fbpx
ಕನ್ನಡ

ಮೊನ್ನೆ ತಮಿಳರು,ಇಂದು ಆಂಧ್ರದವರಿಂದ ಕನ್ನಡಿಗರ ಮೇಲೆ ಅಟ್ಟಹಾಸ; ಕರುನಾಡಲ್ಲಿ ಕನ್ನಡಿಗರೇ ಅನಾಥರೇ..?

ಮೊನ್ನೆ ತಮಿಳರು,ಇಂದು ಆಂಧ್ರದವರಿಂದ ಕನ್ನಡಿಗರ ಮೇಲೆ ಅಟ್ಟಹಾಸ; ಕರುನಾಡಲ್ಲಿ ಕನ್ನಡಿಗರೇ ಅನಾಥರೇ..?

 

 

ದಿನದಿಂದ ದಿನಕ್ಕೆ ಕನ್ನಡಿಗರ ಮೇಲೆ ದೌರ್ಜನ್ಯ ಮಿತಿ ಮೀರುತ್ತಿದೆ. ಇತ್ತೀಚಿಗೆ ತಮಿಳಿಗರು ಕನ್ನಡಿಗರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ ಘಟನೆ ನಮ್ಮ ಕಣ್ಣು ಮುಂದೆ ಇರುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.. ಈ ಭಾರಿ ಕನ್ನಡದ ಮೇಲೆ ದೌರ್ಜನ್ಯ ಮಾಡಿರುವುದು ತೆಲುಗು ಭಾಷಿಗರು.. ಮುಂದೆ ಓದಿ

 

 

ಐಬಿಪಿಎಸ್ ಬ್ಯಾಕಿಂಗ್ ಎಕ್ಸಾಮ್ ನಲ್ಲಿ ಅನ್ಯಾಯವಾಗಿದೆ ಎಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕನ್ನಡ ಉದ್ಯೋಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು.. ಕನ್ನಡಿಗರು ಈ ರೀತಿ ಪ್ರತಿಭಟನೆ ನಡೆಸಿರುವುದಕ್ಕೆ ಆಂಧ್ರದ ಕೋಚಿಂಗ್ ಸೆಂಟರ್ ಅಧ್ಯಕ್ಷನೊಬ್ಬನು ಕನ್ನಡಿಗರಿಗೆ ಅಸಭ್ಯವಾಗಿ ಬಹಿರಂಗವಾಗಿ ವೇದಿಕೆಯ ಮೇಲೆ ಭಾಷಣಮಾಡುತ್ತಾ ನಿಂದಿಸಿ ಭಾಷಾ ಸಂಘರ್ಷಕ್ಕೆ ಪ್ರಚೋದನೆಯನ್ನ ನೀಡಿದ್ದಾನೆ. ಮುಂದೆ ಓದಿ

 

 

ಬ್ಯಾಕಿಂಗ್ ಎಕ್ಸಾಂ ಸಂಭಂದಿಸಿದಂತೆ ಕನ್ನಡಿಗರು ಪ್ರತಿಭಟನೆ ಮಾಡಿದ್ದಕ್ಕೆ ಆಂಧ್ರದ ಕೋಚಿಂಗ್ ಸೆಂಟರ್ ಅಧ್ಯಕ್ಷ ದಸ್ತಗಿರಿ ರೆಡ್ಡಿಯೆಂಬುವವನು ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮನಬಂದಂತೆ ಮಾತನಾಡಿದ್ದಾನೆ..”ಆಂಧ್ರದ ಹಂಗಿನಲ್ಲಿ ಬದುಕುತ್ತಿರುವ ಕನ್ನಡಿಗರು ಮುಟ್ಟಾಳರು ಪ್ರತಿಭೆ ಇದ್ದಾರೆ ಪರೀಕ್ಷೆಯಲ್ಲಿ ಬರೆದು ಕೆಲಸ ತಗೋಬೇಕು ಪ್ರತಿಭಟನೆ ಮಾಡಬಾರದು.. ಬೀದಿಯಲ್ಲಿ ಪ್ರತಿಭಟನೆ ಮಾಡೋ ಕನ್ನಡಿಗರು ಹುಚ್ಚುನಾಯಿಗಳು” ಎಂದು ಬೈದಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೂ ಅವಹೇಳನಕಾರಿಯಾಗಿ ನಿಂದಿಸಿದ್ದಾನೆ..ಈ ಸಂಭಂದ ವಿಧಾನಸೌಧ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ಧಾಖಲಾಗಿದೆ.

 

 

ದಸ್ತಿಗಿರಿ ರೆಡ್ಡಿ ಕನ್ನಡಿಗರ ಅವಹೇಳನ ಮಾಡಿರೋ ವಿಡಿಯೋವನ್ನು ಇಲ್ಲಿ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top