fbpx
ದೇವರು

ಅಷ್ಟು ದೊಡ್ಡ ರಾಮಾಯಣದ ಕಥೆನ ಬರಿ 6 ಲೈನಲ್ಲಿ ಶ್ಲೋಕ ಬರ್ದಿದ್ದಾರೆ ವಾಲ್ಮೀಕಿ ತಿಳ್ಕೊಳ್ಳಿ ಅದ್ಭುತ ವಿಷಯ ..

ರಾಮಾಯಣದ ಮಹತ್ವ.

“ಕೂಜಂತಂ ರಾಮರಮೇತಿ ಮಧುರಂ ಮಧುರಾಕ್ಷಾಂ ಅರುಹ್ಯ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ”

ಶ್ರೀ ರಾಮಾಯಣ ಬರೆದದ್ದು ವಾಲ್ಮೀಕಿ.ರಾಮಾಯಣ ಎಂಬ ಕವಿತೆಯ ರೂಪದ ಕೊಂಬೆಯ ಮೇಲೆ ಏರಿ ‘ ರಾಮ’ ‘ರಾಮ’ ಎಂದು ಮಧುರವಾದ ಅಕ್ಷರಗಳನ್ನು ಮಧುರವಾಗಿ ಹೇಳುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಯನ್ನು ವಂದಿಸುತ್ತೇನೆ.

 

ಪೂರ್ವ ರಾಮ ತಪೂವನಾಭಿಗಮನಂ

ಹತ್ಯಾ ಮೃಗಂ ಕಾಂಚನಂ, ವೈದೇಹಿ ಹರಣಂ,

ಜಟಾಯು ಮರಣಂ, ಸುಗ್ರೀವ ಸಂಭಾಷಣಂ

ವಾಲಿ ನಿಗ್ರಹಣಂ, ಸಮುದ್ರ ತರಣಂ,

 ಲಂಕಾಪುರಿಇದಾಹನಂ,ಪಶ್ಚಾತ್ ರಾವಣ

ಕುಂಬಕರ್ಣಮಥನಂ ಏತತ್ ಹಿ ರಾಮಯಣಂ.

ಶ್ರೀ ರಾಮಾಯಣದ ಪ್ರಮುಖ ಘಟನೆಗಳು ಮೇಲಿನ ಶ್ಲೋಕದಲ್ಲಿ ಹೇಳಿದ್ದಾರೆ.

ಶ್ರೀ ರಾಮನು ದಶರಥನ ಮಗನಾಗಿ ಜನಿಸಿದ ನಂತರ ಅಯೋದ್ಯೆಯಿಂದ ಕಾಡಿಗೆ ತೆರಳುವುದು.

ಬಂಗಾರದ ಜಿಂಕೆಯನ್ನು ಕೊಲ್ಲುವುದು.

ರಾವಣನಿಂದ ಸೀತೆಯ ಅಪಹರಣ,

ಜಟಾಯುವಿನ ಮರಣ,

ರಾಮನು ಸುಗ್ರೀವನೊಡನೆ ಸಂಬಾಷಣೆ ಮಾಡುವುದು.

ರಾಮನಿಂದ ವಾಲಿಯ ವದೆ,

ಕಪಿಸ್ಯೆನ್ಯದೊಂದಿಗೆ ಹನುಮಂತನು ಸಮುದ್ರವನ್ನು ದಾಟಿ ಲಂಕೆಗೆ ಹೋಗಿ ಅಲ್ಲಿ ಲಂಕಾ ಪಟ್ಟಣವನ್ನು ಸುಡುವುದು.

ಕೊನೆಗೆ ರಾವಣ ಕುಂಭಕರ್ಣ ಮೊದಲಾದವರನ್ನು ನಾಶಪಡಿಸುವುದು.ಇವೆಲ್ಲವೂ ರಾಮಾಯಣದ ಪ್ರಮುಖ ಘಟನೆಗಳಾಗಿವೆ.

ರಾಮಾಯಣದ ಕಥೆಯು ಅಧ್ಯಾತ್ಮ ರಾಮಾಯಣ, ಪದ್ಮ ಪುರಾಣ,ಶ್ರೀ ಭಾಗವತ, ಮಹಾಭಾರತದ ವನಪರ್ವ, ಮೂಲ ರಾಮಾಯಣ,ರಮಾತಾಪಿಣಿ,ವಿಶ್ವಾಮಿತ್ರ ರಾಮಾಯಣ ,ಶತಕಂಠ ರಾಮಾಯಣ,ಜ್ಯೇನ ಪುರಾಣ ಹೀಗೆ  ಹಲವಾರು ಕಡೆಗಳಲ್ಲಿ ರಚಿತವಾಗಿದೆ.

ಶ್ರೀ ವಾಲ್ಮೀಕಿ ರಾಮಾಯಣ ವಿಸ್ತಾರವಾಗಿ 24,000 ಶ್ಲೋಕಗಳನ್ನು ಹೊಂದಿದೆ  ಆದ್ದರಿಂದಲೇ ವಾಲ್ಮೀಕಿ ರಾಮಾಯಣವನ್ನು ವಾಲ್ಮೀಕಿ ಬರೆದಿದ್ದರಿಂದ “ಆದಿಕವಿ”,ಎಂದು ಕರೆದಿದ್ದಾರೆ. ಇಡೀ ವಿಶ್ವದಲ್ಲಿಯೇ ರಾಮಾಯಣದ ಪ್ರತಿಷ್ಠೆ ತುಂಬಿದೆ.

ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ದಿವ್ಯ ಚರಿತ್ರೆಯನ್ನು ಭಾರತದಲ್ಲಿ ಭಕ್ತಿ-ಭಾವ, ಮತ್ತು ಗೌರವದಿಂದಲೇ ಕಾಣಲಾಗುತ್ತದೆ.ಭಕ್ತಿಯಿಂದ ರಾಮಾಯಣವನ್ನು ಪ್ರತಿದಿನ ಓದುವವರಿದ್ದಾರೆ. ಜನರ ಜೀವನದಲ್ಲಿ  ಶ್ರೀ ರಾಮನ ಅದರ್ಶಮಯ ಜೀವನವು ಮಹತ್ವದ ಪರಿಣಾಮವನ್ನು ಉಂಟು ಮಾಡಿರುವುದು.

ಎರಡು ಸಾವಿರ ವರ್ಷಗಳ ಹಿಂದೆಯೇ ರಚಿತವಾದ ವಾಲ್ಮೀಕಿ ರಾಮಯಣವು ಎಲ್ಲದಕೂ ಮೊದಲು ಕಂಡು ಬಂದಿದೆ.

ರಾಮಾಯಣದ ರಚನೆಯು ಕ್ರಿಸ್ತ ಪೂರ್ವ 7 ನೆ ಶಾತಮಾನದ್ದು.ಕಾವ್ಯವು ಚೀನಿ,ಟಿಬೆಟ್ ಭಾಷೆಗಳಲ್ಲಿ ಬಹಳ ಹಿಂದೆಯೇ ಅನುವಾದಗೊಂಡಿದೆ.ಜ್ಯೇನ ಕವಿಯ ಪದ್ಮ ಚರಿತದಲ್ಲಿ ಸಹ ರಾಮಕಥೆ ಇದೆ.

ನಮ್ಮ ಭಾರತ ದೇಶದಲ್ಲಿ ಶ್ರೀ ರಾಮನ ಜನ್ಮದಿನವನ್ನು “ರಾಮನವಮಿ” ಎಂದು ಹಬ್ಬವನ್ನಾಗಿ ದೇಶದ  ಎಲ್ಲಾ ಕಡೆಗೂ ಆಚರಿಸುತ್ತಾರೆ.

ಶ್ರೀ ರಾಮನ ಮಂತ್ರವೂ ತಾರಕ ಮಂತ್ರವೆಂದೇ ಪ್ರಸಿದ್ಧ ವಾಗಿದೆ.

ವಾಲ್ಮೀಕಿ ಮಹರ್ಷಿಗಳು ಲವಕುಶರಿಗೆ ರಾಮಾಯಣವನ್ನು ಕಲಿಸಿ  ಅವರಿಂದ ಕಾವ್ಯವನ್ನು ಸುಮಧುರ ವಾಗಿ ಹೇಳಿಸಿದರು.

ಶತ ಶತ ಮಾನಗಳಿಂದಲೂ  ಪ್ರಾಮುಖ್ಯತೆಯನ್ನು ಹೊಂದಿರುವ ಶ್ರೀ ವಾಲ್ಮೀಕಿ ರಾಮಯಣವೂ ದೇಶದ ಐತಿಹಾಸಿಕ ಕಾವ್ಯವಾಗಿರುವುದು, ಚಾರಿತ್ರಿಕ ಘಟನೆಯು ಆಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top