fbpx
ಮನೋರಂಜನೆ

ಅನ್ಕೊಂಡೆ ಗುರೂಜಿ “ಜಯಶ್ರೀನಿವಾಸನ್”ರವರನ್ನು ಕಿಚ್ಚ ಟ್ರೋಲ್ ಮಾಡಿದ್ದನ್ನು ನೋಡುದ್ರೆ ಬಿದ್ದು ಬಿದ್ದು ನಗ್ತೀರಾ..

ಅನ್ಕೊಂಡೆ ಗುರೂಜಿ “ಜಯಶ್ರೀನಿವಾಸನ್”ರವರನ್ನು ಕಿಚ್ಚ ಟ್ರೋಲ್ ಮಾಡಿದ್ದನ್ನು ನೋಡುದ್ರೆ ಬಿದ್ದು ಬಿದ್ದು ನಗ್ತೀರಾ..

 

 

ಅಕ್ಟೋಬರ್ 15 ರಿಂದ ಆರಂಭವಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದ ಮತ್ತು ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 5ನೇ ಸೀಸನ್ ನಲ್ಲಿ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು..ಈಗ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ಕೂಡ ಆಗಿ ಜನಸಾಮಾನ್ಯ ಕ್ಯಾಟಗೆರಿಯಲ್ಲಿ ಸ್ಥಾನ ಪಡೆದಿದ್ದ ಸುಮಾ ರಾಜಕುಮಾರ್ ಎಲಿಮಿನೇಷನ್ ಆಗಿದ್ದಾರೆ..

 

 

ಇಂದು(ಶನಿವಾರ) ನಡೆದ ವಾರದ ಕತೆ ಕಿಚ್ಚನ ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಉರ್ಫ್ ಅನ್ಕೊಂಡೆ ಗುರೂಜಿಯನ್ನು ಸಕ್ಕತ್ತಾಗಿ ಟ್ರೊಲ್ ಮಾಡಿದ್ದಾರೆ.. ಏನೇ ಹೇಳಿದರೂ ನಾನ್ ಅನ್ಕೊಂಡೆ ನಾನ್ ಅನ್ಕೊಂಡೆ ಎಂದು ಹೇಳುತ್ತಿದ್ದ ಜಯಶ್ರೀನಿವಾಸನ್ ಅವರು ಕಳೆದ ಒಂದು ವಾರದಿಂದ ಶೋಷಿಯಲ್ ಮೀಡಿಯಾಗಳಲ್ಲಿ ಯದ್ವಾ ತದ್ವಾ ಟ್ರೋಲ್ ಆಗಿದ್ದರು..ಹಸಿದು ಕಾಯುತ್ತಿದ್ದ ಟ್ರೊಲ್ ಪೇಜ್ ಗಳ ಅಡ್ಮಿನ್ ಗಳಿಗಂತೂ ಭರ್ಜರಿ ಆಹಾರವಾಗಿ ಪರಣಮಿಸಿದ್ದಾರೆ..

 

ಟ್ರೊಲ್ ಪೇಜ್ ಗಳ ಅಡ್ಮಿನ್ ಗಳಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಅನ್ಕೊಂಡೆ ಗುರೂಜಿಯನ್ನು ಸಕತ್ ಟ್ರೊಲ್ ಮಾಡಿದ್ದಾರೆ.. ಗೆ ಒಂದು ವಾರದಲ್ಲಿ ಎಷ್ಟು ದಿನಗಳಿವೆ ಎಂದು ಕೇಳಿದಾಗ ಜಯಶ್ರೀನಿವಾಸನ್ ಏಳು ದಿನಗಳು ಎಂದು ಹೇಳಿದ್ದರು..ಆಗ ಸುದೀಪ್ ವಾರಕ್ಕೆ ಮತ್ತೊಂದು ದಿನ ಸೇರಿಕೊಂಡಿದೆ ಈಗ ವಾರದಲ್ಲಿ ಎಂಟು ದಿನಗಳಿವೆ ಅವು “ಸಂಡೆ,ಮಂಡೆ,ಟ್ಯೂಸ್ಡೇ,ವೆನ್ಸ್ ಡೇ,ಥರ್ಸ್ ಡೇ,ಫ್ರೈಡೆ,,ಸ್ಯಾಟರ್ಡೇ ಮತ್ತು ಅನ್ಕೊಂಡೆ “ಎಂದು ಹೇಳಿ ಗುರೂಜಿಯನ್ನು ಗೇಲಿ ಮಾಡಿದರು.

 

 

ಮಾತು ಮುಂದುವರಿಸಿದ ಕಿಚ್ಚ “ನಿಮಗೆ ಹೇಗ್ ಎಲ್ಲಾ ವಿಚಾರಗಳು ಗೊತ್ತಾಗುತ್ತೆ ಅಂತ ತುಂಬಾ ಚರ್ಚೆಯಾಗುತ್ತಿದೆ,, ನಿಮ್ಮ ಅನ್ಕೊಂಡೆ ಅನ್ನೋ ಪದ ಸಕತ್ ಟ್ರೊಲ್ ಆಗಿದೆ, ತುಂಬಾ ಪಾಪ್ಯೂಲರ್ ಆಗೋಗಿದೆ” ಎಂದು ಹೇಳಿದರು..

 

“ಜಯಶ್ರೀನಿವಾಸನ್”ರವರನ್ನು ಕಿಚ್ಚ ಟ್ರೋಲ್ ಮಾಡಿದ ವಿಡಿಯೋವನ್ನು ಇಲ್ಲಿ ನೋಡಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top