fbpx
ಮನೋರಂಜನೆ

ಮುಗಿದೇ ಹೋಯ್ತು ಎಲ್ಲರ ಮೆಚ್ಚಿನ ಮಜಾ ಟಾಕೀಸ್…ಮುಂದೇನು..?

ಮುಗಿದೇ ಹೋಯ್ತು ಎಲ್ಲರ ಮೆಚ್ಚಿನ ಮಜಾ ಟಾಕೀಸ್…ಮುಂದೇನು..?

 

 

ನಟ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಕಾಮಿಡಿ ಶೋ ಮಜಾ ಟಾಕೀಸ್ ತೆರೆ ಎಳೆದಿದ್ದಾರೆ..ಇಂದು ಮಜಾ ಟಾಕೀಸ್ ನ ಕೊನೆಯ ಎಪಿಸೋಡ್ ಪ್ರಸಾರವಾಗಲಿದ್ದು ಕನ್ನಡ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.

 

 

 

ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಶೋಗಳಲ್ಲಿ ‘ಮಜಾ ಟಾಕೀಸ್‌’ ಕೂಡ ಒಂದು. ಅಪರ್ಣಾ, ವಿ.ಮನೋಹರ್‌ ಹಾಗೂ ಇಂದ್ರಜಿಲ್‌ ಲಂಕೇಶ್‌,ಶ್ವೇತಾ ಚೆಂಗಪ್ಪಾ, ದಯಾನಂದ್‌, ಪವನ್‌, ವಂದನ, ರೇಮೋ, ಮಂಡ್ಯ ರಮೇಶ್‌ ಮತ್ತು ಕುರಿ ಪ್ರತಾಪ್‌ ಅವರನ್ನೊಳಗೊಂಡ ಈ ಅಪರೂಪದ ಕಾರ್ಯಕ್ರಮ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು.

 

 

ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದ್ದು ಆ ಸಂಚಿಕೆ ಇಂದು ಸಂಜೆ ಪ್ರಸಾರವಾಗಲಿದೆ..ಇನ್ನೂ ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ ಬಗ್ಗೆ ಕಾರ್ಯಕ್ರಮದ ರೂವಾರಿ ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top