fbpx
ಮನೋರಂಜನೆ

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥ ” ಲೈನ್ ಕ್ಲಿಯರ್ ” ಆದ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು ?

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥ ” ಲೈನ್ ಕ್ಲಿಯರ್ ” ಆದ ಬಗ್ಗೆ ಧ್ರುವ ಸರ್ಜಾ

ಹೇಳಿದ್ದೇನು ?

 

 

ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥದ ಬಗ್ಗೆ ತಮ್ಮ ಧ್ರುವ ಸರ್ಜಾ ಹೀಗೆ ಹೇಳಿದರು

 

 

ನನಗೆ ತುಂಬಾ ಖುಷಿಯಾಗ್ತಿದೆ , ಅಣ್ಣ ಹಾಗು ಮೇಘನಾ ಅವರ ಮದುವೆ ವಿಷಯ ನನಗೆ ಹಾಗು ಮನೆಯವರಿಗೆ ತುಂಬಾ ಸಂತೋಷ ತಂದಿದೆ

ನಿಮ್ಮೆಲ್ಲರ ಆಶೀರ್ವಾದ ಆ ಜೋಡಿಯ ಮೇಲೆ ಸದಾ ಇರಬೇಕು , ಅಣ್ಣನ ಈ ಮದುವೆ ಕಾರ್ಯ ಕ್ರಮ ಮನೆಯಲ್ಲಿ 29 ವರ್ಷಗಳ ನಂತರ ನಡೆಯುತ್ತಿರುವ ಶುಭ ಕಾರ್ಯ

ನಾವು ಮನೆಯಲ್ಲಿ ಅಣ್ಣ ತಮ್ಮ ಅನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು , ಎಲ್ಲರಿಗು ಗೊತ್ತಾಗುವ ಮುಂಚೆಯೇ ನನಗೆ ತಿಳಿದಿತ್ತು , ನಾನು ಒಳ್ಳೆ ಕೆಲಸ ಎಂದು ಅವನಿಗೆ ಹೇಳಿದ್ದೆ .

ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನದ ಆಯ್ಕೆಗಳಿರುತ್ತವೆ , ಅವರ ಆಯ್ಕೆ ಅದ್ಭುತವಾಗಿದೆ ಇಬ್ಬರು ಒಳ್ಳೆಯ ಜೋಡಿ , ಮೇಘನಾ ಒಳ್ಳೆಯ ಹುಡುಗಿ ಅದರಲ್ಲಿ ಎರಡು ಮಾತಿಲ್ಲ.

ಧ್ರುವ ಸರ್ಜಾ ಲೈನ್ ಕ್ಲಿಯರ್ !

 

 

ಆ ರೀತಿ ಏನು ಇಲ್ಲ , ಅವನ ಮದುವೆ ಆಗುವ ವರೆಗೂ ಕಾಯ್ದು ಲೈನ್ ಕ್ಲಿಯರ್ ಮಾಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ , ಅಣ್ಣ ಮೊದಲೇ ಹೇಳಿದ್ದ ಬೇಕಾದರೆ ನೀನೆ ಮದುವೆ ಮಾಡಿಕೊ ಅಂತಾ !

ನಿಮ್ಮ ಮದುವೆ ಯಾವಾಗ ?

 

 

ಇನ್ನು ಸಾಕಷ್ಟು ಬೆಳೆಯ ಬೇಕು ಆನಂತರವಷ್ಟೇ ಮದುವೆ , ಸಾಕಷ್ಟು ಸಿನಿಮಾಗಳು ಮಾಡಬೇಕು , ನಾನು ಮದುವೆ ಆಗುವಾಗ ಎಲ್ಲರನ್ನು ಕರೆದು ಮದುವೆ ಆಗುತ್ತೇನೆ

ಎಂದು ಹೇಳಿ ತಮ್ಮ ಮಾತು ಮುಗಿಸಿದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top