fbpx
ದೇವರು

ಕೌರವರು ಮತ್ತು ಪಾಂಡವರಿಗೆ ಒಬ್ಬಳು ತಂಗಿ ಇದ್ಲು ಅವಳಿಗೂ ಅಭಿಮನ್ಯು ಸಾವಿಗೂ ಇರೋ ರಹಸ್ಯ ಗೊತ್ತಾ ?

ಕೌರವರು 100 ಜನ ಮತ್ತೆ ಪಾಂಡವರು 5 ಜನ ಅಂತ ಮಾತ್ರ ನಮಗೆ ಗೊತ್ತು ಆದ್ರೆ ಅವ್ರಿಗೆ ಒಬ್ಬಳು ತಂಗಿ ಇದ್ಲು ಅಂತ ನಿಮಗೆ ಗೊತ್ತಾ ?

ದುಷಲಾ ಯಾರು :

ಹೂ ಕಣ್ರೀ ನೀವು ಕೇಳೋದು ನಿಜಾನೆ ಮಹಾಭಾರತದ ಕಥೇಲಿ ದುಷಲಾ ಅಂತ ಕೌರವ ಮತ್ತೆ ಪಾಂಡವರ ತಂಗಿ ಇದ್ಲು ಕೌರವರ 101 ನೇ ಪಾತ್ರ ಅದು .

ತನ್ನ ಅಣ್ಣಂದಿರ ಮುಂದಿನ ತಂಗಿಯಾಗಿ ಮಮತೆ ಅಕ್ಕರೆ ಪ್ರೀತಿಯಿಂದ ಬೆಳೆದಿದ್ದ ಹುಡುಗಿ ಮುಂದೆ ದುರಂತ ನಾಯಕಿಯಾಗ್ತಾಳೆ ಹೇಗೆ ಅಂತ ನೀವೇ ಓದಿ .

ರಾಜ ಧೃತ್ರರಾಷ್ಟ್ರ ಮತ್ತು ರಾಣಿ ಗಾಂಧರಿಯವರ ಸಂತತಿಯ ದೀರ್ಘ ವಂಶಾವಳಿಯಲ್ಲಿ ಹುಟ್ಟಿದ ಏಕೈಕ ಪುತ್ರಿ. ಆಕೆಯ ಬಾಲ್ಯವು ಮಂಗಳಕರವಾಗಿತ್ತು ರಾಜ ಮತ್ತು ಅವನ 100 ಮಕ್ಕಳು ಮತ್ತು 5 ಪಾಂಡವರಿಗೆ ಪ್ರೀತಿಪಾತ್ರಳಾಗಿ ಬಹಳ ಕಾಳಜಿಯಿಂದ ಬೆಳೆದ ಹುಡುಗಿ .

ದುಷಲಾಳ ಗಂಡ ಜಯದ್ರತ:

ಸಿಂಧು ಮತ್ತು ಸೌವಿರಾ ರಾಜ, ಜಯದ್ರತ ಎಂದು ಕರೆಯಲ್ಪಡುವ ರಾಜನನ್ನು ವಿವಾಹವಾಗಿದ್ದಳು , ಆಕೆ ತನ್ನ ಜೀವನದ ಕಷ್ಟ ಕರ ದಿನಗಳನ್ನು ಎದುರಿಸಿದ್ದು ಅಲ್ಲಿಂದಲೇ .
ಜಯದ್ರತನಿಗೆ ಬಹುವ್ಯಕ್ತಿತ್ವದ ಸಮಸ್ಯೆ ಇತ್ತು ,ಬಹುವ್ಯಕ್ತಿತ್ವ ಅಂದ್ರೆ ಅದೇ ರೀ ಲೂಸಿಯಾ ತರ ಸ್ಪ್ಲಿಟ್ ಪರ್ಸನಾಲಿಟಿ .

ಒಂದು ಸರಿ ಇದ್ದಂಗೆ ಇನ್ನೊಂದ್ಸರಿ ಇರ್ಲಿಲ್ಲ , ಆಗಾಗ್ಗೆ ಹೆಂಗಸರ ಹತ್ರ ಕ್ರೂರವಾಗಿ ನಡೆದುಕೊಳ್ಳೋದು ಮತ್ತು ವಿಪರೀತ ಕೆಟ್ಟ ಹೆಣ್ಣಿನ ಚಟಗಳು ಇದ್ವು ,

ಒಂದೊಂದ್ಸರಿ ಮನುಷ್ಯನ ತರಾನೇ ಆಡ್ತಾಇರ್ಲಿಲ್ಲ .

ಆದರು ದುಷಲಾ ಸಂಪ್ರದಾಯ ಮನೆತನದ ಹುಡುಗಿ ತರ ಅವಳ ಕರ್ತವ್ಯ ಮಾಡ್ಕೊಂಡು ಹೋಗ್ತಿದ್ಲು , ದಿನೇ ದಿನೇ ಜಯದ್ರತನ ದಬ್ಬಾಳಿಕೆ ಜಾಸ್ತಿನೇ ಆಗ್ತಿತ್ತು .

ತನ್ನ ಗಂಡನ ಅಸ್ವಸ್ಥತೆಯಿಂದ ತೊಂದರೆಗೀಡಾದ ಜೀವನವನ್ನು ಹೊಂದಿದ್ದ ದುಷಲಾ ಕಷ್ಟಗಳ ಸರಮಾಲೆ ಹಾಕೊಂಡೆ ಜೀವ ಮಾಡ್ತಿದ್ದ್ಲು .

ಪಾಂಡವರಿಂದ ಅವಮಾನ :

ಹೀಗಿರುವಾಗ ಒಂದು ದಿನ ಜಯದ್ರತ ದ್ರೌಪದಿಯನ್ನು ಕೆಣಕಲು ಶುರುಮಾಡಿದ .
ಕಥೆ ಏನೆಂದರೆ ಪಾಂಡವರು ವನವಾಸದಲಿದ್ದ ಸಮಯದಲ್ಲಿ ದ್ರೌಪದಿಯನ್ನು ಆಶ್ರಮದಲ್ಲಿ ಬಿಟ್ಟು ಯಾಗಕ್ಕಾಗಿ ದರ್ಭೆ ಹುಲ್ಲು ಇತರ ಪರಿಕರಗಳನ್ನು ತರಲು ಹೋಗಿದ್ದರು , ದ್ರೌಪದಿಯನ್ನು ತೃಣಬಿಂದು ಎಂಬ ಋಷಿಯು ನೋಡಿಕೊಳ್ಳುತ್ತಿದ್ದರು .

ಅರಣ್ಯದಲ್ಲಿ ಕಂಡ ಅದ್ಬುತ ರೂಪವತಿಯನ್ನ ನೋಡಿದ ಜಯದ್ರತ ತನ್ನ ಮಂತ್ರಿ ಕೊಟಿಕಸ್ಯನನ್ನು ಕಳುಹಿಸಿ ಮತ್ತು ಅವಳು ಯಾರೆಂದು ವಿಚಾರಿಸಲು ಕೇಳಿಕೊಂಡಳು. ಕೊಟಿಕಶ್ಯ ಅವಳ ಬಳಿಗೆ
ಹೋಗಿ ಪೂರ್ವ ಪರ ವಿಚಾರಿಸಿದ ನಂತರ ತಿಳಿಯುತ್ತದೆ ಆಕೆ ದ್ರೌಪದಿ ಎಂದು .
ಆದರೂ ಪಟ್ಟು ಬಿಡದೆ ಆಕೆಯ ಮೇಲೆ ಮೋಹಪಟ್ಟು ಅರಮನೆಗೆ ಎಳೆದುಕೊಂಡು ಹೋಗಲು ಪ್ರಯತ್ನ ಮಾಡಿದ .

ಈ ವಿಷಯವನ್ನು ತಿಳಿದ ಪಾಂಡವರು ಜಯದ್ರತನನ್ನು ಕೊಲ್ಲುವಷ್ಟು ಕೋಪ ಬಂದರು ತಂಗಿಗೊಸ್ಕರ ಸುಮ್ಮನಿದ್ದು ಜಯದ್ರತನ ನೀಚ ಕೆಲಸಕ್ಕೆ ತಲೆ ಬೋಳಿಸಲು ಆಜ್ಞೆ ಕೊಟ್ರು ಇದರಿಂದ ವಿಪರೀತ ಅವಮಾನ ಆಯಿತು , ಶೋಚನೀಯವಾಗಿ ವಿಫಲರಾಗುವಂತೆ ಮಾಡ್ತು .

ಜಯದ್ರತನ ವರಗಳು :

ಈ ಘಟನೆಯ ನಂತರ, ಜಯದ್ರತನು ಶಿವನಿಗೆ ಘೋರ ಹಾಗು ಕಷ್ಟಕರ ತಪಸ್ಸು ಮಾಡಿದನು ಮತ್ತು ಅವನ ತಪ್ಪಿಗೆ ಕ್ಷಮೆಯನ್ನು ಕೇಳಿದನು. ಅವನ ತಪಸ್ಯಾವನ್ನು ಮೆಚ್ಚಿ ಶಿವನು ವರ ಕೊಡಲು ಮುಂದಾದಾಗ ಈ ವರವನ್ನು ಕೇಳುತ್ತಾನೆ “ಪಾಂಡವರನ್ನು ಸೋಲಿಸಲು ನನಗೆ ಶಕ್ತಿಕೊಡು ”
ಅದಕ್ಕೆ ಪ್ರತಿಯಾಗಿ ಶಿವನು ‘ಎಲ್ಲ ಪಾಂಡವರನ್ನು ಧೈರ್ಯವಾಗಿ ಎದುರಿಸುತ್ತೀಯಾ ಆದರೆ ಅರ್ಜುನನ್ನು ಹೊರತು ಪಡಿಸಿ’ ಎಂಬ ವರವನ್ನು ನೀಡಿದನು .

ತನ್ನ ಸ್ವಂತ ತಂದೆ ವ್ರಿಧಕ್ಷತ್ರ ನಿಂದ ಒಂದು ವರವನ್ನು ಪಡೆದಿರುತ್ತಾನೆ

ಅದೇನೆಂದರೆ “ಯಾರು ನನ್ನ ತಲೆಗೆ ಗುರಿಯಿಟ್ಟು ಹೊಡೆದು ನೆಲಕ್ಕೆ ಉರುಳಿಸುತ್ತಾರೋ ಅಂತವರ ತಲೆ 100 ಹೋಳುಗಳಾಗಲಿ” ಎಂದು .
ಈ ವರವನ್ನು ಸ್ವತಃ ತಂದೆಯಿಂದಲೇ ಪಡೆದಿದ್ದ

ವರ ಪಡೆದ ನಂತರ ಮನೆಗೆ ಮರಳಿದ ಜಯದ್ರತನಲ್ಲಿನ ಬದಲಾವಣೆ ಹಾಗು ಶಿವ ಭಕ್ತಿಯನ್ನು ಕಂಡು ಯಾವಾಗಲೂ ಆತನನ್ನು ಇಷ್ಟ ಪಟ್ಟಿರದ ದುಷಲಾ ಆಶ್ಚರ್ಯವಾಗುತ್ತಾಳೆ ಮತ್ತು ಜಯದ್ರತನ ಬದಲಾವಣೆಗೆ ಸಂತೋಷ ಪಡುತ್ತಾಳೆ.

ಏತನ್ಮಧ್ಯೆ, ಜಯದ್ರತನು ದುರ್ಯೋಧನದಿಂದ ಪಾಂಡವರ ವಿರುದ್ಧ ಯುದ್ಧಕ್ಕೆ ಆಹ್ವಾನವನ್ನು ಪಡೆದುಕೊಂಡನು, ಜಯದ್ರತನು ತನ್ನ ಅವಮಾನದ ಸೇಡು ತೀರಿಸಿಕೊಳ್ಳಲು ಒಪ್ಪಿಕೊಂಡನು. ಯುದ್ಧದ ಸಮಯದಲ್ಲಿ ಜಯದ್ರತನು ಚಕ್ರವ್ಯೂಹದೊಳಗೆ ನುಗ್ಗಿದ ಅಭಿಮನ್ಯುವನ್ನು ಕೊಂದನು .


ಅರ್ಜುನನಿಗೆ ಈ ಸುದ್ದಿ ತಲುಪಿ ತನ್ನ ಮಗನನ್ನು ಕೊಂಡವನನ್ನು ಕೊಂದೆ ತೀರುತ್ತೇನೆ ಎಂದು ಪ್ರತಿಜ್ಞೆ ಮಾಡಿದನು .

ಅರ್ಜುನನ ಸೇಡು:

ಅರ್ಜುನ ಹಾಗು ಜಯದ್ರತರ ಕಾಳಗ ಶುರುವಾಗಿತ್ತು

ಅರ್ಜುನದಿಂದ ಜಯದ್ರತನನ್ನು ರಕ್ಷಿಸಲು ದ್ರೋಣಾಚಾರ್ಯರು 3 ವ್ಯೂಹಗಳನ್ನು ರಚಿಸಿದ್ದರು .
ಸಾವಿರಾರು ಯೋಧರು ಅರ್ಜುನ ಮತ್ತು ಜಯದ್ರತರ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಾಕ್ಷಿಯಾಗಿದ್ದರು , ಸೂರ್ಯಾ ಮುಳುವುದಕ್ಕೆ ಇನ್ನು ಸ್ವಲ್ಪ ಸಮಯ ಮಾತ್ರ ಇತ್ತು ಹೀಗಿರುವಾಗ ಕೃಷ್ಣ ತನ್ನ ಸುದರ್ಶನ ಚಕ್ರ ಕಳುಹಿಸು ಸೂರ್ಯನನ್ನ ಮರೆ ಮಾಚುತ್ತಾನೆ , ಕೌರವರ ಸೈನಿಕರು ಬಹಳ ಖುಷಿಪಡುತ್ತಿರುತ್ತಾರೆ .

ಆ ಸಂಧರ್ಭದಲ್ಲಿ ಅರ್ಜುನನಿಗೆ ಇನ್ನು ಕಲಾವಾಕಾಶವಿರುವುದಾಗಿ ತಿಳಿಸಿ ಇದು ಸೂರ್ಯಾಸ್ತಮಾನದ ಕಾಲವಲ್ಲ ಕೇವಲ ಗ್ರಹಣ ಅಷ್ಟೇ ದುರ್ಯೋಧನನ ಹಿಂದೆ ಅಡಗಿಕೊಂಡಿರುವ  ಜಯದ್ರತನ ಕಡೆ ಬಾಣ ಬಿಡು ಎಂದಾಗ ಶೀಘ್ರವಾಗಿ ತನ್ನ ಗಾಂಡಿವವನ್ನು ಎತ್ತಿಕೊಂಡು ಪಾತುಪತಾಸ್ತ್ರ ವನ್ನು ಜಯದ್ರತನ ತಲೆಗೆ ಹೊಡೆದನು .

ಇದು ದೂರದಲ್ಲಿ ತಪಸ್ಸು ಮಾಡುತ್ತಿದ್ದ ಜಯದ್ರತನ ತಂದೆ ಋಷಿ ವ್ರಿಧಕ್ಷತ್ರನ ತೊಡೆಯ ಮೇಲೆ ಬೀಳುತ್ತದೆ ಮತ್ತು ಅವನ ತಲೆಯು 100 ತುಂಡುಗಳಾಗಿ ಸಿಡಿಯಲ್ಪಡುತ್ತದೆ ಆದ್ದರಿಂದ, ಅವನ ತಂದೆಯು ಕೂಡ ಅದೇ ಕ್ಷಣದಲ್ಲಿ ನಿಧನರಾದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top