fbpx
ಮನೋರಂಜನೆ

ತನ್ನ ಮತ್ತು ಭುವನ್ ನಿಶ್ಚಿತಾರ್ಥದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಂಜನಾ..!

ತನ್ನ ಮತ್ತು ಭುವನ್ ನಿಶ್ಚಿತಾರ್ಥದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಂಜನಾ..!

 

 

ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಭುವನ್ ಮತ್ತು ಸಂಜನಾ ಅವರ ಕುರಿತಾಗಿ ಆಗಾಗ ಗಾಳಿ ಸುದ್ದಿ ಹರಿದಾಡ್ತಾನೆ ಇವೆ..ಅಂತೆಯೇ ಕಳೆದ ಎರಡು ಮೂರು ದಿನಗಳಿಂದ ಸಂಜನಾ ಮತ್ತೆ ಭುವನ್ ಗೆ ಸಂಭಂದಿಸಿದಂತೆ ಮತ್ತೊಂದು ಗಾಳಿ ಸುದ್ದಿ ಹರಡಿದೆ..ಮುಂದೆ ಓದಿ

 

 

ನಟಿ ಸಂಜನಾ ಹಾಗೂ ಭುವನ್ ಮದುವೆ ಆಗುತ್ತಿದ್ದಾರೆ. ಮುಂದಿನ ತಿಂಗಳು ಅಂದ್ರೆ 12ಕ್ಕೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ..ನಿಶ್ಚಿತಾರ್ಥದ ಆಹ್ವಾನ ಪತ್ರಿಕೆಯ ಮಾದರಿಯನ್ನೇ ತಯಾರಿಸಿ ಶೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದ ಕಿಡಿಕೇಡಿಗಳ ಈ ಕೃತ್ಯಕ್ಕೆ ಸ್ವತಃ ಸಂಜನಾ ಅವರೇ ಪ್ರತಿಕ್ರಿಯೆ ನೀಡಿದ್ದು ಇವೆಲ್ಲಾ ಕೇವಲ ಊಹಾ ಪೋಹಗಳು ಎಂದು ಹೇಳಿದ್ದಾರೆ. ಮುಂದೆ ಓದಿ

 

 

“ಇದು ಯಾರು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ , ಇದು ಸುಳ್ಳು. ನಾನು ಮತ್ತು ಭುವನ್ ಅವರು ಮದುವೆ ಆಗುವ ಯಾವ ಯೋಚನೆಗಳು ಇಲ್ಲ. ಆದರೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ವೈಯಕ್ತಿಕ ಜೀವನಕ್ಕೆ ತೊಂದರೆ ಕೊಡುತ್ತಿದ್ದಾರೆ. ಈ ರೀತಿಯ ಗಾಳಿ ಸುದ್ದಿಗಳು ನಿಜಕ್ಕೂ ಮನಸಿಗೆ ನೋವು ಕೊಡುತ್ತವೆ “ಎಂದು ಹೇಳಿರುವ ಸಂಜನಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top