ಋತು ಚಕ್ರ ಅಥವಾ ಪಿರಿಯಡ್ಸ್ ಸಮಯದಲ್ಲಿ ನೋವು ಜಾಸ್ತಿ ಆಗಿ ಕಷ್ಟ
ಅನುಭವಿಸ್ತಿರೋರು ಈ ಮನೆಮದ್ದು ಮಾಡ್ಕೊಂಡು ಹಾಯಾಗಿರಿ
ಈ ಸಮಸ್ಯೆ ಗಳಿಗೆ ಮುಖ್ಯ ಕಾರಣಗಳು:
೧.ನಾವು ತಿನ್ನುವಂತ ಆಹಾರ
೨.ನಾವು ನಡೆಸುವಂತ ಜೀವನ ಪದ್ಧತಿ
೩.ನಾವು ತಿನ್ನುವ ಮೆಡಿಸಿನ್ಸ್
ಮುಟ್ಟಿನ ನೋವು ಸಮಸ್ಯೆಯಿಂದ ಹೊರಬರಲು ಈ ಆಹಾರ ಮತ್ತು ಕೆಳಗಿನ ಮನೆಮದ್ದನ್ನು ಪಾಲಿಸಿ:
೧.ಜೀರಿಗೆ :
ದಿನ ೨ ಚಮಚ ಜೀರಿಗೆಯನ್ನು ಖಾಲಿ ಹೊಟ್ಟೆಯಲ್ಲಿ ತಿಂದು ಸ್ವಲ್ಪ ನೀರು ಕುಡಿಯುವುದರಿಂದ ಕ್ರಮೇಣ ಮುಟ್ಟಿನ ಸಮಸ್ಯೆ ದೂರ ವಾಗುತ್ತದೆ.
೨.ಶುಂಠಿ ಮತ್ತು ಜೇನು ತುಪ್ಪ:
ಶುಂಠಿ ಕಷಾಯ ಮಾಡಿ ಅದು ತಣ್ಣಗಾದ ಮೇಲೆ ಒಂದು ಚಮಕ ಜೇನುತುಪ್ಪ ಹಾಕಿಕೊಂಡು ದಿನ ಊಟವಾದ ಮೇಲೆ ಕುಡಿಯುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ದೂರ ವಾಗುತ್ತದೆ.
೩.ಹಾಲು ,ಅರಿಶಿನ ಮತ್ತು ಬೆಲ್ಲ:
ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿನ ಸ್ವಲ್ಪ ಬೆಲ್ಲ ಹಾಕಿ ದಿನ ಒಂದು ಸಲ ಕುಡಿಯುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಮಾಯವಾಗುತ್ತದೆ.
೪.ಚಕ್ಕೆ ಮತ್ತು ಹಾಲು :
ದಿನ ಊಟ ಆದ್ಮೇಲೆ ಸ್ವಲ್ಪ ಚಕ್ಕೆ ಪುಡಿ ಯನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಹೋಗುತ್ತೆ .
೫.ಮೆಣಸಿನ ಪುಡಿ ಮತ್ತು ಜೇನು ತುಪ್ಪ:
ದಿನ ಊಟಕ್ಕೆ ಮುಂಚೆ ಅಥವಾ ಊಟ ಆದ್ಮೇಲೆ ಒಂದು ಚಮಚ ಮೆಣಸಿನ ಪುಡಿಗೆ ಒಂದು ಚಮಚ ಜೇನು ತುಪ್ಪ ಹಾಕಿಕೊಂಡು ತಿನ್ನುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಮಾಯವಾಗುತ್ತದೆ.
೬.ಓಂ ಕಾಳು:
ಒಂದು ಚಮಚ ಓಂ ಕಾಳನ್ನು ಒಂದು ಲೋಟ ಹಾಲಿಗೆ ಬೆರೆಸಿಕೊಂಡು ತಿನ್ನುವುದರಿಂದ ಮುಟ್ಟಿನ ಸಮಸ್ಯೆ ಹೊರಹೋಗುತ್ತದೆ.
೭.ಈರುಳ್ಳಿ ಮತ್ತು ಬೆಲ್ಲ:
ದಿನ ಎರಡು ಈರುಳ್ಳಿ ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಹೋಗುತ್ತೆ .
೮.ಶುಂಠಿ,ಎಳ್ಳು ಮತ್ತು ಬೆಲ್ಲ :
ಶುಂಠಿ,ಎಳ್ಳು ಮತ್ತು ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ನಂತರ ಸೇವೆಸುವುದರಿಂದ ನಿಮ್ಮ ಮುಟ್ಟಿನ ಸಮಸ್ಯೆ ಮಾಯವಾಗುತ್ತದೆ.
ಮುಟ್ಟಿನ ಸಮಸ್ಯೆಯಿಂದ ಹೊರಬರಲು ಈ ಆಹಾರ ತಿನ್ನಿ:
೧.ಬೀಟ್ರೂಟ್ ರಸ :ಬೀಟ್ರೂಟ್ ರಸ ದಿನ ಒಂದು ಸಲ ಕುಡಿಬೇಕು
೨.ಕ್ಯಾರಟ್ ರಸ:.ಕ್ಯಾರಟ್ ಒಂದು ಸಲ ಕುಡಿಬೇಕು
೩. ಪರಂಗಿ :ದಿನ ಒಂದು ಪರಂಗಿ ಪೀಸ್ ತಿನ್ನಿ
೪.ಮೆಂತ್ಯ :ರಾತ್ರಿ ಮೆಂತ್ಯ ಸ್ವಲ್ಪ ನೀರಿನಲ್ಲಿ ನೆನಸಿ ಬೆಳಗ್ಗೆ ಕುಡಿಯಬೇಕು.
೫.ಗೋದಿ ಹುಲ್ಲಿನ ರಸ :ಗೋದಿ ಹುಲ್ಲಿನ ರಸ ದಿನ ಒಂದು ಸಲ ಕುಡಿಬೇಕು
೬.ಹಗಲ್ಲಕಾಯಿ ರಸ :
೭.ನಿಂಬೆ ರಸ
೮.ಕಬ್ಬಿನ ರಸ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
