fbpx
ಮನೋರಂಜನೆ

ಮುಂದಿನ ವಾರ ರಿಲೀಸ್ ಆಗಿರೋ ಅಪ್ಪಟ ಕನ್ನಡಿಗರೇ ಮಾಡಿರುವ “ಸರ್ವಸ್ವ” ಚಿತ್ರಕ್ಕೆ ಇರಲಿ ನಿಮ್ಮ ಬೆಂಬಲ.

ಮುಂದಿನ ವಾರ ರಿಲೀಸ್ ಆಗಿರೋ ಅಪ್ಪಟ ಕನ್ನಡಿಗರೇ ಮಾಡಿರುವ “ಸರ್ವಸ್ವ” ಚಿತ್ರಕ್ಕೆ ಇರಲಿ ನಿಮ್ಮ ಬೆಂಬಲ.

 

 

ಬಿಗ್ ಬಾಸ್ ಕನ್ನಡ ಸೀಸನ್ 1 ರ ಸ್ಪರ್ಧಿಯಾಗಿ ಕನ್ನಡಿಗರ ಮನಗೆದ್ದಿದ್ದ ನಟ ತಿಲಕ್ ನೂತನ ಅಪ್ಪಟ ಕನ್ನಡ ಚಿತ್ರದಲ್ಲಿವೊಂದರಲ್ಲಿ ನಟಿಸುತ್ತಿದ್ದಾರೆ. ವಿಶೇಷವೇನೆಂದರೆ ಇದೆ ಮೊದಲಬಾರಿಗೆ ಡೈರೆಕ್ಟರ್ ಪಾತ್ರದಲ್ಲಿ ತಿಲಕ್ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರವನ್ನು ಶ್ರೇಯಸ್‌ ಕಬಾಡಿ ರವರು ನಿರ್ದೇಶನ ಮಾಡಿದ್ದಾರೆ. ಮುಂದೆ ಓದಿ..

 

 

ಇಂಜಿನಿಯರಿಂಗ್‌ ಮಾಡಿ, ಚಿತ್ರರಂಗಕ್ಕೆ ಬಂದಿರುವ ಶ್ರೇಯಸ್‌ ತಮ್ಮ ಅನುಭವಗಳನ್ನೇ ಚಿತ್ರವಾಗಿ ಮಾಡುತ್ತಿದ್ದಾರೆ..ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದಲ್ಲಿ ಮ್ಯೂಸಿಕ್‌, ಲವ್‌ ರೊಮ್ಯಾನ್ಸ್‌ ಸೇರಿದಂತೆ ಚಿತ್ರಕ್ಕೆ ಬೇಕಿರುವ ಎಲ್ಲಾ ಅಂಶಗಳಿವೆ.ಕೇರಳ, ಸಕಲೇಶಪುರ ಹಾಗೂ ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದಲ್ಲಿ ಮನರಂಜನೆಯಷ್ಟೆ ಅಲ್ಲದೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ’..

 

 

ಶ್ರೇಯಸ್‌ ಕಬಾಡಿ ರವರು ತಾವು ಸಿನಿಮಾ ಕ್ಷೇತ್ರದಲ್ಲಿ ಎದುರಿಸಿದ ಸವಾಲು ಮತ್ತು ಸಮಸ್ಯೆಗಳನ್ನು ಒಟ್ಟುಗೂಡಿಸಿ ಒಂದೊಳ್ಳೆ ಕತೆಯನ್ನು ರೆಡಿಮಾಡಿ ತಿಲಕ್ ಅವರ ಪಾತ್ರದ ಮೂಲಕ ಪ್ರೇಕ್ಷಕರಿಗೆ ತಿಳಿಸಲು ಮುಂದಾಗಿದ್ದಾರೆ.ಈಗಾಗಲೇ ಆಡಿಯೋ ಮತ್ತು ಟ್ರೈಲರ್ ಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ..

 

 

ಚಿತ್ರದಲ್ಲಿ ತಿಲಕ್‌ಗೆ ನಾಯಕಿಯಯರಾಗಿ ರನೂಷಾ ಕಾಶ್ವಿ‌ ಮತ್ತು ಮೇಘನಾ ಅಪ್ಪಯ್ಯ ನಟಿಸಿದ್ದಾರೆ. ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ ಮತ್ತು ಭುಪಿಂದರ್‌ ಸಿಂಗ್‌ ರಾಣಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ..ವಿಮಲ್ ಮತ್ತು ವಾಮ್ದೇವ್ ಅವರು ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ.¨ ಚಿತ್ರಕ್ಕೆ ಅವಶ್ಯವಾಗಿರುವ ಉಳಿದ ಕಲಾವಿದರಲ್ಲಿ ಸಾಕಷ್ಟು ಹೊಸ ಮುಖಗಳು ಸರ್ವಸ್ವ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡುತ್ತಿರುವೆ. ಸರ್ವಸ್ವ ಚಿತ್ರ ಮುಂದಿನ ವಾರ ಬಿಡುಗಡೆಯಾಗುತ್ತಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top