fbpx
ಧರ್ಮ

ಭಾರತದಲ್ಲಿ ನಡೆಯೋ ಮದುವೆಗಳ ಈ ಸಂಪ್ರದಾಯದ ಬಗ್ಗೆ ತಿಳ್ಕೊಂಡ್ರೆ ಶಾಕ್ ಆಗ್ತೀರಾ ! ನಿಮಗೆ ಗೊತ್ತಾ ಹುಡುಗಿಗೆ ನಾಯಿ ಜೊತೆ ಮದುವೆ ಮಾಡ್ತಾರಂತೆ !

ಸ್ತ್ರೀಯರು ಶ್ವಾನವನ್ನು ವಿವಾಹವಾದರೆ ಅದು ಅವರನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ. ಎನ್ನುವ ಹಲವು ಆಶ್ಚರ್ಯ ಹುಟ್ಟಿಸುವಂತಹ ಸಂಪ್ರದಾಯಗಳು ಭಾರತದಲ್ಲಿ ನೆಲೆಸಿವೆ..

 

 

ನಮ್ಮ ಭಾರತ ದೇಶದಲ್ಲಿ ಅತೀ ಜಾಣ್ಮೆಯಿಂದ ಕೆಲವು ಸಂಪ್ರದಾಯಗಳನ್ನು ಕುರುಡು ನಂಬಿಕೆಯಾಗಿ ಪಾಲಿಸುತ್ತಾ ಬಂದಿದ್ದಾರೆ .ಅವರು ಇವುಗಳನ್ನು ಹೇಗೆ ನಂಬುತ್ತಾರೆ ಎoದರೆ ಅವರು  ಅವರ ಜೀವನದಲ್ಲಿ ಬರುವ ಕೆಟ್ಟ ದುರಾದೃಷ್ಟವನ್ನು ತಡೆಯಲು ಈ ಮೂಢನಂಬಿಕೆಗಳನ್ನು ಪಾಲಿಸುತ್ತಾ ಬಂದಿದ್ದಾರೆ. ಇವುಗಳನ್ನು ಬಹಳ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಶನಿವಾರದ ದಿನ ಉಗುರುಗಳನ್ನು ಕತ್ತರಿಸುವುದು ಮತ್ತು ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವುದು ಮತ್ತು ಹಣೆಗೆ ಕಪ್ಪು ತಿಲಕವನ್ನು ಇಟ್ಟುಕೊಳ್ಳುವುದು ಇವು ಕೆಟ್ಟ ಕಣ್ಣಿನ ದೃಷ್ಟಿಯನ್ನು ತಡೆಯುತ್ತವೆ ಎಂದು ಹೇಳಲಾಗುತ್ತದೆ..

 

 

ಈ ಉಪಾಯಗಳು ಪ್ರಶಂಸೆಗೆ ಸಹ ಕಾರಣವಾಗಿದೆ. ಎಲ್ಲವೂ ಸರಾಗವಾಗಿ ನಡೆಯುತ್ತವೆ ಸರಿಯಾಗಿ ನಡೆಸಿಕೊಂಡು ಹೋಗಲಿಲ್ಲ ಎಂದರೆ……ಅವುಗಳನ್ನು ಸರಿಪಡಿಸಲು  ಇಲ್ಲಿ ಕೆಲವು ತಮಾಷೆಯಾಗಿರುವoತಹ ಮೂಢನಂಬಿಕೆಗಳನ್ನು ಭಾರತ ದೇಶದಲ್ಲಿ ವಾಸಿಸುವ ವಿವಿಧ ಭಾಗದ ಜನರು ಅವುಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಅವುಗಳನ್ನು  ಕೇಳಿಸಿಕೊಂಡರೆ ಅವು ನಮ್ಮ ಮನಸ್ಸನ್ನು ವಿಚಲಿತಗೊಳಿಸಿ ನಮ್ಮನ್ನು ಅಸ್ತವ್ಯಸ್ತಗೊಳಿಸುತ್ತದೆ.

  1. ಹಿಮಾಚಲ ಪ್ರದೇಶದಲ್ಲಿ ಹುಡುಗಿಯರು ಹೀಗೆ ಮದುವೆಯಾಗುತ್ತಾರೆ.

 

 

ಹಿಮಾಚಲ ಪ್ರದೇಶದ ಕಿನ್ನೂರ ಅತ್ಯಂತ ಸುಂದರವಾದ ವ್ಯವಸ್ಥಿತವಾದ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡಿ ಆನಂದದಿಂದ ಸಮಯ ಕಳೆಯಲು ಬಹಳ ಜನ ಇಷ್ಟಪಟ್ಟು ಬರುತ್ತಾರೆ.ಆದರೆ ಇಲ್ಲಿ ವಾಸಿಸುವ ಜನರು ಅಸಹಜವಾದ ಸಾಮಾನ್ಯವಲ್ಲದ ಸಂಪ್ರದಾಯಗಳನ್ನು ಪಾಲಿಸುತ್ತಾ ಅದರ ಸಂರಕ್ಷಣೆಯನ್ನು ಸಹ ನಿರ್ವಹಿಸುತ್ತಾ ಬಂದಿದ್ದಾರೆ. ಅದೇನೆಂದರೆ ಒಬ್ಬ ಹುಡುಗಿಯೂ ಮದುವೆಯಾಗುವ ಸಮಯದಲ್ಲಿ ಕೇವಲ ಒಬ್ಬ ಹುಡುಗನನ್ನು ಮಾತ್ರ ಮದುವೆಯಾಗುವಂತಿಲ್ಲ ಬದಲಾಗಿ ಹುಡುಗನ ಮನೆಯಲ್ಲಿ ಎಷ್ಟು ಜನ ಗಂಡಸರು ಇರುವವರು ಅವರೆಲ್ಲರನ್ನೂ ವಿವಾಹವಾಗಬೇಕು ಅದು ಇಲ್ಲಿನ ಸಂಪ್ರದಾಯವಾಗಿದೆ .

2.ಕಪ್ಪೆಗಳಿಗೆ ಮದುವೆ ಮಾಡಿಸುವ ಸಂಪ್ರದಾಯ.

 

 

ವರುಣದೇವ ಅಂದರೆ ಮಳೆಗಾಗಿ ಇಂದ್ರ ದೇವನನ್ನು ಪ್ರಸನ್ನ ಗೊಳಿಸಲು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಲಾಗುತ್ತದೆ . ಮಳೆಗಾಲದಲ್ಲಿ ಉತ್ತಮ ಮಳೆಗಾಗಿ ಈ ರೀತಿ ಭಾರತದ ಕೆಲವು ಭಾಗಗಳಲ್ಲಿ ವರುಣ ದೇವನನ್ನು ಪ್ರಾರ್ಥಿಸಲಾಗುತ್ತದೆ.

3.ಮಗಳ ಗಂಡ ಅಂದರೆ ಅಳಿಯ ಬಂದು ಹುಡುಗಿಯ ಮನೆಯಲ್ಲಿ ವಾಸಿಸಬೇಕು.

 

 

ಭಾರತದಲ್ಲಿ ಸಾಮಾನ್ಯವಾಗಿ ಒಂದು ಹುಡುಗಿ ಮದುವೆಯಾದ ನಂತರ ಹುಡುಗನ ಮನೆಯಲ್ಲಿಯೇ ನೆಲೆಸುತ್ತಾಳೆ. ಇದಕ್ಕೆ ಕನ್ಯಾದಾನ ಎಂದು ಸಹ ಕರೆಯಲಾಗುತ್ತದೆ. ಆದರೆ ಭಾರತದಲ್ಲಿಯೇ ಇರುವ ಒಂದು ರಾಜ್ಯ ಅದೇ ಮೇಘಾಲಯ ರಾಜ್ಯದಲ್ಲಿ ಮಾತ್ರ ವಿಭಿನ್ನವಾದ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದಾರೆ. ಅಲ್ಲಿ  ಒಂದು ಹುಡುಗಿ ಮದುವೆಯಾದ ನಂತರ ಅಲ್ಲಿನ ಸಂಪ್ರದಾಯದಂತೆ ಹುಡುಗನು ಬಂದು ಹುಡುಗಿಯ ಮನೆಯಲ್ಲಿ ನೆಲೆಸಬೇಕು. ಇದು ಅವರ ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿರುವ  ಸಂಪ್ರದಾಯವಾಗಿದೆ. ಅಂದರೆ ವರ ಬಂದು ವಧುವಿನ ಮನೆಯಲ್ಲಿಯೇ ನೆಲೆಸಬೇಕು.

4.ಇಲ್ಲಿ ಹುಡುಗಿಗೆ ನಾಯಿಯ ಜೊತೆ ವಿವಾಹ ಮಾಡಿಸಲಾಗುತ್ತದೆ.

 

ಭಾರತದ ಜಾರ್ಖಂಡ್ ರಾಜ್ಯದಲ್ಲಿ ವಾಸಿಸುವ ಹುಡುಗಿಯರಿಗೆ ನಾಯಿಯ ಜೊತೆ ವಿವಾಹ ಮಾಡಿಸಲಾಗುತ್ತದೆ. ಹುಡುಗಿಯರನ್ನು ಭೂತ ಪ್ರೇತ ಗಳಂತಹ ದುಷ್ಟಶಕ್ತಿಗಳಿಂದ ರಕ್ಷಿಸಲು ಮತ್ತು ನಾಯಿಗಿರುವ ಅಲೌಕಿಕ ಶಕ್ತಿಯಿಂದ ನಾಯಿಯ ಜೊತೆ ವಿವಾಹ ಮಾಡಿಸಲಾಗುತ್ತದೆ. ಹೀಗೆ ವಿವಾಹ ಮಾಡಿಸಿದರೆ ನಾಯಿಯು ಅವರ ಸುತ್ತ ಇರುವ ಕೆಟ್ಟ ನಕಾರಾತ್ಮಕ ದುಷ್ಟಶಕ್ತಿಯನ್ನು ದೂರ ಓಡಿಸುತ್ತದೆ ಎಂದು ಅವರ ನಂಬಿಕೆಯಾಗಿದೆ .

5.ಪುರುಷರು ದನ ಮತ್ತು  ಹಸುಗಳ ಕಾಲಿನ ಕೆಳಗೆ ನುಸುಳಿ ಬರಬೇಕು .

 

 

ಇದು ಅತಿ ಭಯಾನಕ ಮತ್ತು ಭಯಂಕರ ಸಂಪ್ರದಾಯವಾಗಿದ್ದು. ಇದರಲ್ಲಿ ಪುರುಷರು ದನ ಮತ್ತು ಹಸುಗಳ ಕಾಲಿನ ಕೆಳಗೆ ನುಗ್ಗಿ ದಾಟಿಕೊಂಡು ಬರಬೇಕು. ಒಂದು ವೇಳೆ ಅವು ಹಾನಿ ಮಾಡಿದರೂ ಸಹ ದಾಟಿಕೊಂಡು ಬರಲೇಬೇಕು. ಈ ಸಂಪ್ರದಾಯವು ಮಧ್ಯಪ್ರದೇಶದಲ್ಲಿ, ಗೋವರ್ಧನ ಪೂಜೆ ಮಾಡುವ ಸಮಯದಲ್ಲಿ ಆಚರಿಸಲಾಗುತ್ತದೆ. ಇಲ್ಲಿ ವಾಸಿಸುವ ಜನರ ನಂಬಿಕೆಯ ಪ್ರಕಾರ ಈ ರೀತಿ ಮಾಡಿದರೆ ಅವರ ಮನಸ್ಸಿನಲ್ಲಿರುವ ಆಸೆಗಳು ಪೂರ್ಣವಾಗುವವು ಎಂದು ಹೇಳಲಾಗುತ್ತದೆ .

6.ಮದುವೆಗೂ ಮುನ್ನ ಕೆಲವು ನಿಲುಚವುಗಳು.

 

 

ರಾಜಸ್ಥಾನದ, ಜೋಧ್ ಪುರ್ ನಲ್ಲಿರುವ ಮದುವೆಯಾಗದೇ ಇರುವ ಹುಡುಗರನ್ನು ಅಲ್ಲಿರುವ ಮಹಿಳೆಯರು  ದೊಣ್ಣೆಯಿಂದ ಹೊಡೆದು ಹಿಂಸಿಸುತ್ತಾರೆ. ಆಗ ಅದನ್ನು ಸಹಿಸಿಕೊಂಡರೆ ಅವರು ಮದುವೆಯಾಗುವುದಕ್ಕೆ ಅರ್ಹರು ಎಂದು ದೃಢೀಕರಿಸಲು ಹೀಗೆ ಮಾಡಲಾಗುತ್ತದೆ. ಇಲ್ಲಿ ಪುರುಷರು ಈ ಹಿಂಸೆಯನ್ನು ಸಹಿಸಿಕೊಂಡರೆ ಇದು ಅವರು ಬೇಗನೇ ಶೀಘ್ರದಲ್ಲಿ ಮದುವೆಯಾಗುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

7. ಹಾವುಗಳಿಗೆ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ.

 

 

ನಾಗ ಪಂಚಮಿ ಹಬ್ಬದ ದಿನ ಭಕ್ತರು ನಾಗರಾಜನನ್ನು ಪೂಜಿಸುತ್ತಾರೆ . ನಾಗರಾಜ ಎಂದರೆ ಹಾವುಗಳ ದೇವ ಹಾವುಗಳ ರಾಜ. ಹಾಲನ್ನು ಅದಕ್ಕೆ ಎರೆಯುವ ಮೂಲಕ ಅದಕ್ಕೆ  ಹಾಲಿನಿಂದ ಸ್ನಾನ ಮಾಡಿಸುವ ಮೂಲಕ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಾರೆ .

8.ಮಕ್ಕಳನ್ನು  ಕುತ್ತಿಗೆಯವರೆಗೂ ಮಣ್ಣಿನಲ್ಲಿ ಮುಚ್ಚಲಾಗುವುದು.

 

ಗ್ರಹಣದ ದಿನ ಅಂಗವೈಕಲ್ಯ ಇರುವ ಅಂಧ ಮಕ್ಕಳನ್ನು ಮಣ್ಣಿನಲ್ಲಿ ಹೂತು ಹಾಕಲಾಗುತ್ತದೆ . ಅಂದರೆ ಕುತ್ತಿಗೆಯವರೆಗೂ ಮಣ್ಣಿನಲ್ಲಿ ಭೂಮಿಯಲ್ಲಿ ಗುಂಡಿ ತೆಗೆದು ಮುಚ್ಚಲಾಗುವುದು ತಲೆಯ ಭಾಗವನ್ನು ಮಾತ್ರ ಮೇಲೆ ಕಾಣಿಸುವಂತೆ ಉಳಿಸಲಾಗುವುದು.  ನಮ್ಮ ಕರ್ನಾಟಕ ರಾಜ್ಯದಲ್ಲಿಯೇ ಇರುವ ಗುಲ್ಬರ್ಗ ಜಿಲ್ಲೆಯಲ್ಲಿರುವ ಮೂಮಿನಪುರ್ ದ ಸಾಥ್ ಗುಂಬಜ್  ಎನ್ನುವ ಸ್ಥಳದಲ್ಲಿ ಈ ರೀತಿ ಮಕ್ಕಳನ್ನು ಮಾನಸಿಕ ಮತ್ತು ದೈಹಿಕ ಅಂಗ ವೈಕಲ್ಯತೆಯಿಂದ ಗುಣಪಡಿಸುವುದಕ್ಕೆ ಸಹಾಯ ಮಾಡುವುದು ಈ ಸಂಪ್ರದಾಯ ಎಂದು ಆಚರಿಸಿಕೊಂಡು ಬಂದಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top