fbpx
ಮನೋರಂಜನೆ

GST ವಿರುದ್ಧ ಧ್ವನಿ ಎತ್ತಿ ಜನಸಾಮಾನ್ಯರ ಪರ ನಿಂತ ಕಿಚ್ಚ ಸುದೀಪ್..!

GST ವಿರುದ್ಧ ಧ್ವನಿ ಎತ್ತಿ ಜನಸಾಮಾನ್ಯರ ಪರ ನಿಂತ ಕಿಚ್ಚ ಸುದೀಪ್..!

 

 

GST ತೆರಿಗೆ ನೀತಿಯಿಂದ ಬಳಲಿ ಬೆಂಡಾಗಿ ಹೋಗಿರುವ ದೇಶದ ಜನ ಸಾಮಾನ್ಯರ ಪರವಾಗಿ ಸ್ಯಾಂಡಲ್ ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬ್ಯಾಟ್ ಬೀಸಿದ್ದಾರೆ.. ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ GST ತೆರಿಗೆ ನೀತಿಯಿಂದ ಜನಸಾಮಾನ್ಯರ ಮೇಲೆ ಆಗಿರುವ ಪರಿಣಾಮದ ಬಗ್ಗೆ ತಮ್ಮ ಅಭಿಪ್ರವನ್ನು ಹೇಳಿಕೊಂಡಿದ್ದಾರೆ.

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ. “ಪ್ರತಿಯೊಬ್ಬರೂ ದೇಶದಲ್ಲಿ ಏನೋ ಹೊಸದಾಗುತ್ತೆ ಅಂತ ಅನ್ಕೊಂಡ್ರು ಅಂತದ್ದು ಏನೂ ಆಗ್ತಿಲ್ಲಾ,ಎಲ್ಲಾ ಜಾಸ್ತಿ ಆಗ್ತಿದೆ ಇದನ್ನ ಪ್ರಶ್ನೆ ಮಾಡಕ್ಕೆ ಯಾರ ಕೈನಲ್ಲೂ ಆಗ್ತಿಲ್ಲಾ,, ನನ್ನ ಪ್ರಕಾರ ಹೀಗೆ ಆಗ್ತಿದ್ರೆ ಎಲ್ಲರಿಗೂ ಕಷ್ಟ ಆಗುತ್ತೆ”

 

 

“ನನ್ನ ದೇಶ ಒಂದು ಸುಂದರವಾದ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ನಾವು ಎಲ್ಲವನ್ನೂ ಇಲ್ಲಿ ಹೊಂದಿದ್ದೇವೆ ಎಲ್ಲಾದಕ್ಕಿಂತ ಹೆಚ್ಚಿನದಾಗಿ ಒಳ್ಳೆ ಭಾವನೆಗಳಿವೆ ನಮ್ಮ ದೇಶದಲ್ಲಿ ಆದರೆ ವ್ಯವಸ್ಥೆಗಳನ್ನು ನೋಡಿದರೆ ಬೇಜಾರಾಗುತ್ತೆ.. ಒಬ್ಬ ಕಾಮನ್ ಮನುಷ್ಯ ಹೋಟೆಲ್ ನಲ್ಲಿ ಊಟ ಮಾಡಕ್ಕೆ ಹೋದ್ರೆ ಅಲ್ಲಿ ಹಾಕೋ GST ಯಿಂದ ಅವ್ರು ಹೋಟಲ್ ನಲ್ಲಿ ಊಟಮಾಡೋಕೆ ಹೆದರುತ್ತಾರೆ ”

 

 

“ಸರ್ಕಾರಗಳು ಜನರನ್ನ ಪ್ರೀತಿಸುತ್ತಿದೆ ಅಂತ ಅನ್ನಿಸುತ್ತಿಲ್ಲ, ಜನ ಪ್ರತಿಭಾರಿ ಒಂದು ಭರವಸೆ ಇಟ್ಕೊಂಡು ವೋಟ್ ಮಾಡ್ತಿದ್ದಾರೆ ಆದರೆ ಎಲ್ಲೂ ವ್ಯವಸ್ಥೆ ಸರಿ ಆಗ್ತಿಲ್ಲ,,ನಮ್ಮಿಂದ ಟ್ಯಾಕ್ಸ್ ತಗೋತಾರೆ ಆದ್ರೆ ಅದರಿಂದ ಸಿಗೋ ಸವಲತ್ತು ನಮಗೆ ಸಿಗುತ್ತಾ ಇಲ್ಲ., ವ್ಯವಸ್ಥೆ ವಿರುದ್ಧ ಯಾರಾದ್ರೂ ಮಾತನಾಡುದ್ರೆ ಮನೆ ಮೇಲ್ ರೇಡ್ ಮಾಡುಸ್ತಾರೆ ಅನ್ನೋ ಭಯವೊಂದು ಇತ್ತೀಚಿಗೆ ಸ್ಟಾರ್ಟ್ ಆಗಿದೆ.”

 

 

“ಒಂದು ದೇಶ ಒಂದು ಟ್ಯಾಕ್ಸ್ ಅನ್ನೋ ಕಲ್ಪನೆ ಏನೋ ಸರಿ ಆದರೆ ಒಬ್ಬ ಮನುಷ್ಯ ತಾನು ದುಡಿದ ದುಡ್ಡಲ್ಲಿ ಒಮ್ಮೆ ಮಾತ್ರ ಟ್ಯಾಕ್ಸ್ ಕಟ್ಟುತ್ತಾನಾ,, ಒಬ್ಬ ವ್ಯಕ್ತಿ ತಾನು ದುಡಿದ ನೂರು ರುಪಾಯಲ್ಲಿ ನಲವತ್ತು ಟ್ಯಾಕ್ಸ್ ಅಂತ ಕಟ್ಟಿದ ಮೇಲೂ ಉಳಿದ ಹಣದಲ್ಲಿ ನೆಮ್ಮದಿಯಿಂದ ಇರೋಕೆ ಆಗ್ತಿಲ್ಲಾ ಉಳಿದ ಆ ದುಡ್ಡಲ್ಲಿ ಮತ್ತೆ GST ಮೂಲಕ ಮತ್ತೆ ಟ್ಯಾಕ್ಸ್ ಕಟ್ಟೋ ಪರಿಸ್ಥಿತಿ ಬಂದಿದೆ..ಜನ ಸಾಮಾನ್ಯನ ಕಷ್ಟಗಳನ್ನ ಕೇಳೋಕೆ ಯಾರು ಇಲ್ಲದಂತಾಗಿದೆ ”

 

 

“ಒಬ್ಬ ಬಡವ ಕಷ್ಟಪಟ್ಟು ದುಡಿದ ನೂರು ರೂಪಾಯಿಯಲ್ಲಿ ನಲವತ್ತು ರೂಪಾಯಿ ಟ್ಯಾಕ್ಸ್ ನಲ್ಲಿ ಹೋಯ್ತು ಅಂತ ತಿಳ್ಕೊಂಡ್ರೂ ಉಳಿದ ಅರವತ್ತು ರೂಪಾಯಿ ಅವನದ್ದಾಗಲ್ಲ ಆ ಅರವತ್ತು ರುಪಾಯಲ್ಲಿ ಹೋಟೆಲ್ ಊಟ ಮಾಡೋಕೆ ಹೋದ್ರೆ ಅಲ್ಲೂ ಕಟ್ಟಬೇಕು, ಮನೆಗೆ ಏನಾದ್ರೂ ತಗೋಬೇಕು ಅಂದ್ರೆ ಅಲ್ಲೂ ಕಟ್ಟಬೇಕು. ಹೀಗಾದರೆ ಬಡವರು ದುಡಿತಾ ಇರೋದೇ ಸರ್ಕಾರಕ್ಕೆ ದಾನ ಮಾಡೋಕೆ,, ದುಡಿದ ಬಹುತೇಕ ಹಣವನ್ನು ಜನರೇ ಟ್ಯಾಕ್ಸ್ ಕಟ್ಟಿದರೆ ಸರ್ಕಾರ ಇರೋದು ಯಾಕೆ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top