fbpx
ಧರ್ಮ

ಡಾ.ರಾಜ್ ಕುಮಾರ್ ರವರಿಗೆ ‘ ಧ್ರುವ ತಾರೆ’ ಅನ್ನೋ ಬಿರುದಿದೆ ಆದ್ರೆ ಆಕಾಶದಲ್ಲಿ ಸದಾಕಾಲ ಪ್ರಕಾಶಮಾನವಾದ ಬೆಳಕಿನಿಂದ ಪ್ರಜ್ವಲಿಸೊ ‘ಧ್ರುವ’ ನ ಕಥೆ ಗೊತ್ತಾ ?

ಧೈರ್ಯವಂತ ಧ್ರುವನು ಆಕಾಶದಲ್ಲಿ ಧ್ರುವತಾರೆ  ನಕ್ಷತ್ರವಾದ ಕಥೆ.

 

 

ಪುರಾತನ ಕಾಲದಲ್ಲಿ ಒಮ್ಮೆ ರಾಜಾ ಉತ್ತಾನಪಾದ ಎಂಬವನು ಇದ್ದನು. ಅವನಿಗೆ ಇಬ್ಬರು ಹೆಂಡತಿಯರಿದ್ದರು. ಅವಳ ಮೊದಲ ಹೆಂಡತಿ ಸುನೀತಿಯು ಒಂದು ಕಾಡಿನ ಜನಾಂಗದ ಮುಖ್ಯಸ್ಥನ ಮಗಳಾಗಿದ್ದಳು. ಅವನ ಎರಡನೇ ಹೆಂಡತಿ ಸುರುಚಿಯು  ಒಬ್ಬ ಶ್ರೀಮಂತ ರಾಜನ ಮಗಳಾಗಿದ್ದಳು. ಸುನಿತಿಗೆ ಒಬ್ಬ ಮಗನಿದ್ದನು. ಅವನ ಹೆಸರು ಧ್ರುವ.ಸುರುಚಿಯ ಮಗನ ಹೆಸರು ಉತ್ತಮ.ಧ್ರುವನೆ  ದೊಡ್ಡ ಪುತ್ರನಾಗಿದ್ದರಿಂದ ಅವನು ದೊಡ್ಡವನಾದ ಮೇಲೆ ಮುಂದೆ   ಅವನೇ ರಾಜನಾಗುವ ಅರ್ಹತೆಯನ್ನು ಸಹ ಪಡೆದಿದ್ದನು.

ಆದರೆ ಸುರುಚಿಯು ತುಂಬಾ ಸ್ವಾರ್ಥಿಯಾಗಿದ್ದಳು. ಅವಳು ಸುನೀತಿಯ ಮಗ  ಧ್ರುವನನ್ನು ದ್ವೇಷ ಮಾಡುತ್ತಿದ್ದಳು. ಧ್ರುವನ ಬದಲಾಗಿ ಅವಳ ಮಗ ಉತ್ತಮನನ್ನು ರಾಜನಾಗಿ ಮಾಡಬೇಕೆಂದು ಅವಳ ಆಸೆಯಾಗಿತ್ತು. ಉತ್ಥಾನಪಾದ ರಾಜನು ಸುರುಚಿಯನ್ನೇ ಅಧಿಕವಾಗಿ ಹೆಚ್ಚಿಗೆ ಪ್ರೀತಿಸುತ್ತಿದ್ದನು. ಯಾಕೆಂದರೆ ಅವಳು ನೋಡಲು ಸುನೀತಿಗಿಂತ ಸುಂದರವಾಗಿದ್ದಳು. ಸುರುಚಿಯ ಉತ್ತಮನನ್ನು ರಾಜನಾಗಿ  ಮಾಡಲು ಬಯಸಿದ್ದಳು. ಸುನೀತಿ ಮತ್ತು ಸುನೀತಿಯ ಮಗ ಧ್ರುವನನ್ನು ರಾಜನು ಅರಮನೆಯನ್ನು  ಬಿಟ್ಟು ಹೋಗಲು ಆಜ್ಞೆ ಮಾಡಿದನು.

ತಾಯಿ ಮತ್ತು ಮಗ ಕಾಡಿನ ಹತ್ತಿರ ಒಂದು ಸಣ್ಣ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದರು. ಸುನೀತಿ ಧ್ರುವನಿಗೆ ದೇವರ ಕಥೆಗಳನ್ನು ಹೇಳುತ್ತಿದ್ದಳು.ಆದ್ದರಿಂದ ಧ್ರುವನು ಸದಾಕಾಲ ದೇವರ ಚಿಂತೆಯಲ್ಲೇ ಮಗ್ನನಾಗಿರುತ್ತಿದ್ದನು.

ಒಂದು ದಿನ ಧ್ರುವನು ತನ್ನ ತಂದೆಯ ಅರಮನೆಗೆ ಹೋದನು. ಅಲ್ಲಿ ಉತ್ತಮನು ತನ್ನ ತಂದೆಯ ತೊಡೆಯ ಮೇಲೆ ಕುಳಿತು ಕೊಂಡಿರುವುದನ್ನು ನೋಡಿದನು  ಆದ್ದರಿಂದ  ಅವನು ಸಹ ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಹೋದಾಗ ಸುರುಚಿಯ ಅವನನ್ನು ತಡೆದಳು ಮತ್ತು ಹೀಗೆ ಹೇಳಿದಳು. ನಿನಗೆ  ಕುಳಿತುಕೊಳ್ಳುಲು ಬೇರೆ ಯಾವುದೇ ಸ್ಥಳ ಸಿಗಲಿಲ್ಲವೇ ನಿನ್ನ ತಂದೆಯ ತೊಡೆಯ ಬೇಕೇ ?  ನನ್ನ ಮಗ ಮಾತ್ರ  ತನ್ನ ತಂದೆಯ ತೊಡೆಯ ಮೇಲೆ ಮತ್ತು ಈ ಅರಮನೆಯಲ್ಲಿ ವಾಸಿಸಲು ಯೋಗ್ಯನಾಗಿದ್ದಾನೆ ಆದರೆ ನೀನು ಯೋಗ್ಯನಲ್ಲ.

ಧ್ರುವನಿಗೆ   ಗಂಭೀರವಾಗಿ ಮನಸ್ಸಿಗೆ ದುಃಖ ಉಂಟಾಯಿತು. ಧ್ರುವನು ತನ್ನ ತಾಯಿಯ ಬಳಿ ಮರಳಿದನು ಸಪ್ಪೆ ಮುಖವನ್ನು ಹೊತ್ತು ಬಂದಿದ್ದನ್ನು ನೋಡಿದಳು.ಧ್ರುವನು  ಅವಳ ತಾಯಿಯನ್ನು ಕೇಳಿದಳು ನಾನು ಮಾತ್ರ ಯಾಕೆ ನನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬಾರದು ? ನನಗೆ ಯಾಕೆ ಅರಮನೆಯಲ್ಲಿ ವಾಸಿಸಲು ಜಾಗವಿಲ್ಲ ? ಸುನೀತಿಗೆ ತನ್ನ ಮಗನ ಪ್ರಶ್ನೆಗೆ ಏನು ಉತ್ತರ ಹೇಳಬೇಕೆಂದು ತಿಳಿಯಲಿಲ್ಲ.

 

 

ಧ್ರುವನು ತನ್ನ ತಾಯಿಯನ್ನು ಹೀಗೆ ಕೇಳಿದನು. ನೀನು ಹೇಳಿದೆ ನನಗೆ ದೇವರು ತುಂಬಾ ಒಳ್ಳೆಯವನೆಂದು. ಯಾರೂ ಅವನನ್ನು ಪೂಜಿಸುತ್ತಾರೋ ಅವರಿಗೆ ಆ ದೇವರು ಸಹಾಯ ಮಾಡುತ್ತೇನೆಂದು. ನಾನು ಹೋಗಿ ದೇವರನ್ನು ಹುಡುಕುತ್ತೇನೆ. ಅವನು ನನಗೆ ಖಂಡಿತವಾಗಿಯೂ ನನ್ನ ಸ್ಥಳವನ್ನು ಕೊಡಿಸುತ್ತಾನೆ. ಧ್ರುವನು ಕಾಡಿಗೆ ಹೋಗಿ ಪ್ರಾರ್ಥನೆ ಮಾಡಲು ನಿರ್ಧರಿಸಿದ. ದೇವರು ನನ್ನ ಮುಂದೆ ಪ್ರತ್ಯಕ್ಷ  ಆಗುವವರೆಗೂ ನಾನು ಪೂಜಿಸುತ್ತಲೇ ಇರುತ್ತೇನೆ ಎಂದು ಹೇಳುತ್ತಾ ಶ್ರೀ ವಿಷ್ಣುವನ್ನು ಪೂಜಿಸಲು ಶುರು ಮಾಡಿದನು.

ಕಾಡಿನಲ್ಲಿ ಅವನು ನಾರದ ಮುನಿಯನ್ನು ಭೇಟಿಯಾದನು. ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀನಿನ್ನೂ ಐದು ವರ್ಷದ ಬಾಲಕ ಕಾಡಿನಲ್ಲಿ ಕ್ರೂರ ಮೃಗಗಳಿಗೆ. ಅವು ನಿನ್ನನ್ನು ಕೊಂದು ತಿಂದು ಹಾಕುತ್ತವೆ. ಆದರೆ ಧ್ರುವನು ಇದ್ಯಾವುದಕ್ಕೂ ಹೆದರದೆ ಭಗವಂತನಾದ ಶ್ರೀ ವಿಷ್ಣುವನ್ನು ಕಾಣಲೇಬೇಕೆಂದು ಹಟ ಹಿಡಿದನು.ಅವನ ಈ ದೃಢವಾದ ಮನಸ್ಸನ್ನು  ಕoಡು ನಾರದರು ಕಾಡಿನಲ್ಲಿ ಹೇಗೆ ಸುರಕ್ಷಿತವಾಗಿರುವುದು ಎಂದು ಹೇಳಿಕೊಟ್ಟರು. ಇದರ ಜೊತೆಗೆ ನಾರದರು ಜಪಿಸಲು ಮಂತ್ರವನ್ನು ಸಹ ಹೇಳಿಕೊಟ್ಟರು. “ಓಂ ನಮೋ ಭಗವತೇ ವಾಸುದೇವಾಯ ನಮಃ” . ಈ ಮಂತ್ರವನ್ನು ಜಪಿಸುವುದರಿಂದ ಧ್ರುವನು ಭಗವಂತನಾದ ಶ್ರೀ ವಿಷ್ಣುವನ್ನು ಮನಸ್ಸಿಗೆ ಹತ್ತಿರವಾಗಬಹುದು ಎಂದು ಹೇಳಿ ಹೋದನು.

ಅನೇಕ ತಿಂಗಳುಗಳೇ  ಕಳೆದವು .ಧ್ರುವನು ಕಾಡಿನಲ್ಲೇ ಉಳಿದು ಪ್ರಾರ್ಥಿಸಿದನು ಮತ್ತು ಅನೇಕ ಕಷ್ಟಗಳನ್ನು ಸಹ ಎದುರಿಸಿದನು. ಅವನು ಆಹಾರ ಸೇವಿಸುವುದನ್ನು ಸಹ ನಿಲ್ಲಿಸಿಬಿಟ್ಟನು.ಪ್ರತಿ ಉಸಿರಿಗೂ ಸಹ ಅದೇ ಮಂತ್ರವನ್ನು ಜಪಿಸುತ್ತಿದ್ದ. ಕೊನೆಗೆ ಭಗವಂತನಾದ ಶ್ರೀ ಮಹಾವಿಷ್ಣು ಇವನ ಜಪ ತಪ ಪೂಜೆಗೆ ಸುಪ್ರೀತನಾಗಿ ಸಾಕ್ಷಾತ್ ಶ್ರೀ ಮಹಾವಿಷ್ಣುವೆೇ  ಅವನ ಮುಂದೆ ಪ್ರತ್ಯಕ್ಷನಾದನು. ಅವನು ಈ ದೃಢ ಮನಸ್ಸಿನಿಂದ ಪ್ರಾರ್ಥನೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡನು. ಆಗ ವಿಷ್ಣುವು ಧ್ರುವನ ಆಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದನು.

 

 

ಅದೇನೆಂದರೆ ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಜಾಗ ಕೆೊಡಿಸುವುದಲ್ಲದೆ ಅರಮನೆಯಲ್ಲಿಯೂ ಸಹ ಜಾಗ ಸಿಗುವುದು. ಜೊತೆಗೆ ನೀನು ಮರಣ ಹೊಂದಿದ ನಂತರ ಶಾಶ್ವತವಾಗಿ ಆಕಾಶದಲ್ಲಿಯೂ ಸಹ ನಿನಗೆ ಸ್ಥಳವೂ ಸಿಗುವುದು.

ಉತ್ತಾನಪಾದ ರಾಜನಿಗೆ ಅವನ ಮಗ ಕಾಡಿನಲ್ಲಿ ಇರುವನೆಂದು ತಿಳಿದಾಗ ಅವನು ಮನಸ್ಸಿನಲ್ಲೇ ಕ್ಷಮೆ ಕೇಳಿದನು. ನಾರದ ಮುನಿಯ ಉತ್ತಾನಪಾದ ರಾಜನ ಮುಂದೆ ಪ್ರತ್ಯಕ್ಷನಾಗಿ ಹೀಗೆ ಹೇಳಿದರು. ನಿಮ್ಮ ಮಗ ಧ್ರುವನು ಕಠಿಣವಾದ ಪೂಜೆ , ಪ್ರಾರ್ಥನೆ ಮತ್ತು ತಪಸ್ಸನ್ನು ಆಚರಿಸಿ ಭಗವಂತನಾದ ಸಾಕ್ಷಾತ್ ಶ್ರೀ ವಿಷ್ಣುವಿನಿಂದ ಆಶೀರ್ವಾದವನ್ನು ಸಹ ಪಡೆದಿದ್ದಾನೆ.

ಧ್ರುವನು  ಕಾಡಿನಿoದ ಮರಳಿದಾಗ ಉತ್ತನಪಾದ ರಾಜನು ಅವನಿಗೆಂದೇ ಕಾಯುತ್ತಾ ತನ್ನ ಸಾಮ್ರಾಜ್ಯದ  ದ್ವಾರ ಬಾಗಿಲಿನಲ್ಲಿ  ಕುಳಿತಿದ್ದನು. ಅವನ ಮಗನನ್ನು ಎರಡೂ ಕೈಗಳಿಂದ ಅಪ್ಪಿ ಬರಸೆಳೆದನು.

ಸುನೀತಿ ಮತ್ತು ಮಗ ಧ್ರುವನನ್ನು ಅರಮನೆಗೆ ಮರಳಿ ಕರೆತಂದು . ಉತ್ತಾನಪಾದನು ತಡ ಮಾಡದೆ ತಕ್ಷಣವೇ ತನ್ನ ಮಗ ಧ್ರುವನನ್ನು ರಾಜನಾಗಿ ಮಾಡಿದನು.ಮತ್ತು  ಹೀಗೆ ಹೇಳಿದನು ಅತಿ ಚಿಕ್ಕ ವಯಸ್ಸಿನಲ್ಲೇ ಈ ಸಾಹಸವನ್ನು ಮಾಡಿರುವ ನಿನಗೆ ರಾಜನಾಗಿ ಕಾರ್ಯ ನಿರ್ವಹಿಸುವುದು ಕಷ್ಟವೇನು ಆಗುವುದಿಲ್ಲ ಎಂದು ಹೇಳಿದನು. ಉತ್ತಾನಪಾದ ರಾಜನು ಅರಮನೆಯನ್ನು ಬಿಟ್ಟು ಆಶ್ರಮದಲ್ಲಿ ನೆಲೆಸಲು ಹೊರಟು ಹೋದನು.

ರಾಜನಾದ ಧ್ರುವನು ಸಮಗ್ರವಾಗಿ ಎಲ್ಲವನ್ನೂ ನಿರ್ವಹಿಸಿ ಅನೇಕ ವರ್ಷಗಳವರೆಗೆ ರಾಜ್ಯವನ್ನು ಆಳಿದನು. ಅವನು ತನ್ನ ಕೊನೆಯುಸಿರೆಳೆಯುವಾಗ ರಾಜ್ಯದ ಜನರಿಗೆ ಶಾಂತಿ ನೆಮ್ಮದಿ ಮತ್ತು ನ್ಯಾಯಯುತವಾದ ದಾರಿಯಲ್ಲಿ ಸಾಗಲು ಸಂದೇಶವನ್ನು ಹೇಳಿದನು. ಕೊನೆಗೆ ಅವನು ಆಕಾಶದಲ್ಲಿ ಧ್ರುವ ಎಂಬ ಹೆಸರಿನ ನಕ್ಷತ್ರವಾದನು. ಈ ನಕ್ಷತ್ರವನ್ನು   ಧ್ರುವ ನಕ್ಷತ್ರ ಎಂಬ ಹೆಸರಿನಿಂದ  ಕರೆಯಲಾಗುತ್ತದೆ. ಅದು ಆಕಾಶದಲ್ಲಿ ಸದಾಕಾಲ ಪ್ರಕಾಶಮಾನವಾದ ಬೆಳಕಿನಿಂದ ಪ್ರಜ್ವಲಿಸುತ್ತಿರುತ್ತದೆ. ಇದೊಂದೇ ನಕ್ಷತ್ರ ಅದು ಆಕಾಶದಲ್ಲಿ ಯಾವಾಗಲೂ ಅದರ ಸ್ಥಳವನ್ನು ಮತ್ತು ದಿಕ್ಕನ್ನು ಬದಲಿಸದೆ ಶಾಶ್ವತವಾಗಿ ಅದೇ ಸ್ಥಳದಲ್ಲಿ ಇರುವುದು. ಬೇರೆ ಎಲ್ಲಾ ನಕ್ಷತ್ರವು ಆಕಾಶದಲ್ಲಿ ವರ್ಷ ಪೂರ್ತಿ ಸುತ್ತುತ್ತಾ ಇರುತ್ತವೆ. ರಾತ್ರಿಯ ಹೊತ್ತು ಸಂಚಾರ ಮಾಡುವವರು ಆಕಾಶದಲ್ಲಿ ಧ್ರುವ ನಕ್ಷತ್ರಕ್ಕಾಗಿ ನೋಡುತ್ತಾರೆ . ಅವರ ದಾರಿ ಮಾರ್ಗವನ್ನು ಕಂಡುಕೊಳ್ಳಲು ಧ್ರುವ ನಕ್ಷತ್ರವನ್ನು   ಹುಡುಕುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top