fbpx
ಭವಿಷ್ಯ

ಮದುವೆಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ರಾಶಿ ಜೋಡಿಗಳು ಆಗಿದ್ದರೆ ಖಂಡಿತ ಮದುವೆ ಮಾಡ್ಕೋಬೇಡಿ ,ಈ ಜೋಡಿ ವಿಷಪೂರಿತ ಸಂಬಂಧ ಹೊಂದಿರುತ್ತವೆ ಎನ್ನುತ್ತೆ ಶಾಸ್ತ್ರ

ನೀವು ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಯಾವುದಾದರೂ

ಸಂಬಂಧವನ್ನು ಒಪ್ಪಿಕೊಳ್ಳುವ ಮುಂಚೆ ಎಚ್ಚರವಾಗಿ ಯೋಚಿಸಿ.  ಅಂತಹ ರಾಶಿ

ಜೋಡಿಗಳು ಯಾವುವು  ? ಎಂದು ನಾವು ಇಂದು ತಿಳಿದುಕೊಳ್ಳೋಣ ಬನ್ನಿ ….

 

ಎಲ್ಲ ಸಂಗತಿಗಳು ಕಡಿಮೆ ಪ್ರೀತಿಯಿಂದಲೇ ಕೊನೆಗೊಳ್ಳುವುದಿಲ್ಲ. ಕೆಲವು ಬಾರಿ ಸಂಗಾತಿಗಳಲ್ಲಿ ನಾನು ಎನ್ನುವ ಭಾವನೆ ಅಧಿಕವಾಗಿದ್ದು. ಆಗ ಅವರು ತಮ್ಮ ಅಹಂ ಎನ್ನುವ ಭಾವನೆಯಿಂದ ಹೊರಬರುವುದೇ ಇಲ್ಲ. ಇದು ಕೇಳಲು ಕಷ್ಟವಾದರೂ ಸಹ ಸತ್ಯವೇ ಆಗಿದೆ.

 

 

ಹೊಂದಾಣಿಕೆ ಎಂದರೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುವುದೇ ಹೊಂದಾಣಿಕೆ. ಒಬ್ಬರನ್ನು ಇನ್ನೊಬ್ಬರು ಗೌರವಿಸಬೇಕು. ಅವರ ಭಾವನೆಗಳನ್ನು ಹಂಚಿಕೊಳ್ಳಬೇಕು. ನಿರ್ಧಾರಗಳನ್ನು ವ್ಯಕ್ತಪಡಿಸಬೇಕು. ಆಗ ಅವರು ಅವುಗಳನ್ನು  ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂದು ನೋಡಬೇಕು.

 

ವಿಷಪೂರಿತ ಸಂಬಂಧಗಳು ಯಾವುವು ?

 

 

ಬಾಳ ಸಂಗಾತಿಗಳು ಯಾರು ತುಂಬಾ  ವರ್ಷಗಳು ಮತ್ತು ಸಮಯದವರೆಗೆ ಜೊತೆ ಇರುತ್ತಾರೋ. ಅವರು ತಮ್ಮ ಆತ್ಮ ಮತ್ತು ಹೃದಯ ಎರಡನ್ನೂ ತಮ್ಮ ಸಂಬಂಧದಲ್ಲಿ ಅತಿಯಾಗಿ ಬೇರೂರು ಬಿಟ್ಟಿರುತ್ತಾರೆ. ಎಲ್ಲಾ ಜಗಳ ಮತ್ತು ಕೊನೆಗೊಳ್ಳದ ಸಮಸ್ಯೆಗಳು ಬಗೆಹರಿಯದೆ  ಇವರು ಇನ್ನೂ ಜೊತೆಗೆ ಇದ್ದಾರೆ ಎಂದು ನಮಗೆ ಆಶ್ಚರ್ಯ ಪಡಿಸುತ್ತದೆ. ಅವರು ಯಾಕೆ ಇನ್ನೂ ಜೊತೆಗೆ ಒಟ್ಟಾಗಿಯೇ ಇದ್ದಾರೆಂದು  ಆಶ್ಚರ್ಯವನ್ನು ಸಹ ಉಂಟು ಮಾಡುತ್ತದೆ.

ರಾಶಿಗಳು ಮತ್ತು ಅವುಗಳ  ಸಂಬಂಧಗಳ ಪರಿಣಾಮಗಳು ಏನು ಎಂಬುದನ್ನು ತಿಳಿದುಕೊಳ್ಳೋಣ…

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನವೇ. ಯಾಕೆಂದರೆ ನಾವು ಹುಟ್ಟಿರುವ ನಕ್ಷತ್ರ, ರಾಶಿ ಮತ್ತು  ಸಮಯದ ಆಧಾರದ ಮೇಲೆ ಅವುಗಳನ್ನು ಅಗ್ನಿ, ಜಲ, ವಾಯು, ಭೂಮಿ ಮತ್ತು  ಆಕಾಶ  ಹೀಗೆ ವಿಭಾಗಿಸಲಾಗುತ್ತದೆ. ಇದು ನಮ್ಮ ಜೀವನದಲ್ಲಿ ಹೊಂದಾಣಿಕೆ ಹೊರ ಜಗತ್ತಿನ ಜನಗಳ ಜೊತೆ ಸಮಾಜದವರ ಜೊತೆ ನಾವು ಹೇಗೆ ಹೊಂದಾಣಿಕೆಯಾಗಿ ಹೇಗೆ ಜೊತೆ ಇರುತ್ತೇವೆ ಎಂದು ಕೂಡ ತಿಳಿಸುತ್ತದೆ .

ಸಿಂಹ ಮತ್ತು ಕಟಕ ರಾಶಿ.

 

ಇವರಿಬ್ಬರದ್ದು ಕ್ರಿಯಾತ್ಮಕ ರಸಾಯನ ಶಾಸ್ತ್ರ. ಆದರೆ ಕಟಕ ರಾಶಿಯವರು ಸೂಕ್ಷ್ಮ ಸ್ವಭಾವದ ಆತ್ಮಗಳು ಮತ್ತು ಸಿಂಹ ರಾಶಿಯವರು ರಕ್ಷಣೆ ಇಲ್ಲದವರು ಹಾನಿಯನ್ನು ಉಂಟು ಮಾಡುತ್ತಾರೆ. ಸಿಂಹ ರಾಶಿಯವರು ತಮ್ಮ ಭಾವನೆಗಳನ್ನು ಅತಿರೇಕವಾಗಿ ವ್ಯಕ್ತಪಡಿಸುತ್ತಾರೆ ಮತ್ತು ಈ ವರ್ತನೆಯು ಕಟಕ ರಾಶಿಯವರಿಗೆ ಕಿರಿಕಿರಿಯನ್ನು ಉಂಟುಮಾಡಿ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ಕಾರಣವಾಗುತ್ತದೆ .

ಮಕರ ಮತ್ತು ಕುಂಭ ರಾಶಿ.

 

ಈ ಎರಡು ರಾಶಿಯವರು ಕೂಡ ನಿರ್ಧರಿಸುವ ಸ್ವಭಾವವನ್ನು  ಹೊಂದಿರುವವರು. ಮಕರ ರಾಶಿಯವರು ಭಾವನೆಗಳನ್ನು ವ್ಯಕ್ತಪಡಿಸುವವರು ಮತ್ತು ಕುಂಭ ರಾಶಿಯವರು ಪ್ರಾಯೋಗಿಕವಾಗಿಯೇ ಎಲ್ಲವನ್ನೂ ಮಾಡಿ ತೋರಿಸುವವರು. ಇದು  ಮಕರ ರಾಶಿಯವರ ಮನಸ್ಸಿನಲ್ಲಿ  ಪ್ರಶ್ನೆಗಳನ್ನು ಉಂಟು ಮಾಡುತ್ತದೆ. ಆಗ ಈ ಇಬ್ಬರೂ ರಾಶಿಯವರು ಸಂಬಂಧದ ಮೌಲ್ಯವನ್ನು ಕಳೆದುಕೊಂಡು ಅದರ ಬೆಲೆಯನ್ನು ಅರಿಯದೆ ದೊಡ್ಡ ಜಗಳವಾಗಿ ಇವರ ಸಂಬಂಧಗಳು ಸಹ ಕೊನೆಯಾಗುತ್ತವೆ.

ಕನ್ಯಾ ಮತ್ತು ಮಿಥುನ ರಾಶಿ.

 

ಮಿಥುನ ರಾಶಿಯವರು ಕನಸು ಕಾಣುವ ಸ್ವಭಾವದವರು ಆದರೆ ಕನ್ಯಾ ರಾಶಿಯವರು ಭಾವನೆಗಳಿಂದ ದೂರವೇ ಇರುವವರು ಅದು ಅವರನ್ನು ಅಲ್ಲಿಂದ ಹೊರಗೆ ಹೋಗುವಂತೆ ಮಾಡುತ್ತದೆ. ಮಿಥುನ ರಾಶಿಯವರು ಒಂಟಿಯಾಗಿಯೇ ಇರುತ್ತಾರೆ. ಮಿಥುನ ರಾಶಿಯವರಿಗೆ ರಕ್ಷಣಾತ್ಮಕವಾಗಿ ಹೆಚ್ಚು ತೊಡಗಿಸಿಕೊಳ್ಳುವುದರಿoದ  ಅದು ತಮ್ಮನ್ನೇ ದುರ್ಬಲಗೊಳಿಸುತ್ತದೆ.

ವೃಷಭ ಮತ್ತು ತುಲಾ ರಾಶಿ.

 

ಇಲ್ಲಿ ಇವರಿಬ್ಬರೂ ಯಾವುದೇ ಹೊಂದಾಣಿಕೆಯಾಗುವ ಮತ್ತು  ಒಂದೇ ರೀತಿಯ ಸ್ವಭಾವ ಖಂಡಿತವಾಗಿಯೂ ಇರುವುದಿಲ್ಲ. ಅವರ ಪ್ರತ್ಯೇಕತೆಗೆ ಜಾಗವೇ ಇರುವುದಿಲ್ಲ . ಆದ್ದರಿಂದ ಯ‍ಾವ ಕೆಲಸ ಆಗುವುದಿಲ್ಲ. ವೃಷಭ ರಾಶಿಯವರು ಮೊಂಡುತನವನ್ನು ಹೊಂದಿರುವವರು ಆದರೆ ತುಲಾ ರಾಶಿಯವರು ಯಾವಾಗಲೂ ನಾವು ಸರಿಯಾಗಿ ಸರಿಯಾದ ಮಾರ್ಗದಲ್ಲಿಯೇ ನಡೆಯಬೇಕೆಂದು ಬಯಸುವವರಾಗಿರುತ್ತಾರೆ. ಅವರ ನಿರೀಕ್ಷೆಗಳು ಅಧಿಕವಾಗಿ ಹೆಚ್ಚಾಗಿಯೇ ಇರುತ್ತವೆ ಮತ್ತು ಅದು ಒಳ್ಳೆಯದೂ ಅಲ್ಲ.

ವೃಶ್ಚಿಕ ಮತ್ತು ಮೀನ ರಾಶಿ.

 

ಇವರಿಬ್ಬರದ್ದೂ ಒಂದು ಮಾರಕ ಜೋಡಿಯಾಗಿ ಪರಿಣಮಿಸಲಿದೆ. ಇಬ್ಬರೂ ಅತಿಯಾಗಿ ಭಾವನೆಗಳನ್ನು ಹೊಂದಿರುವವರು ಇಬ್ಬರೂ ಮನಸ್ಸಿನಲ್ಲಿ ಅನುಮಾನಗಳನ್ನು ಮುಖ್ಯವಾಗಿ ಹೊಂದಿರುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಸದಾ ಅನುಮಾನ ಪಡುತ್ತಲೇ ಇರುತ್ತಾರೆ ಆದ್ದರಿಂದ ವೃಶ್ಚಿಕ ರಾಶಿಯವರು ಸುಮ್ಮನೆ ಕುಳಿತುಕೊಳ್ಳುವವರಲ್ಲ ಮತ್ತು ಮೀನ ರಾಶಿಯವರು ತುಂಬಾ ಸೂಕ್ಷ್ಮವಾದ ವ್ಯಕ್ತಿಗಳು.ಅವರಲ್ಲಿರುವ  ಬೆಂಕಿಯಂತಹ ಶಕ್ತಿಯು ಎಲ್ಲವನ್ನೂ ನಾಶಮಾಡಬಹುದು ಏನೂ ಬಿಡದೇ ಎಲ್ಲವನ್ನೂ ಸುಟ್ಟು ಬೂದಿ ಮಾಡುವಂತಹ ಶಕ್ತಿ ಇವರಲ್ಲಿ ಅಡಗಿದೆ.

ಧನಸ್ಸು  ಮತ್ತು ಕಟಕ ರಾಶಿ.

 

ಕಟಕ ರಾಶಿಯವರು ಯಾವುದೇ ಪರಿಸ್ಥಿತಿಗೆ ಹೊಂದಾಣಿಕೆ ಆಗುವುದಕ್ಕೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾರೆ ಹಾಗೆ ಇರಲು ಸಹ ಇಷ್ಟಪಡುತ್ತಾರೆ. ಆದರೆ ಧನಸ್ಸು ರಾಶಿಯವರು ವೇಗವಾಗಿ ಮುನ್ನುಗ್ಗಿ ಸವಾಲನ್ನು ಒಡ್ಡುವವರ ಗಿದ್ದಾರೆ.ಇದೆಲ್ಲದರ ಹಿಂದೆ ದೈಹಿಕ ಸಂಬಂಧವೂ ಕೂಡ ಧನಸ್ಸು ರಾಶಿಯವರಿಗೆ ಅತಿ ಮುಖ್ಯವಾಗಿರುತ್ತದೆ ಆದರೆ ಕಟಕ ರಾಶಿಯವರು ಭಾವನಾತ್ಮಕ ಮನಸ್ಸನ್ನು ಭಾವನೆಗಳನ್ನು ಸಮನಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ.ಆದ್ದರಿಂದ ಎದುರಾಳಿ ಒಡ್ಡುವ ಜೋರಾದ ಶಕ್ತಿಯು ಸಾಮಾನ್ಯವಾಗಿ ಸಂಬಂಧವನ್ನೇ ಕೊಲ್ಲುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top