fbpx
ಜಾಗೃತಿ

ತನ್ನ ಫೋನ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ ಒಂದೂವರೆ ಲಕ್ಷ ರೂಪಾಯಿ ಕಳೆದುಕೊಂಡ ಯುವಕ..

ತನ್ನ ಫೋನ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ ಒಂದೂವರೆ ಲಕ್ಷ ರೂಪಾಯಿ ಕಳೆದುಕೊಂಡ ಯುವಕ..

 

 

ಈಗಾಗಲೇ ಮೊಬೈಲ್ ಸಿಮ್ ಗಳ ಖರೀದಿಯಲ್ಲಿ ನಕಲಿ ವಿಳಾಸದ ಭರಾಟೆ ಹೆಚ್ಚಾಗಿದ್ದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಕೇಂದ್ರ ಸರ್ಕಾರ ಮೊಬೈಲ್ ನಂಬರ್ ಗಳನ್ನು ಆಧಾರ್ ಗೆ ಅಳವಡಿಸಲು ಮುಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ದೇಶದಲ್ಲಿರುವ ಎಲ್ಲಾ ಮೊಬೈಲ್‍ ಸಂಖ್ಯೆಗಳನ್ನು ಆಧಾರ್ ಸಂಖ್ಯೆ ಜತೆ ಲಿಂಕ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

 

 

ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಕೊನೆ ದಿನಾಂಕವನ್ನು ಫೆಬ್ರವರಿ 2018 06 ನೇ ತಾರೀಕಿಗೆ ನಿಗದಿ ಪಡಿಸಿದೆ.ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದೇ ಇದ್ದರೆ ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯವಾಗುತ್ತದೆ ಎಂದೂ ಸಹ ಹೇಳಿದೆ..ಸರಕಾರದ ಆದೇಶದಂತೆ ತನ್ನ ಮೊಬೈಲ್ ನಂಬರನ್ನು ಆಧಾರ್ ಗೆ ಲಿಂಕ್ ಮಾಡಲು ಹೋಗಿ ಬರೋಬ್ಬರಿ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಹಾಗಂತ ಸ್ವತಃ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮುಂದೆ ಓದಿ.

 

 

ಏರ್ಟೆಲ್ ಸಿಬ್ಬಂದಿ ಎಂದು ಹೇಳಿಕೊಂಡು ಕರೆಮಾಡಿರುವ ವಂಚಕನೊಬ್ಬನು ನಿಮ್ಮ ಮೊಬೈಲ್ ಅನ್ನು ಆಧಾರ್ ಲಿಂಕ್ ಮಾಡಲು ನಿಮ್ಮ ಸಿಮ್ ನಂಬರ್ ಅನ್ನು 121ಗೆ ಮೆಸೇಜ್ ಮಾಡಿ” ಎಂದು ಸೂಚಿಸಿದ್ದಾನೆ. ಹೇಗಿದ್ದರೂ 121 ಏರ್ಟೆಲ್ ನ ಕಸ್ಟಮರ್ ಕೇರ್ ನಂಬರ್ ತಾನೇ ಎಂದು ತನ್ನ ಮೊಬೈಲ್ ನಂಬರ್ ವಿವರಗಳನ್ನು ಕಳುಹಿಸಿದ ಕ್ಷಣಾರ್ದಗಳಲ್ಲಿ ಅವನ ನಂಬರ್ ಹ್ಯಾಕ್ ಮಾಡಿದ ವಂಚಕರು ಶಾಶ್ವತ್ ನ ಮೊಬೈಲ್ ಸಿಮ್ ನಂಬರ್ ನಲ್ಲೆ ಮತ್ತೊಂದು ಡೂಪ್ಲಿಕೇಟ್ ಸಿಮ್ ಸೃಷ್ಟಿಸಿ, ಆತನ ಅಕೌಂಟ್ ನಲ್ಲಿರುವ 1.30 ಲಕ್ಷ ರೂಪಾಯಿಗಳನ್ನು ಎಗುರಿಸಿದ್ದಾರೆ..

 

 

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ಹೆಚ್ಚು ನಡೆಯುತ್ತಿದೆ. ಇದಕ್ಕಾಗಿ ಹಲವು ರೀತಿಯ ಮೊಬೈಲ್ ಆಪ್ ಗಳು ಲಭ್ಯವಿವೆ.. ಈ ಆಪ್ ಗಳಿಗೆ ಕೇವಲ ಮೊಬೈಲ್ ನಂಬರ್ ಇದ್ದರೆ ಸಾಕು. ಒಟಿಪಿ ಯನ್ನು ಪಡೆದು ಆ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಎಲ್ಲಾ ಬ್ಯಾಂಕ್ ಅಕೌಂಟ್ ಗಳ ವಿವರಗಳನ್ನು ನೀಡುತ್ತದೆ… ಬ್ಯಾಂಕ್ ವಿವರಗಳು ದೊರೆತ ಮೇಲೆ ಆ ಆಪ್ ಗಳಿಂದ ನೇರವಾಗಿ ಹಣವನ್ನು ಇನ್ನೊಂದು ಅಕೌಂಟ್ ಗೆ ವರ್ಗಾವಣೆ ಮಾಡಬಹುದು..ಇದೇ ರೀತಿ ವಂಚಕರು ಶಾಶ್ವತ್ ನ ಅಕೌಂಟ್ ನಲ್ಲಿರುವ 1.3 ಲಕ್ಷ ರೂಪಾಯಿಯನ್ನು ಎಗರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top