fbpx
ದೇವರು

ಶ್ರೀ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಅನುಗ್ರಹ ಪಡೆದು ಸಂತಾನಕ್ಕಾಗಿ ಮಾಡುವ ವ್ರತ ವಿಧಾನ ..

ಸಂತಾನಕ್ಕಾಗಿ ವ್ರತ.

ಓಂ ಶ್ರೀ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿಯೇ ನಮಃ”

ಸಂತಾನವಿಲ್ಲದವರಿಗೆ  ಕಮಲಮ್ಮನವರ ಸಂದೇಶ.

ಒಂದು ಬೆಳ್ಳಿ ನಾಗಪ್ಪನನ್ನು ತಂದು ಒಂದು ಬಟ್ಟಲಿನಲ್ಲಿ  ಹಸುವಿನ ಹಸಿ  ಹಾಲನಿಟ್ಟು ಅದರಲ್ಲಿ ಬೆಳ್ಳಿ ನಾಗಪ್ಪನನ್ನು ಸ್ವಲ್ಪ ಹೊತ್ತು ಇಟ್ಟು ಪೂಜೆ ಮಾಡಿ ಅನಂತರ ನಾಗಪ್ಪನನ್ನು ಹಾಲಿನಿಂದ ತೆಗೆದು  ನೀರಿನಿಂದ ಶುದ್ದಿ ಮಾಡಿ ಪೂಜೆಯನ್ನು ಮಾಡಬೇಕು.

ಹಾಲನ್ನು ಗಂಡ ಹೆಂಡತಿ ಇಬ್ಬರು ಕುಡಿಯಬೇಕು.

ಸ್ತ್ರೀಯರು ಬಹಿಷ್ಟು ಆದಾಗ ನಾಲ್ಕು ದಿನ ಪೂಜೆ ನಿಲ್ಲಿಸಬೇಕು.

ಅನಂತರ ಐದನೇ ದಿನ ಎಣ್ಣೆ ಸ್ನಾನ ಮಾಡಿ ಪೂಜೆ ಮುಂದುವರಿಸಬೇಕು.

ಇದೆ ರೀತಿ ಒಂದು ವರ್ಷ ಒಂದು ತಿಂಗಳು ನಾಗಪ್ಪನನ್ನು ಪೂಜಿಸಬೇಕು.

ಯಾವ ಕಾರಣದಿಂದಲೂ ನಿಲ್ಲಿಸಬಾರದು.ಪೂಜೆಯ ಪ್ರಾರಂಭದಲ್ಲಿ ಐದು ಭಾನುವಾರವೂ ಒಂದು ಹೊತ್ತು ಊಟವನ್ನು ಹಾಗೂ ರಾತ್ರಿ ಹೊತ್ತು ಫಲಹಾರವನ್ನು ತಿನ್ನಬೇಕು.

ಅವರಿಗೆ ಇಷ್ಟವಾದ ಒಂದು ಹೂವನ್ನು ಮತ್ತು ಒಂದು ತರದ ಹಣ್ಣನ್ನು ದೇವರಿಗೆ ಇಡಬೇಕು.ಹೂವನ್ನು ಮತ್ತು ಹಣ್ಣನ್ನು ಪೂಜೆ ಮಾಡುವ ಸ್ತ್ರೀಯರು ಒಂದು ವರ್ಷ ಒಂದು ತಿಂಗಳ ಕಾಲ ಮುಡಿಯಬಾರದು ಮತ್ತು ತಿನ್ನಬಾರದು.ಹೂವು ಅಥವಾ ಹಣ್ಣು ಬೇರೆ ಯಾರಿಗಾದರೂ ಕೊಡುವುದರಲ್ಲಿ ಅಭ್ಯಂತರವಿಲ್ಲ.

ಪೂಜೆ ಮಾಡುವವರು ಒಂದು ಕೆ. ಜಿ. ಅಕ್ಕಿ  ಇಡಿಸುವ ಪಾತ್ರೆ ಇಟ್ಟುಕೊಂಡು ಪ್ರತಿ ದಿನ ಒಂದು ಇಡಿ ಅಕ್ಕಿಯನ್ನು ಪಾತ್ರೆಗೆ ಹಾಕುತ್ತಿರಬೇಕು.

ನಿತ್ಯವೂ ಲಕ್ಷ್ಮೀ ನಿನ್ನದಯೆ  ನಿನ್ನ ದಯೆ, ಎಂದು ಪ್ರಾರ್ಥಿಸುತ್ತಿರಬೇಕು.

ಪಾತ್ರೆ ತುಂಬಿದ ನಂತರ ಆ ಅಕ್ಕಿಯನ್ನು ದೇವರಿಂದ ಖರೀದಿಗೆ ತೆಗೆದುಕೊಂಡಿದ್ದೇವೆಂದು ಭಾವಿಸಿ  ಆ ಅಕ್ಕಿಬೆಲೆ ಒಂದು ರೂಪಾಯಿ ಅಥವಾ ಅವರ ಶಕ್ತ್ಯಾನುಸಾರ ತೆಗೆದಿಡಬೇಕು. ಆ ಅಕ್ಕಿಯನ್ನು ಮನೆಯವರಾಗಲಿ ಅಥವಾ ಬಂದ ಅಥಿತಿಗಳಿಗಾಗಲಿ ದೇವರಿಗೆ ನ್ಯೆವೇದ್ಯ ಮಾಡಿ ತಿನ್ನಬಹುದು. ಆ ಅಕ್ಕಿಯನ್ನು ಬೇರೆ ಯಾರಿಗೂ ಕೊಡಬಾರದು.

ಇದೆ ರೀತಿ ಒಂದು ವರ್ಷ ಒಂದು ತಿಂಗಳು ಮಾಡುತ್ತಿರಬೇಕು.

ಎರಡು ಅಥವಾ ಮೂರು ತಿಂಗಳು ಮುಟ್ಟು ನಿಂತ ನಂತರ ಪೂಜೆ ಮಾಡುವ ಸ್ತ್ರೀಯರು ಹೆರಿಗೆ ಆಗುವವರೆಗೂ ಪೂಜೆ ನಿಲ್ಲಿಸಬಾರದು.

ಮಗುವಾದ ನಂತರ  ತೆಗೆದಿಟ್ಟ ದುಡ್ಡನ್ನು ತೆಗೆದುಕೊಂಡು ಹಾಗೂ ಮಗುವನ್ನು ಕರೆದು ಕೊಂಡು  ದಂಪತಿಗಳು  ಶ್ರೀ ಗೊರವನಹಳ್ಳಿಯ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಬಂದು ಅವರ ಶಕ್ತ್ಯಾನುಸಾರ ಪೂಜೆಯನ್ನು ಮಾಡಿಸಬೇಕು.

ಹುಟ್ಟಿದ ಮಗುವಿಗೆ(ಹೆಣ್ಣಗಲಿ,ಗಂಡಾಗಲಿ) ‘ನ’ ಎಂಬ ಅಕ್ಷರ ಮೊದಲು ಬರುವ ಹಾಗೆ ಹೆಸರನ್ನು ಇಡಬೇಕು.

ಭಕ್ತಾದಿಗಳು ಎಷ್ಟು ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಮಾಡುವರೂ ಅಷ್ಟೇ ಬೇಗನೆ ಫಲ ಸಿಗುವುದು ಎಂಬುದಾಗಿ ಶ್ರೀಯುತ ಪ್ರಸನ್ನ ಕುಮಾರ್ ಅವರು ಸಹ ಗೊರವನಹಳ್ಳಿಗೆ ಬರುವ ಭಕ್ತಾದಿಗಳಿಗೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top