fbpx
ಮನೋರಂಜನೆ

ಬಿಗ್ ಬಾಸ್ ಮನೆಮಂದಿಯನ್ನೆಲ್ಲಾ ಹುಚ್ಚೆದ್ದು ಕುಣಿಯುವಂತೆ ಮಾಡಿದ ಚಂದನ್ ಶೆಟ್ಟಿ..ವಿಡಿಯೋ ನೋಡಿ

ಬಿಗ್ ಬಾಸ್ ಮನೆಮಂದಿಯನ್ನೆಲ್ಲಾ ಹುಚ್ಚೆದ್ದು ಕುಣಿಯುವಂತೆ ಮಾಡಿದ ಚಂದನ್ ಶೆಟ್ಟಿ..ವಿಡಿಯೋ ನೋಡಿ

 

 

ಕಳೆದ ವಾರ ಪ್ರಾರಂಭವಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಕಾರ್ಯಕ್ರಮ ದಿನಕಳೆದಂತೆ ಭಾರಿ ಕುತೂಹಲ ಕೆರಳಿಸುತ್ತಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ಪಡೆದಿರುವ 11 ಸೆಲೆಬ್ರಿಟಿಗಳ ಪೈಕಿ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ತಮ್ಮ ಹಾಡುಗಳ ಮೂಲಕ ಮನೆಯೆಂದಿಯರನ್ನು ಸಕತ್ ಆಗಿ ಮನರಂಜಿಸುತ್ತಿದ್ದಾರೆ..ತಮ್ಮ ಹಾಳಾಗೋದೇ,, ಭಂಗಿ,, 3 ಪೆಗ್ ಮತ್ತು ಇತರೆ ಹಾಡುಗಳ ಮೂಲಕ ತಮ್ಮ ವೀಕ್ಷಕರಿಗೆ ಸಕತ್ ಮನರಂಜನೆ ನೀಡಿದ್ದಾರೆ.

 

 

ಈ ಭಾರಿಯ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ನನ್ನ ಮ್ಯೂಸಿಕ್ ಅನ್ನು ಮಿಸ್ ಮಾಡ್ಕೋತಿದ್ದೀನಿ ಎಂದು ಅವಾಗವಾಗ ಹೇಳಿಕೊಳ್ಳುತ್ತಿರುತ್ತಾರೆ ಆದರೂ ಅಲ್ಲಿರುವ ವಸ್ತುಗಳ ಸಹಾಯದಿಂದಲೇ ತಮ್ಮ ಗಾಯನದ ಮೂಲಕ ಎಲ್ಲರೂ ಕುಣಿಯುವಂತೆ ಮಾಡುತ್ತಿದ್ದಾರೆ.

 

 

ಚಂದನ್ ಶೆಟ್ಟಿ ಯವರ ಹಾಡುಗಳನ್ನು ಈ ವಿಡಿಯೋಗಳಲ್ಲಿ ನೋಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top