fbpx
ಆರೋಗ್ಯ

ಮುಖ, ಕುತ್ತಿಗೆ , ಪುರುಷರ ಖಾಸಗಿ ಅಂಗಗಳಲ್ಲಿ ಹೆಚ್ಚಾಗಿ ಕಾಣೋ ಈ ಗುಳ್ಳೆ ‘ಸೆಬಾಸಿಯೊಸ್ಸ್ ಸಿಸ್ಟ್ ‘ ಜಾಸ್ತಿ ದುಡ್ಡು ಖರ್ಚಾಗದೆ ವಾಸಿ ಆಗ್ಬೇಕಂದ್ರೆ ಈ ಮನೆಮದ್ದುಗಳು ಮಾಡ್ಕೊಳ್ಳಿ

 ಸೆಬಾಸಿಯೊಸ್ಸ್ ಸಿಸ್ಟ್:

 

 

ಸೆಬಾಸಿಯೊಸ್ಸ್ ಸಿಸ್ಟ್ ಸ್ವಲ್ಪ ಗಟ್ಟಿಯಾದ ಗುಳೆಗಳಂತೆ ಇರುತ್ತದೆ , ಚರ್ಮದೊಳಗೆ ನೀರು ತುಂಬಿದ ರೀತಿಯಲ್ಲಿ  ಉಬ್ಬುಕೊಂಡಿರುತ್ತದೆ. ಇದು ದೇಹದ ಯಾವ ಭಾಗದಲ್ಲಾದರೂ ಬರಬಹುದು , ಆದರೆ ಸಾಮಾನ್ಯವಾಗಿ ಮುಖ, ಕುತ್ತಿಗೆ ಯಲ್ಲಿ ಹೆಚ್ಚಾಗಿ ಕಾಣಬಹುದು .

 

ಇದಕ್ಕೆ ಯಾವುದೇ ಚಿಕಿಸ್ಯೆ ಇಲ್ಲ .ಆದರೆ ನಾವು ನಿಮಗೆ ಹೇಳು ವಂತ ಮನೆಯಲ್ಲೇ ಮಾಡುವಂತಹ ಮನೆಮದ್ದು ಗಳನ್ನ ಬಳಸಿಕೊಂಡು ನೀವು ಈ ಸಮಸ್ಯೆ ಯಿಂದ ಹೊರಗಡೆ ಬರಬಹುದು.

 

 

1.ಆಪಲ್ ಸಿಡೆರ್ ವಿನೆಗರ್ :

 

 

ಸೆಬಾಸಿಯೊಸ್ಸ್ ಸಿಸ್ಟ್ ಹೋಗಲಾಡಿಸಲು ಸುಲಭ ಮನೆಮದ್ದು ಆಪಲ್ ಸಿಡೆರ್ ವಿನೆಗರ್,ದಿನವೂ   ಒಂದು ಬಟ್ಟೆ ಯಲ್ಲಿ ಆಪಲ್ ಸಿಡೆರ್ ವಿನೆಗರ್ ಅನ್ನು ಹಾಕಿಕೊಂಡು ಸೆಬಾಸಿಯೊಸ್ಸ್ ಸಿಸ್ಟ್ ಆಗಿರುವ ಜಾಗದಲ್ಲಿ ಮಸಾಜ್ ಮಾಡುವುದರಿಂದ ನಿಮ್ಮ ಸಮಸ್ಯೆ ಅತಿ ಬೇಗ ದೂರ ವಾಗುತ್ತದೆ.

2.ಕಲ್ಲು ಉಪ್ಪು:

 

 

ಉಪ್ಪು ಬ್ಯಾಕ್ಟೀರಿಯಾ ಗಳ ವಿರುದ್ದ ಹೊರಡುವುದರಿಂದ ದಿನ ನೀವು ಸ್ನಾನ ಮಾಡುವ ನೀರಿಗೆ ಒಂದು ಸ್ವಲ್ಪ ಉಪ್ಪನ್ನು ಹಾಕಿ ಅದು ನಿಮಗೆ ಯಾವುದೇ ಸಮಸ್ಯೆ ಇದ್ದರೆ ದೂರ ವಾಗುವಂತೆ ಮಾಡುತ್ತದೆ

3.ಆಲೋ ವೆರಾ :

 

 

ಆಲೋ ವೆರಾ ನಿಮ್ಮ ಯಾವುದೇ ಚರ್ಮಕ್ಕೆ ಸಂಬಂಧ ಪಟ್ಟ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಕೊಡುತ್ತದೆ, ದಿನವೂ 2 ರಿಂದ 3 ಸಲ ಆಲೋ ವೆರಾವನ್ನು ಸೆಬಾಸಿಯೊಸ್ಸ್ ಸಿಸ್ಟ್ ಆಗಿರುವ ಜಾಗದಲ್ಲಿ ಹಚ್ಚುವುದರಿಂದ ನಿಮಗೆ ಈ ಸಮಸ್ಯೆ ಯಿಂದ ಪರಿಹಾರ ಸುಲಭವಾಗಿ ಸಿಗುತ್ತದೆ.

4.ಜೇನಿನ ತುಪ್ಪ:

 

 

ಜೇನಿನ ತುಪ್ಪವನ್ನು ಪುರಾತನ ಕಾಲದಿಂದ ಅರೋಗ್ಯ ಸಂಬಂಧ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ . ರಾತ್ರಿ ಮಲಗುವ ಮುಂಚೆ ಜೇನಿನ ತುಪ್ಪವನ್ನು  ಬಾಳೆ ಹಣ್ಣನು  ಸೇರಿಸಿ ಸೆಬಾಸಿಯೊಸ್ಸ್ ಸಿಸ್ಟ್ ಆಗಿರುವ ಜಾಗದಲ್ಲಿ ಅಚ್ಚಿಕೊಂಡು ಮಲಗುವುದರಿಂದ ಸೆಬಾಸಿಯೊಸ್ಸ್ ಸಿಸ್ಟ್ ಮಾಯವಾಗುತ್ತದೆ.

5.ಅರಿಶಿನ:

 

 

ಅರಿಶಿನ ಮೂಲತ ಬ್ಯಾಕ್ಟೀರಿಯಾ ಮತ್ತು ಇನ್ಫೆಕ್ಷನ್ ಗಳ ವಿರುದ್ದ ಹೊರಡುವ ಗುಣವನ್ನು ಹೊಂದಿರುವುದರಿಂದ ಸೆಬಾಸಿಯೊಸ್ಸ್ ಸಿಸ್ಟ್ ಗೆ  ಬಹಳ ಬೇಗ ಸುಲಭವಾಗಿ ಚೇತರಿಕೆ ಹೊಂದಲು ಸಹಾಯ ಮಾಡುತ್ತದೆ.

ಅರಿಶಿನದ ಜೊತೆ ಸ್ವಲ್ಪ ನೀರು ,ಮತ್ತು ಜೇನಿನ ತುಪ್ಪ ವನ್ನು ಸೇರಿಸಿ  ಸೆಬಾಸಿಯೊಸ್ಸ್ ಸಿಸ್ಟ್ ಹಾಕಿರುವ ಜಾಗದಲ್ಲಿ ಹಚ್ಚಿ ಸ್ವಲ್ಪ ಸಮಯ ಬಿಡಿ.

6.ಅರಳೇ ಎಣ್ಣೆ:

 

ಒಂದು ಬಟ್ಟೆಯಿಂದ ಸೆಬಾಸಿಯೊಸ್ಸ್ ಸಿಸ್ಟ್ ಆಗಿರುವ ಜಾಗದಲ್ಲಿ ಅರಳೇ ಎಣ್ಣೆಯಿಂದ ಹಚ್ಚಿ ,ನಂತರ ಸ್ವಲ್ಪ ಸಮಯ ಆದಮೇಲೆ ಬಿಸಿ ನೀರಿನಿಂದ ತೊಳೆಯ ಬೇಕು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top