್ಗೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಟ್ವೀಟ್ ಮಾಡಿದ್ದು ನಟ ದರ್ಶನ್ ಅವರಿಗೆ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಬಗ್ಗೆ ಇಮೇಲ್ ಮೂಲಕ ಈ ಸ್ಪಷ್ಟೀಕರಣ ಸಿಕ್ಕಿದೆ ಎಂದು ಹೇಳಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top