ಅಣ್ಣ ಚಿರು ಮದುವೆ ಫಿಕ್ಸ್ ಆಯ್ತು ಮುಂದೆ ನಿಮ್ಮ ಮದುವೆ ಕಥೆ ಏನು ? ಧ್ರುವ
ಸರ್ಜಾ ಉತ್ತರ ಕೊಟ್ಟಿದ್ದು ಹೀಗೆ
ಅಣ್ಣ ಚಿರು ಸರ್ಜಾ ನಿಶ್ಚಿತಾರ್ಥದ ಬಗ್ಗೆ ತಮ್ಮ ಧ್ರುವ ಸರ್ಜಾ ಹೀಗೆ ಹೇಳಿದರು
ನನಗೆ ತುಂಬಾ ಖುಷಿಯಾಗ್ತಿದೆ , ಅಣ್ಣ ಹಾಗು ಮೇಘನಾ ಅವರ ಮದುವೆ ವಿಷಯ ನನಗೆ ಹಾಗು ಮನೆಯವರಿಗೆ ತುಂಬಾ ಸಂತೋಷ ತಂದಿದೆ
ನಿಮ್ಮೆಲ್ಲರ ಆಶೀರ್ವಾದ ಆ ಜೋಡಿಯ ಮೇಲೆ ಸದಾ ಇರಬೇಕು , ಅಣ್ಣನ ಈ ಮದುವೆ ಕಾರ್ಯ ಕ್ರಮ ಮನೆಯಲ್ಲಿ 29 ವರ್ಷಗಳ ನಂತರ ನಡೆಯುತ್ತಿರುವ ಶುಭ ಕಾರ್ಯ
ನಾವು ಮನೆಯಲ್ಲಿ ಅಣ್ಣ ತಮ್ಮ ಅನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು , ಎಲ್ಲರಿಗು ಗೊತ್ತಾಗುವ ಮುಂಚೆಯೇ ನನಗೆ ತಿಳಿದಿತ್ತು , ನಾನು ಒಳ್ಳೆ ಕೆಲಸ ಎಂದು ಅವನಿಗೆ ಹೇಳಿದ್ದೆ .
ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನದ ಆಯ್ಕೆಗಳಿರುತ್ತವೆ , ಅವರ ಆಯ್ಕೆ ಅದ್ಭುತವಾಗಿದೆ ಇಬ್ಬರು ಒಳ್ಳೆಯ ಜೋಡಿ , ಮೇಘನಾ ಒಳ್ಳೆಯ ಹುಡುಗಿ ಅದರಲ್ಲಿ ಎರಡು ಮಾತಿಲ್ಲ.
ಧ್ರುವ ಸರ್ಜಾ ಲೈನ್ ಕ್ಲಿಯರ್ !
ಆ ರೀತಿ ಏನು ಇಲ್ಲ , ಅವನ ಮದುವೆ ಆಗುವ ವರೆಗೂ ಕಾಯ್ದು ಲೈನ್ ಕ್ಲಿಯರ್ ಮಾಡಿಸಿಕೊಳ್ಳುವ ಅವಶ್ಯಕತೆ ಇರಲಿಲ್ಲ , ಅಣ್ಣ ಮೊದಲೇ ಹೇಳಿದ್ದ ಬೇಕಾದರೆ ನೀನೆ ಮದುವೆ ಮಾಡಿಕೊ ಅಂತಾ !
ನಿಮ್ಮ ಮದುವೆ ಯಾವಾಗ ?
ಇನ್ನು ಸಾಕಷ್ಟು ಬೆಳೆಯ ಬೇಕು ಆನಂತರವಷ್ಟೇ ಮದುವೆ , ಸಾಕಷ್ಟು ಸಿನಿಮಾಗಳು ಮಾಡಬೇಕು , ನಾನು ಮದುವೆ ಆಗುವಾಗ ಎಲ್ಲರನ್ನು ಕರೆದು ಮದುವೆ ಆಗುತ್ತೇನೆ
ಎಂದು ಹೇಳಿ ತಮ್ಮ ಮಾತು ಮುಗಿಸಿದರು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
