fbpx
ದೇವರು

ಕೆಟ್ಟ ಮನುಷ್ಯನಾಗಿದ್ದ ಬೇಡ ವಾಲ್ಮೀಕಿ ಮುಂದೆ ರಾಮಾಯಣ ಬರೆದ ಕಥೆ ..

ಬೇಡನು ವಾಲ್ಮೀಕಿ ಮಹರ್ಷಿ ಯಾಗಿದ್ದು ಮತ್ತು ರಾಮಾಯಣದ ರಚನೆ

ಒಬ್ಬ ಬೇಡನು ಜನರನ್ನು ಪೀಡಿಸಿ ಅವರಿಂದ ಸಿಕ್ಕ ವಸ್ತುಗಳನ್ನು ಉಪಯೋಗಿಸಿ ತನ್ನ ಜೀವನವನ್ನು ನಿರ್ವಹಿಸುತ್ತಿದ್ದನು.ಒಮ್ಮೆ ಒಬ್ಬ ತಪಸ್ವಿಗಳು ಆ ದಾರಿಯಲ್ಲಿ ಹೋಗುವಾಗ ಅವರನ್ನು ಈ ಬೇಡನು ತಡೆದು ನಿಲ್ಲಿಸಿ ಹಣ ಸಂಪತ್ತುಗಳಿಗಾಗಿ ಪೀಡಿಸಿದನು. ಅವರು ಅನೇಕ ರೀತಿಯಿಂದ ಈ ರೀತಿ ಜನರನ್ನು ಪೀಡಿಸುವುದರಿಂದ ನಿನಗೆ ಒಳ್ಳೆಯದಾಗುವುದಿಲ್ಲ. ಪಾಪ ಬರುವುದು  ಅದನ್ನು ನಿನ್ನ ಹೆಂಡತಿ ಮಕ್ಕಳು ಸಹ ಸ್ವೀಕರಿಸುವುದಿಲ್ಲವೆಂದರು.

 

ಅದನ್ನು ಕೇಳಿದ ಬೇಡನಿಗೆ ಅವರ ಮಾತನ್ನು ಪರೀಕ್ಷಿಸುವ ಮನಸ್ಸಾಗಿ ಅವರನ್ನು ಮರಕ್ಕೆ ಕಟ್ಟಿಹಾಕಿದನು.

ಸಮೀಪದಲ್ಲಿರುವ ತನ್ನ ಗುಡಿಸಲಿಗೆ ಹೋಗಿ ಹೆಂಡತಿ ಮಕ್ಕಳನ್ನು ತನಗೆ ಬರಲಿರುವ ಪಾಪವನ್ನು ನೀವೂ ಸಹ ಹಂಚಿಕೊಳ್ಳುವಿರೆ  ಎಂದಾಗ ಅವರು ನಿನಗೆ ಬರುವ ಪಾಪದಲ್ಲಿ ನಾವು ಭಾಗಿಗಳಾಗುವುದಿಲ್ಲ. ಎಂದರು,ಅದೇ ಮಾತು ಬೇಡನಿಗೆ ಮಾನಸಿಕ ಬದಲಾವಣೆಯನ್ನು ತಂದಿತು.

ಮಹಾತ್ಮರೊಡನೆ  ಮಾತನಾಡಿದ ಬೇಡನ ಮನದಲ್ಲಿ ಬದಲಾವಣೆ ಉಂಟಾಗಿ ಆ ತಪಸ್ವಿಗಳನ್ನು ಬಿಡಿಸಿ ಅವರ  ಕಾಲಿಗೆರೆಗಿದನು. ತನ್ನ ತಪ್ಪಿಗೆ ನೊಂದುಕೊಂಡು ಬೇಡನಿಗೆ ಶ್ರೀರಾಮ ಮಂತ್ರವನ್ನು ಉಪದೇಶಿಸಿದ ಆ ತಪಸ್ವಿಗಳು “ರಾಮ”ಮಂತ್ರದಿಂದಲೇ ನಿನಗೆ ಯಶಸ್ಸು ದೊರೆಯುವುದು ಎಂದು ಹೇಳಿ ಹೋದರು.

ರಾಮ ಎನ್ನಲು ಕಷ್ಟವಾದರೂ “ಮರಾ”ಎಂದು ಮತ್ತೆ ಮತ್ತೆ ಹೇಳುವುದರಿಂದ ರಾಮ ನಾಮ ಸ್ಮರಣೆ ಮಾಡುತ್ತಲೇ ಹಲವಾರು ವರ್ಷಗಳವರೆಗೆ ಬೇಡನು ತಪ್ಪಸು ಮಾಡಿದನು,ಮುಂದೊಮ್ಮೆ ನಾರದ ಮಹರ್ಷಿಗಳು ಆ ದಾರಿಯಲ್ಲಿ ಬಂದವರು ಹುತ್ತದೊಳಗಿನಿಂದ ರಾಮನಾಮ ಸ್ಮರಣೆಯನ್ನು ಕೇಳಿ ಬೇಡನನ್ನು ಎಚ್ಚರಿಸಿದರು. ಸಂಸ್ಕೃತದಲ್ಲಿ  ಹುತ್ತಕ್ಕೆ ‘ ವಾಲ್ಮೀಕಿ’ಎನ್ನುವರು. ಅದುದರಿಂದಾಗಿ ಬೇಡನಿಗೆ ವಾಲ್ಮೀಕಿ ಎಂಬ ಹೆಸರು ಬಂದಿತು.

ನಾರದ ಮಹರ್ಷಿಗಳು ಶ್ರೀ ರಾಮನ ದಿವ್ಯ ಚರಿತ್ರೆಯನ್ನು ವಾಲ್ಮೀಕಿಗೆ ತಿಳಿಸಿದರು.ಅಂದಿನಿಂದ ವಾಲ್ಮೀಕಿ ಮಹರ್ಷಿಗಳು ತಮಸಾ ನದಿಯ ತೀರದಲ್ಲಿ ಆಶ್ರಮ ಮಾಡಿಕೊಂಡಿರುತ್ತಿದ್ದರು.

ಹೀಗಿರುವಾಗ ಒಂದು ದಿನ ತಮಸಾ ನದಿಯ ತೀರದಲ್ಲಿ ಶಿಷ್ಯನಾದ ಭಾರದ್ವಜನೊಂದಿಗೆ ಹೋಗುತ್ತಿರುವಾಗ ಪ್ರೀತಿಯಿಂದ ಇರುವ ಎರಡು ಕ್ರೌoಚ ಪಕ್ಷಿಗಳಲ್ಲಿ ಒಂದಕ್ಕೆ ಬೇಡನ ಬಾಣವು ತಗುಲಿ ಅದು ಕೆಳಗೆ ಬಿದ್ದು ಸತ್ತಿತು. ಸ್ತ್ರಿ ಪಕ್ಷಿಯ ರೋಧನವನ್ನು ಕೇಳಿದ ಮಹರ್ಷಿಗಳ ಹೃದಯ ಕರಗಿತು. ಸುಂದರವಾದ ಪ್ರಕೃತಿಯ ಮಾಡಿಲಲ್ಲಿದ್ದ ಮಹರ್ಷಿಗಳ ದುಃಖ ಹೆಚ್ಚಾಯಿತು. ಪಕ್ಷಿಯ ಮೇಲೆ ಕರುಣೆ ಉಂಟಾಯಿತು. ಅವರು ಬೇಡನನ್ನು ಕುರಿತು ವಿಶಿಷ್ಟವಾದ  ಶ್ಲೋಕ  ರೂಪವಾದ ಪದ್ಯವನ್ನೇ ಹೇಳಿದರು.

ಮಾನಿಷಾದ ಪ್ರತಿಷ್ಠಾoತ್ವಂ ಅಗಮಃಶಾಶ್ವತೀಸಮಾ;

ಯಕ್ರೌಕಂಚ ಮಿಥುನಾದೇಕಂ ಅವಧೀಹ ಕಾಮಮೋಹಿತಂ

ಈ ರೀತಿಯಲ್ಲಿ “ ಎ ,ಬೇಡನೆ, ಪ್ರೀತಿಯಿಂದ ಇರುವ ಎರಡು ಕ್ರೌoಚ ಪಕ್ಷಿಗಳಲ್ಲಿ ಒಂದನ್ನು ಕೊಂದಿದ್ದೀಯ ಇದರಿಂದಾಗಿ ನೀನು ಅನೇಕ ಕಾಲದವರೆಗೆ ಒಳ್ಳೆಯದನ್ನು ಕಾಣುವುದಿಲ್ಲ”ಎಂದು ತಿಳಿಸಿದರು. ಅವರ ಮಾತು ಶಾಪದಂತೆ  ಬೇಡನ ಮೇಲೆ ಪರಿಣಾಮ ಬೀರಿತು.

ಆದರೆ ಆ ದಿನವಿಡೀ ಮಹರ್ಷಿಗಳ ಹೃದಯದಲ್ಲಿ ಕರುಣಾಜನಕ ದೃಶ್ಯವು ಪ್ರಭಾವ ಬೀರಿತು. ಮತ್ತೆ ತಮ್ಮ ಕಾರ್ಯಗಳನ್ನು ಮುಗಿಸಿ ಆಶ್ರಮಕ್ಕೆ ಬಂದರೂ ಆ ದಿನದಲ್ಲಿ ಮತ್ತೆ ಮತ್ತೆ ಪಕ್ಷಿ ಸತ್ತ ಘಟನೆ ಕಣ್ಣೆದುರಿಗೆ ಬರುತ್ತಿತ್ತು.

ಅದೇ ಸಮಯದಲ್ಲಿ ಚತುರ್ಮುಖ ಬ್ರಹ್ಮನು ವಾಲ್ಮೀಕಿ ಆಶ್ರಮಕ್ಕೆ ಬಂದನು.ಆಗ ವಾಲ್ಮೀಕಿ ಮಹರ್ಷಿಗಳು ಬ್ರಹ್ಮ ದೇವರಿಗೆ ಅತಿಥಿ ಸತ್ಕಾರ ಮಾಡಿ ಬ್ರಹ್ಮ ದೇವರ ಅನುಗ್ರಹ ಪಡೆದು ಹತ್ತಿರದಲ್ಲಿಯೇ ಕುಳಿತರು,ಆಗಲೂ ಅವರ ಮನ ಆ ದಿನದ ಘಟನೆಯಲ್ಲಿಯೇ ಮುಳುಗಿತ್ತು.

ಬ್ರಹ್ಮ ದೇವನು ಮಹರ್ಷಿಗೆ “ಮಹರ್ಷಿ”,ನಿನ್ನ ಮನಸಿನಲ್ಲಿ ಉಂಟಾದ ಭಾವನೆಗಳನ್ನು ತಿಳಿದಿದ್ದೇನೆ. ನೀನು ಬೇಡನಿಗೆ ಶಾಪ ಕೊಟ್ಟಿದು ಕಾವ್ಯ ರೂಪದಲ್ಲಿ ಬಂದಿದೆ.ನಿನ್ನ ಶೋಕವು ಶ್ಲೋಕವಾಗಿ ಬಂದಿದೆ.ಈ ಎಲ್ಲಾ ಕಾರ್ಯಗಳನ್ನು ನಾನು ತಿಳಿದಿದ್ದೇನೆ. ನೀನು ಈಗಾಗಲೇ ನಾರದ ಮಹರ್ಷಿಗಳಿಂದ ಶ್ರೀ ರಾಮನ ಚರಿತ್ರೆಯನ್ನು ತಿಳಿದಿದ್ದೀಯ. ಅದನ್ನೂ ನೀನು ಜಗತ್ ಕಲ್ಯಾಣಕ್ಕಾಗಿ ರಚಿಸು ,ನಿನಗೆ ಶ್ರೀ ರಾಮನ ಜೀವನದ ಎಲ್ಲ ಘಟನೆಗಳು ಸಹ ಪ್ರತ್ಯಕ್ಷ ಎನಿಸುವಂತೆ ಅನುಗ್ರಹಿಸುತ್ತೇನೆ” ಎಂದು ಹೇಳಿದರು.ಈ ಪವಿತ್ರ ಕಾವ್ಯಾವು ಶಾಶ್ವತವಾಗಿ ಎಲ್ಲರ ಪ್ರೀತಿಗೆ ಪಾತ್ರವಾಗಲಿ ಎಂದು ಹರಸಿದನು.

ಹೀಗೆ ನಾರಾದರಿಂದ ಕೇಳಿ ತಿಳಿದ ಶ್ರೀ ರಾಮಚಂದ್ರನ ದಿವ್ಯಕಥೆಯನ್ನು ಬ್ರಹ್ಮದೇವನ ದಿವ್ಯ ದೃಷ್ಟಿಯ ಪ್ರಭಾವದಿಂದ ಅರಿತ ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳ ರಾಮಾಯಣ ಕಾವ್ಯವನ್ನು ರಚಿಸಿದರು,ಶ್ರೀ ರಾಮ ಸೀತೆಯರ ದಿವ್ಯ ಚರಿತ್ರೆಯೊಂದಿಗೆ ಸಾಂದರ್ಭಿಕವಾಗಿ ಕೆಲವು ಕಥೆಗಳು ಸಹ ರಾಮಾಯಣದಲ್ಲಿ ಬಂದಿವೆ.

ಹೀಗೆ ವಾಲ್ಮೀಕಿಯಿಂದ ರಾಮಯಣವು ರಚನೆಯಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top